ಮನೆಗೆ ಬಂದವರ ಜತೆ ಹಾಡಿ ಅಭಿನಯಿಸಿದ ಲೀಲಾವತಿ; ವಿಡಿಯೋ

Aug 8, 2021, 11:09 PM IST

ಬೆಂಗಳೂರು(ಆ. 08)  ಹಿರಿಯ ನಟಿ ಲೀಲಾವತಿ ಮನೆಗೆ ಕನ್ನಡ ನಟಿಯರು ಭೇಟಿ ನೀಡಿದ್ದಾರೆ.  ಕಾಲುಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ನಟಿ ಲೀಲಾವತಿ  ಆರೋಗ್ಯ ವಿಚಾರಿಸಿದ್ದಾರೆ. ಕಲಾವಿದರಾದ  ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಹಿರಿಯ ನಟಿ ಮನೆಗೆ ಭೇಟಿ ಕೊಟ್ಟ ನಟಿಯರು

ಆರೋಗ್ಯ ವಿಚಾರಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದಾರೆ.  ಮನೆಗೆ ಬಂದವರ ಜತೆ ಮಾತನಾಡಿದ್ದು ಮಾತ್ರವಲ್ಲದೇ ಲೀಲಾವತಿ ಹಳೆಯ ಹಾಡು ಹಾಡಿ ರಂಜಿಸಿದರು.