Hijab Row ಆದೇಶವನ್ನು ಅರ್ಥೈಸಿಕೊಂಡು ಎಲ್ಲರೂ ಪಾಲಿಸಬೇಕು, ಮೌಲ್ವಿ ಸೈಯದ್ ಸುಲೇಮಾನ್
ಇಂದು(ಶನಿವಾರ) ಸರ್ವಧರ್ಮ ಸಭೆ ನಡೆದಿದ್ದು, ಸಭೆ ಬಳಿಕ ಮೌಲ್ವಿ ಸೈಯದ್ ಸುಲೇಮಾನ್ ಪ್ರತಿಕ್ರಿಯಿಸಿದ್ದು, ಆದೇಶ ಏನಿದೆ ಅದನ್ನ ಪರಿಪಾಲಿಸಬೇಕು ಅಷ್ಟೇ. ನಮಗೆ ವಿದ್ಯೆ, ಭಾವೈಕ್ಯತೆ ಮುಖ್ಯ. ಅದನ್ನ ಪಾಲಿಸಬೇಕು. ಆದೇಶವನ್ನು ಅರ್ಥೈಸಿಕೊಂಡು ಎಲ್ಲರೂ ಪಾಲಿಸಬೇಕು ಎಂದರು.
ಬೆಂಗಳೂರು, (ಫೆ.19): ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದದ ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ. ಇನ್ನು ಹಿಜಾಬ್ ವಿವಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
Hijab Row ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗಬಾರದು: ಮುರುಘ ಶ್ರೀ ಕಿವಿ ಮಾತು
ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ.
ಇನ್ನು ಸಂಬಂಧ ಇಂದು(ಶನಿವಾರ) ಸರ್ವಧರ್ಮ ಸಭೆ ನಡೆದಿದ್ದು, ಸಭೆ ಬಳಿಕ ಮೌಲ್ವಿ ಸೈಯದ್ ಸುಲೇಮಾನ್ ಪ್ರತಿಕ್ರಿಯಿಸಿದ್ದು, ಆದೇಶ ಏನಿದೆ ಅದನ್ನ ಪರಿಪಾಲಿಸಬೇಕು ಅಷ್ಟೇ. ನಮಗೆ ವಿದ್ಯೆ, ಭಾವೈಕ್ಯತೆ ಮುಖ್ಯ. ಅದನ್ನ ಪಾಲಿಸಬೇಕು. ಆದೇಶವನ್ನು ಅರ್ಥೈಸಿಕೊಂಡು ಎಲ್ಲರೂ ಪಾಲಿಸಬೇಕು ಎಂದರು.