ಅಬ್ಬಾ ನೋವಾಗ್ತಿದೆ ಎಂದ ನಿವೇದಿತಾ: ಅಳ್ಬೇಡ ಕಣೆ... ನಮ್​ ಹಾರ್ಟೇ ಕಿತ್ತು ಬರ್ತಿದೆ ಎಂದ ಫ್ಯಾನ್ಸ್​!

By Suvarna News  |  First Published Apr 25, 2024, 12:47 PM IST

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಕಿವಿ ಚುಚ್ಚಿಸಿಕೊಳ್ಳುವ ವಿಡಿಯೋ ಶೇರ್​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಏನೆಲ್ಲಾ ಹೇಳಿದ್ರು ನೋಡಿ...
 


ಬಿಗ್​ಬಾಸ್​ ಖ್ಯಾತಿಯ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ಚಂದನ್​ ಶೆಟ್ಟಿ ಅವರ ಜೊತೆ ಮದುವೆಯಾಗಿ ನಾಲ್ಕು ವರ್ಷವಾಗುತ್ತಾ ಬಂದರೂ ಇಂದಿಗೂ ನಿವೇದಿತಾ ಚಿಕ್ಕಮಕ್ಕಳಂತೆಯೇ ವರ್ತಿಸುತ್ತಿರುವುದರಿಂದಲೇ ಟ್ರೋಲ್​ ಆಗುವುದೂ ಇದೆ, ಇದೇ ಕಾರಣಕ್ಕೆ ಹೆಚ್ಚಿನ ಅಭಿಮಾನಿಗಳನ್ನು ಗಳಿಸುವುದೂ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ನಿವೇದಿತಾ  ಕಿವಿ ಚುಚ್ಚಿಸಿಕೊಂಡಿದ್ದಾರೆ. ಅಂದವನ್ನು ಹೆಚ್ಚಿಸಲು ಕಿವಿಯ ಮಧ್ಯಭಾಗದಲ್ಲಿ ಇನ್ನೊಂದು ಇಯರ್​ ರಿಂಗ್​ ಚುಚ್ಚಿಸಿಕೊಳ್ಳುವ ಟ್ರೆಂಡ್​ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಹಲವರು ತಾತ್ಕಾಲಿಕವಾಗಿ ಇದನ್ನು ಹಾಕಿಕೊಂಡರೆ, ತಮ್ಮ ಡ್ರೆಸ್​ಗೆ ಮ್ಯಾಚ್​ ಆಗುವಂಥ ಕಿವಿಯೋಲೆಗಳನ್ನು ಬದಲಾಯಿಸುತ್ತಿದ್ದರೆ, ಇನ್ನು ಕೆಲವರು ಪರ್ಮನೆಂಟ್​ ಆಗಿರುವಂತೆ ಚುಚ್ಚಿಸಿಕೊಳ್ಳುತ್ತಾರೆ. ಇದೀಗ ನಿವೇದಿತಾ ಅವರೂ ಪರ್ಮನೆಂಟ್​ ಓಲೆಯನ್ನು ಚುಚ್ಚಿಸಿಕೊಂಡಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಯಾರಿಗೇ ಆದರೂ ಒಂದು ಕ್ಷಣ ಕಿವಿ ಚುಚ್ಚುವಾಗ ನೋವಾಗುವುದು ಸಹಜ. ಅದೇ ರೀತಿ ನಟಿ ಕೂಡ ಅಬ್ಬಾ ಎಂದಿದ್ದಾರೆ. ನಂತರ ನಕ್ಕಿದ್ದಾರೆ. ಈ ಕುರಿತು ವಿಡಿಯೋ ಶೇರ್​ ಮಾಡಿರುವ ಅವರು, ಅಂದುಕೊಂಡಷ್ಟು ನೋವಾಗಿಲ್ಲ ಎಂದಿದ್ದಾರೆ.  ‘ಎರಡನೇ ಬಾರಿಗೆ ಕಿವಿ ಚುಚ್ಚಿಸಿಕೊಳ್ಳುವ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ. ನಾನು ತುಂಬಾ ಹೆದರುತ್ತಿದ್ದೆ. ಏನನ್ನಿಸಿತೋ ಏನೋ ನಾನು ಅದನ್ನು ಮಾಡಲು ಯೋಚಿಸಿದೆ. ನನಗೆ ತುಂಬಾ ಸಂತೋಷವಾಗಿದೆ. ನಿರೀಕ್ಷಿಸದ್ದಷ್ಟು ನೋವಾಗಿಲ್ಲ’ ಎಂದು ಬರೆದುಕೊಂಡಿದ್ದಾರೆ.

Tap to resize

Latest Videos

ನಿವೇದಿತಾ ಹಾಟ್​ ರೀಲ್ಸ್​ ನೋಡಿ ತೋರಿಸೋದು ಜಾಸ್ತಿಯಾಗ್ತಿದೆ, ಕತ್ತರಿ ಹಾಕಿಸಿಕೊಂಡ್ಯಾ ಅನ್ನೋದಾ ಫ್ಯಾನ್ಸ್​!

  ಅವರು ನೋವಿನಿಂದ ನರಳುವುದನ್ನು ನೋಡಿದ ಅಭಿಮಾನಿಗಳು ನಿಮಗೆ ನೋವಾದ್ರೆ ನಮಗೂ ನೋವಾಗುತ್ತದೆ. ಹೀಗೆಲ್ಲಾ ನೋವಿನಿಂದ ನರಳುವ ವಿಡಿಯೋ ಹಾಕಿ ನಮ್ಮ ಹಾರ್ಟ್​ಗೆ ಪ್ರಾಬ್ಲೆಮ್​ ಮಾಡಬೇಡಿ ಎಂದಿದ್ದರೆ, ಇನ್ನು ಕೆಲವರು, ಏನು ಮಹಾ ಯಾರೂ ಮಾಡದ ಸಾಧನೆ ಎಂದು ವಿಡಿಯೋ ಶೇರ್​ ಮಾಡಿದ್ಯಾ ಎಂದು ಟ್ರೋಲ್​ ಮಾಡುತ್ತಿದ್ದಾರೆ. ಇನ್ನು ಕೆಲವು ಫ್ಯಾನ್ಸ್​ ತುಂಬಾ ಚೆನ್ನಾಗಿ ಕಾಣಿಸುತ್ತಿರುವಿರಿ ಎಂದಿದ್ದಾರೆ. ಮತ್ತೆ ಕೆಲವು ತಲೆಹರಟೆ ಮಾಡಿದ್ದು, ನಿಮಗೆ ನೋವಾದರೆ ನಮ್ಮ ಹಾರ್ಟೇ ಕಿತ್ತು ಬಂದಂಗೆ  ಆಗ್ತಿದೆ ಎನ್ನುತ್ತಿದ್ದಾರೆ. 

ನಿವೇದಿತಾರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಆಹಾ! ಗಂಡನ ಸತಾಯಿಸುವುದು ಎಂದ್ರೆ ಹೆಂಡ್ತಿಗೆ ಎಷ್ಟು ಖುಷಿ ಅಲ್ವಾ? ಸೀರಿಯಲ್​ ಪ್ರೇಮಿಗಳು ಹೇಳ್ತಿರೋದೇನು?

 

click me!