ಕರ್ನಾಟಕ ವಿವಿಧ ಭಾಗಗಳ ಸಂಪರ್ಕಿಸುವ ವಂದೇ ಭಾರತ್ ರೈಲಿನ ಪೈಕಿ ಹುಬ್ಬಳ್ಳಿ ರೈಲು ಸೇವೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನಿಲುಗಡೆ, ಸಮಯ ಸೇರಿದಂತೆ ವೇಳಾಪಟ್ಟಿ ಬದಲಾಗಿದೆ.
ಬೆಂಗಳೂರು(ಅ.04) ದೇಶದಲ್ಲಿ ವಂದೇ ಭಾರತ್ ರೈಲು ಸೇವೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳ ತಲುಪವ ಹಾಗೂ ಉತ್ತಮ ಸೇವೆ ಒದಗಿಸುತ್ತಿರುವ ವಂದೇ ಭಾರತ್ ದೇಶದ ಮೂಲೆ ಮೂಲೆಗೆ ಸಂಪರ್ಕ ಕಲ್ಪಿಸುತ್ತಿದೆ. ಕರ್ನಾಟದಲ್ಲಿರುವ ವಂದೇ ಭಾರತ್ ರೈಲುಗಳ ಪೈಕಿ ಹುಬ್ಭಳ್ಳಿ ಸಂಪರ್ಕಿಸುವ ರೈಲು ಪ್ರಮುಖವಾಗಿದೆ. ಇದೀಗ ಹುಬ್ಬಳ್ಳಿಯ ವೇಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿನ ಸಮಯ, ನಿಲುಗಡೆಯಲ್ಲಿ ಕೆಲ ಬದಲಾವಣೆಯಾಗಿದೆ.
ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು 8 ಮಾಡರ್ನ್ ಕೋಚ್ ಹೊಂದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಹಲವು ಪ್ರಮುಖ ಪಟ್ಟಣ, ನಗರವನ್ನು ಸಂಪರ್ಕಿಸುವ ಈ ರೈಲು ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ಕಾರಣಗಳಿಂದ ಪ್ರಮುಖವಾಗಿದೆ. ಇದೀಗ ನಿಲುಗಡೆಗಳನ್ನು ಹೆಚ್ಚಿಸಲಾಗಿದೆ. ಈ ಪೈಕಿ ಧಾರವಾಡ, ಬೆಳಗಾವಿ, ಕೊಲ್ಹಾಪುರ, ಮೀರಜ್, ಸಾಂಗ್ಲಿ, ಸತಾರ ಹಾಗೂ ಕರಾದ್ ಸ್ಟೇಶನ್‌ಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಮಾಡಲಾಗುತ್ತಿದೆ.
undefined
ಈ ರಾಜ್ಯದ ವಂದೇ ಭಾರತ್ ರೈಲು ಸೇವೆ ಸ್ಥಗಿತಕ್ಕೆ ಮುಂದಾದ ಕೇಂದ್ರ ಸರ್ಕಾರ!
ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಹೊರಡುವ ಸಮಯ ಹಾಗೂ ತಲುಪುವ ಸಮಯವೂ ಬದಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ.
ಬದಲಾದ ಸಮಯ ಇಲ್ಲಿದೆ
ಹುಬ್ಬಳ್ಳಿಯಿಂದ ಪುಣೆ ವಂದೇ ಭಾರತ್
ಹುಬ್ಬಳ್ಳಿಯಿಂದ ಹೊರಡುವ ಸಮಯ ಬೆಳಗ್ಗೆ 5 ಗಂಟೆ
ಪುಣೆ ತಲುಪುವ ಸಮಯ ಮಧ್ಯಾಹ್ನ 1.30
ಪುಣೆಯಿಂದ ಹುಬ್ಬಳ್ಳಿ ವಂದೇ ಭಾರತ್
ಪುಣೆಯಿಂದ ಹೊರಡುವ ಸಮಯ ಮಧ್ಯಾಹ್ನ 2.15
ಹುಬ್ಬಳ್ಳಿ ತಲುಪುವ ಸಯಮ ರಾತ್ರಿ 10.45
ನಿಲ್ದಾಣಕ್ಕೆ ಆಗಮಿಸುವ ಹಾಗೂ ಹೊರಡುವ ಸಮಯ
ಬೆಳಗಾವಿ
ಆಗಮನ ಸಮಯ 8.15 ಬೆಳಗ್ಗೆ
ಹೊರಡುವ ಸಮಯ 8.20 ಬೆಳಗ್ಗೆ
ಧಾರವಾಡ
ಆಗಮಿಸುವ ಸಮಯ ಬೆಳಗ್ಗೆ 10.13
ಹೊರಡುವ ಸಮಯ ಬೆಳಗ್ಗೆ 10.15
ಉದ್ಘಾಟನೆಗೂ ಮುನ್ನವೇ ವಂದೇ ಭಾರತ್‌ಗೆ ಕಲ್ಲು: ಐವರ ಸೆರೆ
530 ಪ್ರಯಾಣಿಕರ ಸಾಮರ್ಥ್ಯದ ಹುಬ್ಭಳ್ಳಿ ಪುಣೆ ವಂದೇ ಭಾರತ್ ರೈಲು ಕರ್ನಾಟಕದ 10ನೇ ವಂದೇ ಭಾರತ್ ರೈಲಾಗಿದೆ. ಈ ವಂದೇ ಭಾರತ್ ರೈಲು ಎರಡು ರಾಜ್ಯಗಳ ನಡುವಿನ ಸಾಂಸ್ಕೃತಿ, ಹಾಗೂ ಐತಿಹಾಸಿಕ ಸ್ಥಳಗಳ ಕೊಂಡಿಯಾಗಿದೆ.