
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಯಾರಿಗೆ ಗೊತ್ತಿಲ್ಲ? ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಸಕ್ಸಸ್ ಪಡೆದು 'ಸ್ಯಾಂಡಲ್‌ವುಡ್ ಕ್ರಶ್ (Sandalwood Crush)'ಹೆಸರಿನ ಮೂಲಕ ತೆಲುಗಿಗೂ ಕಾಲಿಟ್ಟು ಅಲ್ಲೂ ಸಕ್ಸಸ್ ಪಡೆದ ನಟಿ. ಬಳಿಕ, ನಟಿ ರಶ್ಮಿಕಾ ಮಂದಣ್ಣ ತಮಿಳು, ಮಲಯಾಳಂ ಹಾಗೂ ಬಾಲಿವುಡ್‌ಗೆ ಕಾಲಿಟ್ಟು ಹೋದಲ್ಲೆಲ್ಲಾ ಯಶಸ್ಸು ಪಡೆದುಕೊಂಡು ಇದೀಗ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದಾರೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ತಮಗೆ ಕೇಳಿದ ಪ್ರಶ್ನೆಗೆ 'ನನ್ನ ಹೆಸರಿನ ಅರ್ಥ ಬ್ರೈಟ್ಸ್‌ನೆಸ್. ಅಂದರೆ, ಸೂರ್ಯನ ಕೇಂದ್ರ ಭಾಗ, ಸೂರ್ಯನ ಬೆಳಕಿನ ಕೇಂದ್ರ ಭಾಗವೇ ರಶ್ಮಿಕಾ ಎಂದು ನನ್ನ ತಂದೆ ನನಗೆ ಹೇಳಿದ್ದಾರೆ. ನನಗೆ ನಿಜವಾಗಿಯೂ ಗೊತ್ತಿಲ್ಲ, ಅದು ಸರಿಯೋ ತಪ್ಪೋ ಎಂದು. ಏಕೆಂದರೆ, ನಮ್ಮಪ್ಪ ಅವರದೇ ಆದ ಯೋಚನೆಯಲ್ಲಿ ನನ್ನ ಹೆಸರಿನ ಅರ್ಥ ಹೇಳಿದ್ದಿರಬಹುದು. ನನ್ನಪ್ಪ ಹೇಳಿದ ಪ್ರಕಾರ ನನ್ನ ಹೆಸರಿನ ಅರ್ಥ ಸೂರ್ಯನ ಕೋರ್' ಎಂದಿದ್ದಾರೆ. ಆದರೆ, ರಶ್ಮಿ ಎಂದರೆ ಕಿರಣ, ಸೂರ್ಯನ ಕಿರಣ. ಅದು ಸೂರ್ಯನ ಕೇಂದ್ರವಲ್ಲ, ಸೂರ್ಯನ ಸುತ್ತಲೂ ಮೂಡುವ ಕಿರಣದ ಪ್ರಭೆ ಎನ್ನಬಹುದು.
'ವೋಟ್ ನಮ್ಮ ಪವರ್' ರ್‍ಯಾಪ್ ಸಾಂಗ್ ಮೂಲಕ ಮತದಾನದ ಮಹತ್ವ ಸಾರಿದ ಚಂದನವನದ ತಾರೆಯರು!
ಒಟ್ಟಿನಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಹೆಸರಿನ ಅರ್ಥವನ್ನು ಅವರದೇ ಆದ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಎನ್ನಬಹುದು. ಅದೇನೇ ಇರಲಿ, ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಬಂದ ನಟಿ ರಶ್ಮಿಕಾ, ಇಂದು ಸೌತ್ ಹಾಗೂ ನಾರ್ತ್ ಎಂಬ ಭೇದಭಾವವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿಯಾಗಿ ಬೆಳೆದಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ವೃತ್ತಿಜೀವನ ಶುರುಮಾಡಿದ ರಶ್ಮಿಕಾ, ವಿಜಯ್ ದೇವರಕೊಂಡ (Vijay Devarakonda)ಜತೆಗಿನ 'ಗೀತ ಗೋವಿಂದಂ' ಚಿತ್ರದ ಮೂಲಕ ಸ್ಟಾರ್ ನಟಿಯಾಗಿ ಬೆಳೆದರು. ತಮಿಳಿನ ಪುಷ್ಪಾ, ಬಾಲಿವುಡ್‌ನ ಆನಿಮಲ್ ಹೀಗೆ ಎಲ್ಲಾ ಕಡೆಯಲ್ಲೂ ಸಕ್ಸಸ್ ದಾಖಲಿಸಿದ್ದಾರೆ.
ನಮ್ಮ ಮನೆಯಲ್ಲಿ ಅವರವರ ಕೋಣೆಯಲ್ಲಿ ಕುಳಿತು ಊಟ ಮಾಡುವ ಪದ್ಧತಿಯಿಲ್ಲ; ರಾಘವೇಂದ್ರ ರಾಜ್‌ಕುಮಾರ್
ಇಂದು ನಟಿ ರಶ್ಮಿಕಾ ಮಂದಣ್ಣ ಭಾರತ ಬಿಟ್ಟು ಜಗತ್ತಿನ ಹಲವು ದೇಶಗಳ ಜನರಿಗೆ ಚಿರಪರಿಚಿತ ಹೆಸರು. ಸದ್ಯ ಅಲ್ಲು ಅರ್ಜುನ್ ಜತೆಗಿನ 'ಪುಷ್ಪಾ 2' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ, ಇಂದು ಭಾರತದ ಬಹುಬೇಡಿಕೆಯ ನಟಿ. ರಶ್ಮಿಕಾ ಮತ್ತೆ ವಿಜಯ್ ದೇವರಕೊಂಡ ಜತೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಅವರಿಬ್ಬರ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಡಾ. ರಾಜ್‌ಕುಮಾರ್ ತಬ್ಬಿ, ಮುತ್ತಿಟ್ಟಿದ್ದೇಕೆ ಎಂಜಿಆರ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.