ದೊಡ್ಡ ಸುದ್ದಿಯನ್ನೇ ಹೊತ್ತು ತರುತ್ತಿದ್ದಾರೆ ರಾಕಿಂಗ್ ಸ್ಟಾರ್: ಅಭಿಮಾನಿಗಳ ಅಭಿಪ್ರಾಯ ಕೇಳಿದ ಯಶ್!

May 9, 2024, 9:41 AM IST

ರಾಕಿಂಗ್ ಸ್ಟಾರ್ ಯಶ್​ ಬಗ್ಗೆ ದಿನಕ್ಕೊಂದು ಸುದ್ದಿಗಳು ಸಿಗುತ್ತಿವೆ. ಅದು ಟಾಕ್ಸಿನ್ ಸಿನಿಮಾ ಅನೌನ್ಸ್ ಆದ ಮೇಲೆ ತುಸು ಹೆಚ್ಚಾಗಿದೆ. ಇದೀಗ ಕಳೆದ ಗುರುವಾರ ರಾತ್ರೋ ರಾತ್ರಿ ಟಾಕ್ಸಿಕ್ ಶೂಟಿಂಗ್ ಶುರು ಮಾಡಿರೋ ಯಶ್​ ದೊಡ್ಡ ಸುದ್ದಿಯೊಂದನ್ನ ಹೊತ್ತು ತರೋ ತಯಾರಿಯಲ್ಲಿದ್ದಂತೆ ಕಾಣುತ್ತಿದೆ. ಆ ಬಿಗ್ ನ್ಯೂಸ್ ಕೊಡೋದಕ್ಕಾಗೆ ಯಶ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಲಿಂಗ್ ಒಂದನ್ನ ಮಾಡಿದ್ದಾರೆ. ನಟ ಯಶ್​ ಸೋಶಿಯಲ್ ಮೀಡಿಯಾ ಫ್ರೀಕ್ ಅಂತು ಅಲ್ಲ. ಯಶ್​ ಏನಿದ್ರು ಸಿನಿಮಾ ಫ್ರೀಕ್. ಹೆಚ್ಚಾಗಿ ಸೋಶಿಯಲ್ ಮೀಡಿಯಾ ಬಳಸದ ಯಶ್​ ಒಂದು ಹಬ್ಬಕ್ಕೆ ಇಂದು ಪೋಸ್ಟ್ ಅಂತ ಲೆಕ್ಕಾಚಾರ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ತಾರೆ. 

ಹೀಗಾಗಿ ಈಗ ಯಶ್​ ತನ್ನ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲೇ ಪ್ರಶ್ನೆ ಕೇಳಿದ್ದಾರೆ. ನಾನು ಈ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರಬೇಕಾ ಅಂತ ಕೇಳಿದ್ದಾರೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಾ ಅಂತ ಕೇಳಿ ಯಶ್​ ಒಂದೇ ಒಂದು ಪೋಸ್ಟ್ ಮಾಡಿದ್ದೇ ತಡ. ಇವರ ಫಾಲೋವರ್ಸ್​ ಓಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. 95 ಪರ್ಸೆಂಟ್ ಜನ ಯೆಸ್​ ಬಾಸ್ ನೀವು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರಿ ಅಂತ ಹೇಳಿದ್ದಾರೆ. ಇನ್ನು 4 ಪರ್ಸೆಂಟ್ ಜನರಿಂದ ಈ ಸೋಶಿಯಲ್ ಮೀಡಿಯಾ ಸಹವಾಸವೇ ನಿಮ್ಗೆ ಬೇಡ ಅಂತ ಅಲ್ಲೇ ಓಟ್ ಮಾಡಿದ್ದಾರೆ. 

ನಟ ಯಶ್ ಯಾವ್ ಕೆಲಸವನ್ನೇ ಆಗ್ಲೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಮಾಡ್ತಾರೆ. ಇನ್ನು ಅಭಿಮಾನಿಗಳ ಮುಂದೆ ತನ್ನ ಅಭಿಪ್ರಾಯ ಕೇಳು ಯಶ್​ ಸಮ್ ಸುಮ್ನೇ ಅದನ್ನೆಲ್ಲಾ ಮಾಡ್ತಾರಾ..? ಕಂಡಿತ ಇಲ್ಲ. ಈ ಪೋಸ್ಟ್ ಹಿಂದೆ ಯಶ್ ದೊಡ್ಡದನ್ನೇನೋ ಹೇಳೋ ಸುಳಿವು ಕೊಟ್ಟಂತೆ ಕಾಣುತ್ತಿದೆ. ಅದು ಟಾಕ್ಸಿಕ್ ಸಿನಿಮಾದ ಸುಳಿವಾ ಅಥವ ಹಿಂದಿಯ ರಾಮಾಯಣ ಸಿನಿಮಾ ಬಗ್ಗೆನಾ..? ಅನ್ನೋದೆ ಈಗಿರೋ ಕುತೂಹಲ. ಎನಿ ವೇ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇರಿ ಅಂತ ಕೇಳಿದ್ರಿಂದ 95 ಪರ್ಸೆಂಟ್ ಜನ ಪಾಸಿಟೀವ್ ಆನ್ಸರ್ ಕೊಟ್ಟಿದ್ದಾರೆ. ಹೀಗಾಗಿ ಇನ್ನುಂದೆ ಯಶ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರ್ತಾರಾ ಕಾದು ನೋಡ್ಬೇಕು.