ದರ್ಶನ್​ಗೆ ಈ ಬಾರಿ ಜೈಲಲ್ಲೇ ವಿಜಯದಶಮಿ: ಮೈಸೂರ್ ಹೈದನಿ​ಗೆ ದಸರಾ ಅಂದ್ರೆ ಪ್ರಾಣ!

Oct 13, 2024, 10:37 AM IST

ಇಡೀ ನಾಡು ದಸರಾ ಹಬ್ಬದ ಸಂಭ್ರಮದಲ್ಲಿದೆ.  ದರ್ಶನ್ ಮಾತ್ರ ಬಳ್ಳಾರಿ ಜೈಲಿನಲ್ಲೇ ಹಬ್ಬ ಮಾಡಿ ಮುಗಿಸಿದ್ದಾರೆ. ಅಸಲಿಗೆ ಮೈಸೂರು ಮೂಲದ ದರ್ಶನ್​ಗೆ ಮೊದಲಿಂದಲೂ ದಸರಾ ಹಬ್ಬ ಅಂದ್ರೆ ಸಖತ್ ಸ್ಪೆಷಲ್. ಆಯುಧ ಪೂಜೆ ದಿನ ಮನೆಯಲ್ಲಿರೋ ಕಾರುಗಳಿಗೆಲ್ಲಾ ಪೂಜೆ ಮಾಡಿ, ವಿಜಯ ದಶಮಿ ದಿನ ಮೈಸೂರಿಗೆ ಹೋಗ್ತಿದ್ದ ದರ್ಶನ್​ಗೆ ಈ ಬಾರಿ ಮಾತ್ರ ಜೈಲಲ್ಲೇ ದಸರಾ. ಇಡೀ ನಾಡು ದಸರಾ ಹಬ್ಬದ ಸಂಭ್ರಮದಲ್ಲಿದೆ. ದರ್ಶನ್ ಮನೆಯಲ್ಲಿ ಮಾತ್ರ ಹಬ್ಬದ ವಾತಾವರಣವಿಲ್ಲ. ಬೇಲ್ ಸಿಕ್ಕು ಹಬ್ಬದ ಹೊತ್ತಿಗೆ ಹೊರಬರ್ತಿನಿ ಅಂದುಕೊಂಡಿದ್ದ ದರ್ಶನ್​ಗೆ ನಿರಾಸೆಯಾಗಿದೆ. ಕೋರ್ಟ್​​ನಲ್ಲಿ ದರ್ಶನ್​ ಬೇಲ್ ಕುರಿತ ವಾದ- ಪ್ರತಿವಾದ ಮುಗಿದಿದೆ. ಆದ್ರೆ ಕೋರ್ಟ್ ತೀರ್ಪಿನ ದಿನಾಂಕವನ್ನ ಸೋಮವಾರಕ್ಕೆ ಮುಂದೂಡಿದೆ. ಸೋ ಬಾರಿ ದರ್ಶನ್​ಗೆ ಜೈಲಲ್ಲೇ ವಿಜಯದಶಮಿ. 

ಹೌದು ದರ್ಶನ್ ಅಪ್ಪಟ ಮೈಸೂರ್ ಹೈದ. ಅರಮನೆ ನಗರಿಯಲ್ಲಿ ಹುಟ್ಟಿ ಬೆಳೆದ ದರ್ಶನ್​ಗೆ ಸಹಜವಾಗೇ ಎಲ್ಲಾ ಮೈಸೂರಿಗರಂತೆ ದಸರಾ ಅಂದ್ರೆ ಪ್ರಾಣ. ಚಿಕ್ಕವಯಸ್ಸಿಂದಲೂ ದರ್ಶನ್​ ನವರಾತ್ರಿ ಮುಗಿಯೋವರೆಗೂ ಅರಮನೆ ಸುತ್ತಾನೇ ಸುತ್ತತಾ ಇದ್ರು. ಅಪ್ಪನ ಹೆಗಲೇರಿ ಜಂಬೂ ಸವಾರಿ ನೋಡ್ತಾ ಇದ್ರು. ಚಿತ್ರರಂಗಕ್ಕೆ ಬಂದು ಸ್ಟಾರ್ ಆದ ಮೇಲೂ ಮೈಸೂರು ದಸರಾದೆಡೆಗಿನ ಆಕರ್ಷಣೆ ಕಮ್ಮಿ ಆಗಿರಲಿಲ್ಲ. ಹಲವು ಬಾರಿ ಯುವದಸರಾದಲ್ಲಿ ಅತಿಥಿಯಾಗಿ ಭಾಗಿಯಾಗಿದ್ರು. ಪ್ರತಿ ವರ್ಷ ದರ್ಶನ್ ಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಬಲು ಜೋರಾಗಿ ಇರ್ತಾ ಇತ್ತು. ದರ್ಶನ್​ರ ಗ್ಯಾರೇಜ್​ನಲ್ಲಿರೋ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳೆಲ್ಲಾ ಅವುತ್ತು ಮನೆಮುಂದೆ ನಿಲ್ತಾ ಇದ್ವು. ಎಲ್ಲವನ್ನೂ ತೊಳೆದು, ಅಲಂಕಾರ ಮಾಡಿ ಸಾಲಾಗಿ ನಿಲ್ಲಿಸಿ ಪೂಜೆ ಮಾಡ್ತಾ ಇದ್ರು ದರ್ಶನ್. ಆಯುಧ ಪೂಜೆ ಸಂಭ್ರಮ ಮುಗಿಸಿ ವಿಜಯ ದಶಮಿ ದಿನ ತಮ್ಮ ಮೈಸೂರು ಫಾರ್ಮ್ ಹೌಸ್​ಗೆ ಹೋಗ್ತಾ ಇದ್ರು ದರ್ಶನ್. 

ಇನ್ನೂ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿ ದರ್ಶನ್ ಪಡೆಯದೇ ದರ್ಶನ್ ಯಾವ ದೊಡ್ಡ ಕೆಲಸಕ್ಕೂ ಮುಂದಾಗ್ತಾ ಇರಲಿಲ್ಲ. ಒಂದು ವರ್ಷವೂ ದರ್ಶನ್ ಮನೆಯಲ್ಲಿ ಹಬ್ಬದ ಸಂಭ್ರಮ ಮಿಸ್ ಆಗ್ತಾ ಇರಲಿಲ್ಲ. ಹೌದು ಈ ಬಾರಿ ದರ್ಶನ್ ಮನೆಯಲ್ಲಿರೋ ಕಾರುಗಳಿಗೆ ಪೂಜೆಯ ಭಾಗ್ಯ ದೊರೆತಿಲ್ಲ ಕೋಟಿ ಕೋಟಿ ಬೆಲೆಬಾಳುವ ಕಾರುಗಳು ಒಡೆಯನಿಲ್ಲದೇ ಗ್ಯಾರೇಜ್​ನಲ್ಲೇ ಧೂಳು ತಿಂತಾ ಇವೆ. ದರ್ಶನ್​ರ ಆರ್.ಆರ್ ನಗರದ ಮನೆಯಲ್ಲಿ ಕೆಲಸದವರನ್ನ ಬಿಟ್ರೆ ಯಾರೊಬ್ರೂ ಇಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಕೂಡ ಹಬ್ಬ ಮಾಡೋ ಮನಸ್ಥಿತಿಯಲ್ಲಿ ಇಲ್ಲ. ದರ್ಶನ್​ಗೆ ಬೇಲ್ ಸಿಕ್ಕುಬಿಟ್ರೆ ಒಟ್ಟಿಗೆ ಹಬ್ಬ ಮಾಡಬೇಕು ಅಂತ ಕಾದಿದ್ದವರಿಗೆ ನಿರಾಸೆ ಆಗಿದೆ. ಸೋಮವಾರ ದರ್ಶನ್ ಬೇಲ್ ವಿಚಾರದಲ್ಲಿ ತೀರ್ಪು ಬರಲಿದ್ದು, ಅವತ್ತಾದ್ರೂ ಬಿಡುಗಡೆಯ ಭಾಗ್ಯ ಸಿಕ್ಕೀತಾ ಅಂತ ದರ್ಶನ್ ಕಾಯ್ತಾ ಇದ್ದಾರೆ.