Bengaluru: ಬೈಕ್‌ನ ಹ್ಯಾಂಡಲ್‌ ತಾಗಿ ಕೆಳಗೆ ಬಿದ್ದ ಬಾಲಕ, ತಲೆಯ ಮೇಲೆ ಹರಿಯಿತು ಗೂಡ್ಸ್ ಆಟೋ!

By Santosh Naik  |  First Published Oct 13, 2024, 10:27 AM IST

ಬೆಂಗಳೂರಿನಲ್ಲಿ ವಿಜಯದಶಮಿ ದಿನದಂದೇ ಹೃದಯವಿದ್ರಾವಕ ಘಟನೆ ನಡೆದಿದೆ. ಬೈಕ್‌ನ ಹ್ಯಾಂಡಲ್‌ ತಾಗಿ ಕೆಳಗೆ ಬಿದ್ದ ಬಾಲಕನ ಮೇಲೆ ಗೂಡ್ಸ್‌ ಆಟೋ ಹರಿದಿರುವ ಘಟನೆ ನಡೆದಿದೆ.


ಬೆಂಗಳೂರು (ಅ.13): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಚಿವ ಜಮೀರ್ ಅಹಮದ್ ಅವರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿಯೇ ದಾರುಣ ಅಪಘಾತ ನಡೆದಿದೆ. ಮಕ್ಕಳು ರಸ್ತೆಯಲ್ಲಿ ಒಬ್ಬರೇ ಓಡಾಡುವಾಗ ಎಚ್ಚರಿಕೆ ಇಲ್ಲದಿದ್ದರೆ ಏನಾಗತ್ತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎನ್ನುವಂತಿದೆ. ಅಪಘಾತ ನಡೆಯುವ ಸ್ಥಳ ಅಲ್ಲದೇ ಇದ್ದರೂ ಪುಟ್ಟ ಬಾಲಕನ ಪ್ರಾಣ ಪಕ್ಷಿ ಹಾರಿಹೋಗಿದೆ. ಇದರ ಸಿಸಿಟಿವಿ ಫೂಟೇಜ್‌ ಕೂಡ ವೈರಲ್‌ ಆಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಹಳೇ ಗುಡ್ಡದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.ಓಡಿ ಬರುತ್ತಿದ್ದ ಬಾಲಕನ ಭುಜ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್‌ಗೆ ತಾಕಿದೆ. ತಾಕಿದ ರಭಸಕ್ಕೆ ಬಾಲಕ ಅಲ್ಲಿಯೇ ಉರುಳಿ ಬಿದ್ದಿದ್ದಾನೆ. ಕೆಳಗೆ ಬಿದ್ದ ಬಾಲಕನ ತಲೆ ಮೇಲೆ ಹರಿಯಿತು ಗೂಡ್ಸ್‌ ಆಟೋ ಹರಿದಿದೆ. ತಲೆ ಮೇಲೆ ಗೂಡ್ಸ್ ಆಟೋ ಹರಿದ ಪರಿಣಾಮ ಸ್ಥಳದಲ್ಲೇ ಪ್ರಾಣ 7 ವರ್ಷದ ಬಾಲಕ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಹೊಳೆನರಸೀಪುರ: ವೈದ್ಯನ ನಿರ್ಲಕ್ಷಕ್ಕೆ ಉದ್ಯಮಿ ಬಲಿ!

Tap to resize

Latest Videos

ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ರಸ್ತೆ ಪಕ್ಕದಲ್ಲಿ ಬೈಕ್‌ ನಿಲ್ಲಿಸುವಾಗ, ರಸ್ತೆಯಲ್ಲಿ ಮಕ್ಕಳು ಓಡಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ಎನ್ನುವುದು ಇದರಿಂದ ತಿಳಿಯುತ್ತದೆ. ತಲೆಯ ಮೇಲೆ ಗೂಡ್ಸ್‌ ಆಟೋದ ಚಕ್ರ  ಹರಿದ ಬೆನ್ನಲ್ಲಿಯೇ ಎರಡು ಕ್ಷಣ ಒದ್ದಾಡುವ ಬಾಲಕ ಬಳಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.ಈ ಹಂತದಲ್ಲಿ ಬೈಕ್‌ನಲ್ಲಿ ಬರುವ ಒಂದು ಜೋಡಿಯ ಪೈಕಿ, ಮಹಿಳೆ ಬಾಲಕನನ್ನು ಆಟೋದ ಚಕ್ರದ ಅಡಿಯಿಂದ ಹೊರಗೆ ತೆಗೆದಿದ್ದಾಳೆ. ಈ ವೇಳೆ ಬಾಲಕನ ತಲೆಯ ಭಾಗದಲ್ಲಿ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದು ಕಂಡಿದೆ.

ರಾಯಚೂರು: ತಾತನಿಗೆ ಬನ್ನಿ ಕೊಟ್ಟು ವಾಪಸ್‌ ಬರೋ ವೇಳೆ ಸ್ಕೂಟರ್‌ಗೆ ಕಾರ್ ಡಿಕ್ಕಿ, ಓರ್ವ ಯುವತಿ ಸಾವು

click me!