ಮೀನುಗಳ ರಕ್ಷಣೆಗೆ ವಿಷಪ್ರಾಶನ? ತುಂಗಭದ್ರಾ ಹಿನ್ನೀರಿನಲ್ಲಿ ಸತ್ತುಬಿದ್ದಿವೆ ವಿದೇಶದಿಂದ ವಲಸೆ ಬಂದ ಪಕ್ಷಿಗಳು!

By Kannadaprabha News  |  First Published May 18, 2024, 1:55 PM IST

 ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ದೇಶ-ವಿದೇಶಿ ಪಕ್ಷಿಗಳಿಗೆ ವಿಷಪ್ರಾಶನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪಕ್ಷಿಗಳು ಸತ್ತು ಬೀಳುತ್ತಿರುವುದರಿಂದ ಪಕ್ಷಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪಕ್ಷಿಗಳಿಗೆ ವಿಷಪ್ರಾಶನ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು ಎಂಬ ಕೂಗು ಕೇಳಿ ಬಂದಿದೆ.


ಹೊಸಪೇಟೆ (ಮೇ.18) ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ದೇಶ-ವಿದೇಶಿ ಪಕ್ಷಿಗಳಿಗೆ ವಿಷಪ್ರಾಶನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಪಕ್ಷಿಗಳು ಸತ್ತು ಬೀಳುತ್ತಿರುವುದರಿಂದ ಪಕ್ಷಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪಕ್ಷಿಗಳಿಗೆ ವಿಷಪ್ರಾಶನ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು ಎಂಬ ಕೂಗು ಕೇಳಿ ಬಂದಿದೆ.

Tap to resize

Latest Videos

undefined

ತುಂಗಭದ್ರಾ ಹಿನ್ನೀರು ಪ್ರದೇಶ, ನಾರಾಯಣದೇವರ ಕೆರೆ, ಅಂಕಸಮುದ್ರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶ, ವಿದೇಶಿ ಪಕ್ಷಿಗಳಿವೆ. ಅದರಲ್ಲೂ ವಲಸೆ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಆದರೆ, ಈಗ ಹಿನ್ನೀರು ಪ್ರದೇಶದಲ್ಲಿ ಮೀನುಗಳನ್ನು ತಿನ್ನಬಾರದು ಎಂದು ವಿಷಪ್ರಾಶನ ಮಾಡಲಾಗುತ್ತಿದ್ದು, ಇದರಿಂದ ಪಕ್ಷಿಗಳಿಗೆ ಹೊಡೆತ ಬೀಳಲಾರಂಭಿಸಿದೆ ಎಂಬ ಗುಮಾನಿ ಇದೆ.

Davanagere: ಎಲೆಬೇತೂರು ಕೆರೆಗೆ ವಿಷ, 5 ಟನ್‌ ಮೀನು ಸಾವು: 5 ವರ್ಷಗಳ ಪರಿಶ್ರಮ ಹಾಳುಗಡೆವಿದ ದುರುಳರು

ಇನ್ನು ಕೆಲವರು ಹಿನ್ನೀರು ಪ್ರದೇಶದಲ್ಲಿ ಅಲಸಂಧಿ, ಉದ್ದು ಬೆಳೆಯುತ್ತಾರೆ. ಇವರು ಕೂಡ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪಕ್ಷಿಗಳಿಗೆ ವಿಷಪ್ರಾಶನ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ದಟ್ಟವಾಗಿದೆ.

ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹಕ್ಕಿಗಳಿಗೆ ವಿಷಪ್ರಾಶನ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಅಗತ್ಯ ಕ್ರಮ ಕೈಗೊಳ್ಳಲೇಬೇಕು ಎನ್ನುತ್ತಾರೆ ಪಕ್ಷಿ ಪ್ರೇಮಿ ವಿಜಯ್‌ ಇಟಗಿ.

click me!