Jan 22, 2023, 5:23 PM IST
ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಫ್ಯಾನ್ಸ್'ಗೆ ಈ ವರ್ಷ ನಿರಾಸೆ ಅನ್ನೋದು ಕಟ್ಟಿಟ್ಟ ಬುತ್ತಿ ಅನ್ನೋದು ಸತ್ಯ. ಯಾಕಂದ್ರೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಮಾಡಿ ಐದು ತಿಂಗಳಾದ್ರು ಮತ್ತೆ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಆ ಕಡೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಅನೌನ್ಸ್ ಯಾವಾಗ ಅನ್ನೋದು ಕಳೆದ ಏಳೆಂಟು ತಿಂಗಳಿನಿಂದ ಬಿಲಿಯನ್ ಡಾಲರ್ ಪ್ರಶ್ನೆಯಾಗೆ ಉಳಿದಿದೆ. ಈ ಕಡೆ ರಿಷಬ್ ಶೆಟ್ಟಿ ಕಾಂತಾರ ಆದ್ಮೇಲೆ ಆ ಸಿನಿಮಾದ ಸಕ್ಸಸ್ ಸಂಭ್ರಮದಲ್ಲೇ ಇದ್ದಾರೆ ಹೊರತು ಹೊಸ ಸಿನಿಮಾ ಅನೌನ್ಸ್ ಮಾಡೋ ಯಾವ್ದೇ ರಿಸ್ಕ್ ತೆಗೆದುಕೊಂಡಿಲ್ಲ. ಹೀಗಾಗಿ ಈ ವರ್ಷ ಈ ತ್ರಿ ಸ್ಟಾರ್ಸ್ ಯಾವ್ದೇ ಸಿನಿಮಾ ಇಲ್ಲವೇ ಇಲ್ಲ ಅನ್ನೋದು ಸ್ಪಷ್ಟ.
ವರ್ಲ್ಡ್ ಸಿನಿಮಾಗಳ ಜೊತೆ ಕಾಂಪಿಟೇಶನ್: ಒಂದೇ ದಾರಿಯಲ್ಲಿ ಹೊರಟ ರಾಜಮೌಳಿ & ಯಶ್