Vikrant Rona: ರಾ..ರಾ.. ರಕ್ಕಮ್ಮ ಹಾಡಿಗೆ ಮದುಮಗಳ ಭರ್ಜರಿ ಸ್ಟೆಪ್..!

Dec 3, 2022, 12:08 PM IST

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಇಡೀ ಭಾರತೀಯ ಚಿತ್ರರಂಗದಲ್ಲೇ ಸೂಪರ್ ಹಿಟ್ ಆಗಿತ್ತು. ಯಾವ ಮಟ್ಟಕ್ಕೆ ಅಂದ್ರೆ ರಾ ರಾ ರಕ್ಕಮ್ಮನ ಹಾಡಿಗೆ ಸೊಂಟ ಬಳಕಿಸದವರೇ ಇಲ್ಲವೇನೋ ಅನ್ನುಷ್ಟು ಫೇಮಸ್ ಆಗಿತ್ತು. ಸೆಲ್ ಫೋನ್ ಓಪನ್ ಮಾಡಿದ್ರೆ ರಾ ರಾ ರಕ್ಕಮ್ಮನ ರೀಲ್ಸ್ ಕಣ್ಣಿಗೆ ಬೀಳುತ್ತಿದ್ವು. ಯಾವ್ದೇ ಸಂಭ್ರಮ ಇದ್ರೂ ರಕ್ಕನ ಗುಂಗು ಅಲ್ಲಿರುತ್ತಿತ್ತು. ಈಗ್ಲು ಈ ಹಾಡಿನ ಕ್ರೇಜ್ ಕಡಿಮೆ ಆಗಿಲ್ಲ ಅನ್ನೋದಕ್ಕೆ ಈಗ ಮತ್ತೊಂದು ವೀಡಿಯೋ ಸಿಕ್ಕಿದೆ. ಮದುವೆ ಮನೆಯೊಂದರಲ್ಲಿ ವಧು ಹಾಗೂ ಆಕೆಯ ಸ್ನೇಹಿತರು ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Kantara ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿಗೆ ಸಿದ್ಧಶ್ರೀ ಪ್ರಶಸ್ತಿ ಪ್ರದಾನ