ಮಗಳನ್ನು ಹೆಗಲ ಮೇಲೆ ಹಾಕಿಕೊಂಡು ಲಾಲಿ ಹಾಡು ಹಾಡುತ್ತಿದ್ದೆ: ನಟಿ ಸಪ್ತಮಿ ಗೌಡ ತಂದೆ ಮಾತು

Jan 7, 2023, 10:50 AM IST

ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಪರಿಚಯವಾಗಿರುವ ನಟಿ ಸಪ್ತಮಿ ಗೌಡ ಹಾಗೂ ಅವರ ತಂದೆ ಎಸ್‌.ಕೆ ಉಮೇಶ್‌ ಹಲವು ಇಂಟ್ರಸ್ಟಿಂಗ್‌ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಸಪ್ತಮಿ ಗೌಡ ಚಿಕ್ಕವಳು ಇರುವಾಗ ಅವಳನ್ನು ಹೆಗಲ ಮೇಲೆ ಹಾಕಿಕೊಂಡು ಲಾಲಿ ಹಾಡು ಹಾಡಬೇಕಿತ್ತು. ಸ್ಕೂಲಿಗೆ ಹೋಗುವಾಗ ರೆಡಿ ಮಾಡಿ ಸ್ಕೂಲಿಗೆ ಬಿಟ್ಟು ಬಂದ ಸಂದರ್ಭ ಹಾಗೂ ಭಾನುವಾರ ಎಣ್ಣೆಸ್ನಾನ ಹೀಗೆ ಹಲವಾರು ವಿಷಯಗಳ ಬಗ್ಗೆ ತಂದೆ-ಮಗಳು ಮಾತನಾಡಿದ್ದಾರೆ. ಹಾಗೆ ಸಪ್ತಮಿ ಗೌಡ ಸಿನಿಮಾ ಕ್ಷೇತ್ರದವರಾದರೆ, ಅವರ ತಂದೆ ಎಸ್‌.ಕೆ ಉಮೇಶ್‌ ಪೊಲೀಸ್‌ ಇಲಾಖೆಯವರು. ಇಬ್ಬರಿಗೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಇಂಟ್ರಸ್ಟಿಂಗ್‌ ಪ್ರಶ್ನೆಗಳನ್ನು ಕೇಳಲಾಯಿತು. ಎಸ್‌.ಕೆ ಉಮೇಶ್‌ ಎಷ್ಟು ಬಾರಿ ಟ್ರಾನ್ಸ್ ಫರ್‌ ಆಗಿದ್ದಾರೆ ಹಾಗೂ ಅವರ ಡ್ಯೂಟಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಯಶ್‌ ಶೋ ಮ್ಯಾನ್‌ ಎಂದಿದ್ದ ರಶ್ಮಿಕಾಗೆ ರಾಕಿಭಾಯ್ ಜೊತೆ ನಟಿಸುವ ಆಸೆ: ...