ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಜೂ.1ರಂದು ಮತದಾನ ನಡೆಯಲಿದ್ದು, ಜೂ.4ರಂದು ಫಲಿತಾಂಶ ಹೊರಬರಲಿದೆ. ಮೋದಿ ಅವರು 2014 ಮತ್ತು 2019ರಲ್ಲಿ 2 ಬಾರಿ ಇಲ್ಲಿಂದ ಗೆದ್ದು 3ನೇ ಅವಧಿಯ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್‌ನ ಅಜಯ್ ರಾಯ್ ಮೂರನೇ ಬಾರಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಏಳು ಅಭ್ಯರ್ಥಿಗಳು ಲೋಕ ರಣಕಣದಲ್ಲಿ ಉಳಿದುಕೊಂಡಿದ್ದಾರೆ. ರಾಷ್ಟ್ರೀಯ ಸಮಾಜವಾದಿ ಜನಕ್ರಾಂತಿ ಪಕ್ಷದ ಪಾರಸ್ ನಾಥ್ ಕೇಶರಿ ಶುಕ್ರವಾರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ವಾರಣಾಸಿ ಲೋಕ ಅಖಾಡದ ಇತಿಹಾಸದಲ್ಲ ಇದೇ ಮೊದಲ ಬಾರಿಗೆ ಕಡಿಮೆ ಸ್ಪರ್ಧಿಗಳಿದ್ದಾರೆ. 1996ರಲ್ಲಿ ಗರಿಷ್ಠ 47 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. 1977ರಲ್ಲಿ 11 ಜನರು ಸ್ಪರ್ಧೆ ಮಾಡಿದ್ದರು. ಈ ಬಾರಿ ಅಂತಿಮವಾಗಿ ಏಳು ಜನರು ಸ್ಪರ್ಧೆಯಲ್ಲಿದ್ದಾರೆ.
ಶುಕ್ರವಾರ ನಾಮಪತ್ರ ಪಡೆಯಲು ಕೊನೆಯ ದಿನವಾಗಿತ್ತು. ಮೊದಲಿಗೆ ಎಂಟು ಅಭ್ಯರ್ಥಿಗಳು ಆಗಮಿಸಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡರು. ಅಂತಿಮ ಕ್ಷಣದಲ್ಲಿ ಆಗಮಿಸಿದ ಪಾರಸ್ ನಾಥ್ ಕೇಶರಿ ಸಹ ನಾಮಿನೇಷನ್ ವಾಪಸ್ ಪಡೆದರು. ಮಧ್ಯಾಹ್ನ ಮೂರು ಗಂಟೆಗೆ ಚುನಾವಣಾ ಅಧಿಕಾರಿ ಅಂತಿಮವಾಗಿ ಚುನಾವಣ ಕಣದಲ್ಲಿದ್ದಾರೆ ಎಂದು ಘೋಷಿಸಿದರು.
ವಾರಣಾಸಿ ಕ್ಷೇತ್ರಕ್ಕೆ ಒಟ್ಟು 41 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ನಾಮಪತ್ರಗಳ ಪರಿಶೀಲನೆ ವೇಳೆ 33 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ಜೂನ್ 1ರಂದು ಮತದಾನ ನಡೆಯಲಿದೆ.
ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು
1.ನರೇಂದ್ರ ಮೋದಿ: ಬಿಜೆಪಿ
2.ಅಜಯ್ ರೈ: ಕಾಂಗ್ರೆಸ್
3.ಅಥರ್ ಜಮಾಲ್ ಲಾರಿ: ಬಿಎಸ್‌ಪಿ (ಬಹುಜನ ಸಮಾಜ ಪಕ್ಷ)
4.ಗಗನ್ ಪ್ರಕಾಶ್ ಯಾದವ್: ಅಪ್ನಾ ದಾಲ್ ಕ್ಯಾಮೆರಾವಾಡಿ
5.ಕೋಲಿ ಶೆಟ್ಟಿ ಶಿವಕುಮಾರ್: ಯುಗ್ ತುಳಸಿ ಪಾರ್ಟಿ
6.ಸಂಜಯ್ ಕುಮಾರ್ ತಿವಾರಿ: ಪಕ್ಷೇತರ
7.ದಿನೇಶ್ ಕುಮಾರ್ ಯಾದವ್: ಪಕ್ಷೇತರ
ಪುತ್ರ ನಿಮ್ಮ ಸುಪರ್ದಿಗೆ ಒಪ್ಪಿಸಿದ್ದೇನೆ, ಆಶೀರ್ವದಿಸಿ ಗೆಲ್ಲಿಸಿ: ಸೋನಿಯಾ ಗಾಂಧಿ ಭಾವುಕ ಮಾತು
ಹ್ಯಾಟ್ರಿಕ್ ಗೆಲುವಿನ ಗುರಿಯಲ್ಲಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಗಳು ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದರು. ಇದೀಗ ಮೂರನೇ ಬಾರಿ ವಾರಣಾಸಿಯಿಂದ ಮೋದಿ ಸ್ಪರ್ಧೆ ಮಾಡುತ್ತಿದ್ದಾರೆ. ಮೇ 14ರಂದು ಪ್ರಧಾನಿ ಮೋದಿ ಅವರು ಮೊದಲು ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದ್ದರು. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಅಜಯ್ ರಾಯ್ ಸತತ 3ನೇ ಬಾರಿ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.
ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿಯನ್ನು ಗೆಲ್ಲಿಸಲು ಕಾಂಗ್ರೆಸ್‌ನಿಂದ ಎಲ್ಲ ಅಸ್ತ್ರ ಪ್ರಯೋಗ..!
ಇತ್ತ ರಾಯ್‌ಬರೇಲಿಯಿಂದ ಕಣಕ್ಕಿಳಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದಲೂ ಸ್ಪರ್ಧೆ ಮಾಡದ್ದಾರೆ. ತಾಯಿ ಸೋನಿಯಾ ಗಾಂಧಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಕಾರಣ ರಾಯ್‌ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿದ್ದಾರೆ. ಇತ್ತ ಕೇರಳದ ವಯನಾಡು ಕ್ಷೇತ್ರದಿಂದಲೂ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.
ಪುತ್ರ ರಾಹುಲ್ ಗಾಂಧಿಯನ್ನು ನಿಮ್ಮ ಸೇವೆಗೆ ಕಳುಹಿಸುತ್ತಿದ್ದೇನೆ. ಆತ ನಿಮ್ಮನ್ನು ನಿರಾಶೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ಭಾವನಾತ್ಮಕವಾಗಿ ಮತಯಾಚನೆ ಮಾಡಿದ್ದಾರೆ. ಇತ್ತೀಚೆಗೆ ರಾಯ್‌ಬರೇಲಿ ಜೊತೆ ತಮ್ಮ ಕುಟುಂಬದ ಒಡನಾಟ ಹೇಗಿತ್ತು ಎಂದು ರಾಹುಲ್ ಮತ್ತು ಸೋನಿಯಾ ಗಾಂಧಿ ಸಂಭಾಷಣೆಯ ವಿಡಿಯೋವನ್ನು ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು.