ನೇಹಾ, ಅಂಜಲಿ ಕೊಲೆ ಸಮಾಜಕ್ಕೆ ಒಳ್ಳೆ ವಿಚಾರವಲ್ಲ: ಸಚಿವ ಸಂತೋಷ್ ಲಾಡ್

By Ravi Janekal  |  First Published May 18, 2024, 2:29 PM IST

ನೇಹಾ, ಅಂಜಲಿ ಕೊಲೆ ಸಮಾಜಕ್ಕೆ ಒಳ್ಳೆಯ ವಿಚಾರವಲ್ಲ. ಸಮಾಜಘಾತುಕ ಕೆಲಸ ಮಾಡುವ ಇಂತಹ ಯುವಕರ ಬಗ್ಗೆ ಜಾಗೃತಿ ಆಗಬೇಕು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಿಗೆ ಈ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ಮಾಡಲು, ಸಿಐಡಿಗೆ ವಹಿಸಲು ಆಗ್ರಹಿಸುತ್ತೇನೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.


ಹುಬ್ಬಳ್ಳಿ (ಮೇ.18): ನೇಹಾ, ಅಂಜಲಿ ಕೊಲೆ ಸಮಾಜಕ್ಕೆ ಒಳ್ಳೆಯ ವಿಚಾರವಲ್ಲ. ಸಮಾಜಘಾತುಕ ಕೆಲಸ ಮಾಡುವ ಇಂತಹ ಯುವಕರ ಬಗ್ಗೆ ಜಾಗೃತಿ ಆಗಬೇಕು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವರಿಗೆ ಈ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ಮಾಡಲು, ಸಿಐಡಿಗೆ ವಹಿಸಲು ಆಗ್ರಹಿಸುತ್ತೇನೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಇಂದು ಹುಬ್ಬಳ್ಳಿಯಲ್ಲಿ ಅಂಜಲಿ ಮನೆಗೆ ಭೇಟಿ ನೀಡಿದ ಸಚಿವರು ಕುಟುಂಬಸ್ಥರಿಗೆ ಸಂತ್ವಾನ ಹೇಳಿ, ಸಂತೋಷ್‌ ಲಾಡ್ ಫೌಂಡೇಷನ್ ನಿಂದ 2 ಲಕ್ಷ ರೂಪಾಯಿ ಚೆಕ್ ನೀಡಿದರು ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಂಜಲಿ ಕುಟುಂಬದವರು ಮೊದಲೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಕ್ರಮ ಕೈಗೊಂಡಿಲ್ಲ ಅಂತಾ ಕುಟುಂಬದವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಯಾವ ಅಧಿಕಾರಿಯನ್ನು ರಕ್ಷಿಸುವುದಿಲ್ಲ ಎಂದರು.

Tap to resize

Latest Videos

ಮೋದಿಯವರ ಮನ್ ಕೀ ಬಾತ್ ಕೇಳಿ ಕಿವೀಲಿ ರಕ್ತ ಬಂದಿದೆ: ಬಿಜೆಪಿ ವಿರುದ್ಧ ಲಾಡ್ ವಾಗ್ದಾಳಿ

click me!