46 ದಿನ, 48 ಪಂದ್ಯ, 10 ತಂಡ, 11 ಸ್ಟೇಡಿಯಂ: ಇಂದಿನಿಂದ 12ನೇ ಏಕದಿನ ವಿಶ್ವಕಪ್

May 30, 2019, 2:19 PM IST

ಕ್ರಿಕೆಟ್ ಅಭಿಮಾನಿಗಳು ಜತನದಿಂದ ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. 12ನೇ ಏಕದಿನ ವಿಶ್ವಕಪ್ ಇಂದಿನಿಂದ ಆರಂಭವಾಗ್ತಿದ್ದು, ಮುಂದಿನ ಒಂದೂವರೆ ತಿಂಗಳು ಕ್ರಿಕೆಟ್ ಜನಕರ ನಾಡಿನಲ್ಲಿ ಕ್ರಿಕೆಟ್ ಜಾತ್ರೆ ನಡೆಯಲಿದೆ. ಕ್ರಿಕೆಟ್ ಫ್ಯಾನ್ಸ್‌ಗೆ ಬೌಂಡರಿ-ಸಿಕ್ಸರ್‌ಗಳ ಜೊತೆ ವಿಕೆಟ್‌ಗಳ ರಸದೌತಣ ಸಿಗಲಿದೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನಾಡಿ ಮಹಾಯುದ್ಧಕ್ಕೆ ಸಿದ್ದವಾಗಿ ನಿಂತಿದ್ದು, ಇಂದು ರಣಕಹಳೆ ಊದೋದೊಂದೇ ಬಾಕಿ.