ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಿದ್ದಾರೆ ನಯನತಾರಾ?

Mar 24, 2022, 4:44 PM IST

ಕಾಲಿವುಡ್ ಸೂಪರ್ ನಟಿ ನಯನತಾರಾ ಮತ್ತು ಪತಿ ನಿರ್ದೇಶಕ ವಿಘ್ನೇಶ್‌ ಶಿವನ್‌ ಎಂಗೇಜ್ ಆಗಿರುವ ವಿಚಾರ ಎಲ್ಲಿಗೂ ಗೊತ್ತಿದೆ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದಾಗಲೆಲ್ಲಾ ಶೀಘ್ರದಲ್ಲಿ ಎಂದು ಹೇಳುವ ಈ ಜೋಡಿ ಇದೀಗ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ. ಆದರೆ ಈ ಬಗ್ಗೆ ನಯತಾರಾ ಆಪ್ತ ಮೂಲಗಳು ಪ್ರತಿಕ್ರಿಯೆ ನೀಡಿದ್ದು 'ಈ ರೀತಿಯ ಸುದ್ದಿ ಕೇಳಿ ನಗು ಬರುತ್ತೆ ಅಷ್ಟೆ. ಪ್ರತಿ 3 ತಿಂಗಳಿಗೊಮ್ಮೆ ಈ ರೀತಿಯ ಸುದ್ದಿ ಕೇಳುತ್ತಿರುತ್ತೇವೆ. ಅವರಿನ್ನೂ ಮದುವೆ ಆಗಿಲ್ಲ' ಎಂದು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment