Oscar 2023; ಕನ್ನಡಾಂಬೆ, ಭಾರತಾಂಬೆ ಮಡಿಲಿಗೆ ಅರ್ಪಣೆ; RRR ಹಾಡಿನ ಹಕ್ಕು ಖರೀದಿಸಿದ್ದ ಲಹರಿ ವೇಲು ಸಂತಸ

Mar 13, 2023, 11:47 AM IST

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಆರ್ ಆರ್ ಆರ್ ತಂಡಕ್ಕೆ ಅಭಿನಂದನೆಗಳ ಮಹೂಪೂರವೇ ಹರಿದು ಬರುತ್ತಿದೆ. ಸಿನಿಮಾ, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ವಿಶ್ ಮಾಡುತ್ತಿದ್ದಾರೆ. ಆರ್ ಆರ್ ಆರ್ ಹಾಡಿನ ಹಕ್ಕು ಖರೀದಿಸಿದ್ದ ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಲಹರಿ ವೇಲು, ಕನ್ನಡಾಂಬೆ ಮಡಿಲಿಗೆ, ಭಾರತಾಂಬೆ ಮಡಿಲಿಗೆ, ಸಂಗೀತ ಪ್ರೀಯರಿಗೆ, ಸಾಹಿತಿ, ಸಿನಿಮಾ ನಿರ್ಮಾಪಕರು ಹಾಗೂ ಎಲ್ಲಾ ಭಾರತೀಯರಿಗೆ ಈ ಪ್ರಶಸ್ತಿ ಅರ್ಪಣೆ' ಎಂದು ಹೇಳಿದ್ದಾರೆ. ಇಂಥ ಹಾಡನ್ನು ಲಹರಿ ಸಂಸ್ಥೆಯಲ್ಲಿ ರಿಲೀಸ್ ಮಾಡಿ ವಿಶ್ವದಾದ್ಯಂತ ಪ್ರಚಾರ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಲಹರಿ ವೇಲು ಹೇಳಿದ್ದಾರೆ.