ಮೂರು ದಿನದ ಮಗು ಹೇಗೆ ವರ್ತಿಸುತ್ತಿದೆ? ನೋಡಲು ಯಾರಂತೆ ಇದೆ ಎಂದು ಭುವನ್ ಮತ್ತು ಹರ್ಷಿಕಾ ವರ್ಣಿಸಿದ್ದಾರೆ.
ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಪಲ್ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊಣ್ಣನ ನವರಾತ್ರಿ ಎರಡನೇ ದಿನದಂದು ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡರು. ಮೂರು ನಾಲ್ಕು ದಿನಕ್ಕೆ ಹರ್ಷಿಕಾ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದವರು ಮಾಧ್ಯಮ ಸ್ನೇಹಿತರ ಜೊತೆ ತಮ್ಮ ಪೇರೆಂಟಿಂಗ್ ಬಗ್ಗೆ ಹಂಚಿಕೊಂಡಿದ್ದಾರೆ.
ಮಗು ನೋಡಲು ಯಾರಂತೆ:
undefined
'ಮೊದಲು ಮಗುವಿನ ಮುಖವನ್ನು ಭುವನ್ ನೋಡಿದ್ದು, ನನಗೆ ಕಾಣಿಸಲೇ ಇಲ್ಲ. ಮಗು ಅಳುತ್ತಿತ್ತು ಆಗ ನನ್ನ ಮುಖದ ಪಕ್ಕ ತಂದು ಇಟ್ಟರು ಅಳುವುದನ್ನು ನಿಲ್ಲಿಸಿದ್ದಳು. ನನ್ನ ಮಗಳ ಕೂದಲು, ಮೂಗು ಮತ್ತು ಕಣ್ಣು ಭುವನ್ ಅವರಂತೆ ಇದೆ ಆದರೆ ಬಾಯಿ ನನ್ನಂತೆ ಇದೆ. ಕೋಪ ಕೂಡ ಭುವನ್ ರೀತಿನೇ' ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.
ಸೆರಗು ಎಲ್ಲಮ್ಮ? ಸರಿಯಾಗಿ ಕೂರಮ್ಮ; ನಿವೇದಿತಾ ಗೌಡ ನಕ್ಕರೂ ಕಾಲೆಳೆದ ನೆಟ್ಟಿಗರು!
ತಾಯಿತನವನ್ನು ಅನುಭವಿಸಿ:
'ಟೆಕ್ನಾಲಜಿ ಎಷ್ಟು ಬೆಳೆದಿದೆ ಅಂದ್ರೆ...ಅಲ್ಲಿ ಲೀಟರ್‌ಗಟ್ಟಲೆ ರಕ್ತ ಹೋಗುತ್ತಿತ್ತು ಆದರೆ ಹರ್ಷಿಕಾ ಮಾತ್ರ ಯಾವುದೇ ನೋವು ಇಲ್ಲದೆ ಮಲಗಿದ್ದರು. ಎಷ್ಟರ ಮಟ್ಟಕ್ಕೆ ಟೆಕ್ನಾಲಜಿ ಬೆಳೆದಿದೆ. ತಾಯಂದಿರು ಆಗಲು ಹೆದರುತ್ತಿರುವ ಹೆಣ್ಣು ಮಕ್ಕಳಿಗೆ ಧೈರ್ಯ ಕೊಡಲು ನಾನು ಹೇಳುತ್ತಿರುವೆ. ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳು ಚೆನ್ನಾಗಿದೆ. ಹಾಸಿಗೆ ಮೇಲೆ ಹರ್ಷಿಕಾ ನನ್ನ ಜೊತೆ ಮಾತನಾಡುತ್ತಿದ್ದಾರೆ ಆದರೆ ಅಲ್ಲಿ ಆಪರೇಷನ್ ನಡೆಯುತ್ತಿದೆ ರಕ್ತ ಸುರಿಯುತ್ತಿದೆ. ಮಗುವನ್ನು ಎತ್ತಿಕೊಂಡು ಹೊರ ತೆಗೆದಾಗ ಅದು ಕಿರುಚಾಡುವುದು.......ತಾಯಿತನವನ್ನು ಪ್ರತಿಯೊಂದು ಹೆಣ್ಣು ಅನುಭವಿಸಬೇಕು. ಈಗೀಗ ಜನರೇಷನ್ ಹೇಗಾಗುತ್ತಿದೆ ಅಂದ್ರೆ ನನಗೆ ಮದುವೆ ಬೇಡ ಮಕ್ಕಳು ಬೇಡ ಅನ್ನೋ ಆಲೋಚನೆ ಮಾಡುತ್ತಿದ್ದರೆ. ಹರ್ಷಿಕಾ ಮತ್ತು ನನಗೆ ಮಕ್ಕಳು ಅಂದ್ರೆ ಅಷ್ಟು ಇಷ್ಟನೆ. ಡೆಲಿವರಿ ಆದ ಮೇಲೆ ಮಗುವನ್ನು ತಂದು ಕೈಗೆ ಕೊಟ್ಟು ಒಮ್ಮೆ ಎದೆ ಹಾಲು ಕುಡಿಸಿದ ಮೇಲೆ ಹರ್ಷಿಕಾ ನಿಜಕ್ಕೂ ಖುಷಿಯಾಗಿದ್ದರು. ಎಲ್ಲರಿಗೂ ಈ ಅನುಭವ ಆಗಬೇಕು. ಗಂಡು ಮಗು ಆಗಿದ್ದರೆ ಖುಷಿನೇ ಆದರೆ ಹೆಣ್ಣು ಮಗು ಆಗುವುದಕ್ಕೆ ಡಬಲ್ ಖುಷಿ ಇದೆ ಆ ಕನೆಕ್ಷನ್ ವರ್ಣಿಸಲು ಆಗುವುದಿಲ್ಲ. ಒಂದು ಚೂರು ಹಾಲು ಕುಡಿಸುವಾಗ ಮಿಸ್ ಆದರೂ ಸಿಟ್ಟು ಮಾಡಿಕೊಳ್ಳುತ್ತದೆ, ಮೂರು ದಿನದ ಮಗುವಿಗೆ ಇಷ್ಟೋಂದು ಅರ್ಥವಾಗುತ್ತದೆ ಅಂದ್ರೆ ಆಶ್ಚರ್ಯ' ಎಂದು ಭುವನ್ ಮಾತನಾಡಿದ್ದಾರೆ.
ಕೇವಲ 1 ತಿಂಗಳಿಗೆ 2 ಲಕ್ಷ ರೂ. ಶಾಪಿಂಗ್ ಮಾಡಿದ ಬಿಗ್ ಬಾಸ್ ಐಶ್ವರ್ಯ; ಅಪ್ಪನ ದುಡ್ಡು ಕೊಳಿತಿದ್ಯಾ ಎಂದ ನೆಟ್ಟಿಗರು