Hijab Row : ಹಿಜಾಬ್ ವಿವಾದದ ಕುರಿತಾಗಿ ಸರ್ವಧರ್ಮ ಮುಖಂಡರ ಸಭೆ!

Feb 19, 2022, 6:06 PM IST

ಬೆಂಗಳೂರು (ಫೆ. 19): ರಾಜ್ಯದಲ್ಲಿ ಹಿಜಾಬ್​ ಹಾಗೂ ಕೇಸರಿ ಶಾಲು ಸಂಘರ್ಷ (Hijab vs Saffron Shawl) ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು (Religious Leaders) ಶನಿವಾರ ಸುದ್ದಿಗೋಷ್ಠಿ (Press Meet) ನಡೆಸಿದರು. ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಸುನ್ನಿ ಜಮಾತ್ ಅಧ್ಯಕ್ಷರಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿಪೀರ, ನಾಸೆ ಫೌಂಡೇಶನ್ ಅಧ್ಯಕ್ಷರಾದ ಮೌಲಾನ ಶಬ್ಬೀರ್ ನಖ್ವಿ, ಮೌಲಾನ ಮಕ್ಸೂದ್  ಇಮ್ರಾನ್ ಸಾಹೇಮ್‌ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳೂ ಸೇರಿದಂತೆ 10ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.

Hijab Row ಆದೇಶವನ್ನು ಅರ್ಥೈಸಿಕೊಂಡು ಎಲ್ಲರೂ ಪಾಲಿಸಬೇಕು, ಮೌಲ್ವಿ ಸೈಯದ್ ಸುಲೇಮಾನ್
ಅನೇಕ ಸಂದರ್ಭದಲ್ಲಿ ಸಂಕಷ್ಟ ಎದುರಾಗುತ್ತದೆ. ಕೊರೊನಾ ಎಂಬ ಸಂಕಷ್ಟ ಬಂತು. ಆ ಸಮಯದಲ್ಲಿ ನಾವು ಜನಸಾಮಾನ್ಯರ ಬಳಿ ಹೋಗಿ ಕಿಟ್, ಔಷಧಿ ವಿತರಣೆ ಮಾಡಿದ್ವಿ. ಅನೇಕ ಮೌಲ್ವಿಗಳು ಇಲ್ಲಿ ಸೇರಿದ್ದಾರೆ. ತಿಳುವಳಿಕೆ ಉಳ್ಳವರಾಗಿ ಸೂತ್ರವನ್ನ ಕಂಡುಕೊಳ್ಳಬೇಕು. ಧಾರ್ಮಿಕ ಸಾಮರಸ್ಯವನ್ನ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿ ಕಾಪಾಡಬೇಕು ಎಂದು ಹೇಳಿದರು.