ಸಿಲಿಕಾನ್ ಸಿಟಿಯಲ್ಲಿ ಕೊರೊನಾಗೆ ಇಂದು ನಾಲ್ವರು ಸಾವು

Jun 20, 2020, 3:57 PM IST

ಬೆಂಗಳೂರು (ಜೂ. 20): ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸಾವಿನ ವೇಗ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 62 ಕ್ಕೆ ಏರಿಕೆಯಾಗಿದೆ. 

ಬೆಂಗಳೂರಿನಲ್ಲಿ ಜೋರಾಯ್ತು ಕೊರೋನಾ ಮರಣಮೃದಂಗ..!

ನಿನ್ನೆ ಅಂದರೆ ಶುಕ್ರವಾರ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕಳೆದ 4 ದಿನದಲ್ಲಿ ಬರೋಬ್ಬರಿ 25 ಮಂದಿ ಬಲಿಯಾಗಿದ್ದು ಉದ್ಯಾನ ನಗರಿ ಹಾಟ್‌ಸ್ಪಾಟ್ ಆಗಿ ಬದಲಾಗಿದೆ.  ಸೋಂಕಿತರ ಸಂಖ್ಯೆ 8 ಸಾವಿರ ಗಡಿ ದಾಟಿ 8281 ಕ್ಕೆ ಏರಿಕೆಯಾಗಿದೆ.