ಗೋವಿಂದ ಕಾಲಿಗೆ ಗುಂಡೇಟು ಬಿದ್ದದ್ದು ಹೇಗೆ? ಅಂದು ನಡೆದ ಭಯಾನಕ ಘಟನೆ ಕುರಿತು ನಟ ಹೇಳಿದ್ದೇನು?

By Suchethana D  |  First Published Oct 4, 2024, 10:02 PM IST

ಕೆಲ ದಿನಗಳ ಹಿಂದೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಇಂದು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಅಂದು ನಡೆದ ಘಟನೆ ಕುರಿತು ನಟ ಹೇಳಿದ್ದೇನು? 
 


ಕಾಲಿಗೆ ಗುಂಡೇಟು ತಗುಲಿ ಆಸ್ಪತ್ರೆ ಸೇರಿದ್ದ ಬಾಲಿವುಡ್​ ನಟ ಗೋವಿಂದ ಅವರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.  ಘಟನೆಗೆ ಕುರಿತಂತೆ  ಪತ್ರಕರ್ತರು ಕೇಳಿರುವ ಪ್ರಶ್ನೆಗೆ ನಟ ಗೋವಿಂದ್​, ಕೋಲ್ಕತಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಕ್ಕೆಂದು ಬೆಳಿಗ್ಗೆ ಐದು ಗಂಟೆ ಸುಮಾರಿಗೆ ಭಾಗವಹಿಸಲು ಹೋಗುವ ಸಂದರ್ಭದಲ್ಲಿ  ಕಪಾಟು ತೆರೆದಾಗ ಆಕಸ್ಮಿಕವಾಗಿ  ರಿವಾಲ್ವರ್‌ ಬಿದ್ದು ಟ್ರಿಗರ್‌ ಒತ್ತಿ ಹೋಯಿತು. ಒಂದು ಕ್ಷಣ ಏನಾಯಿತೆಂದು ತಿಳಿಯಲಿಲ್ಲ. ಆದರೆ ಏನೋ ಅನಾಹುತ ಆಯಿತು ಎಂದು ಗೊತ್ತಾಯಿತು. ಕಾಲಿನಿಂದ ರಕ್ತ ಬರತೊಡಗಿತು. ಕೂಡಲೇ ವೈದ್ಯರಿಗೆ ಕರೆ ಮಾಡಿದೆ ಎಂದಿದ್ದಾರೆ.  ಆದರೆ ಈ ಹಿಂದೆ ನಟ, ರಿವಾಲ್ವರ್  ಕ್ಲೀನ್ ಮಾಡುವಾಗ ಅನ್ಲಾಕ್ ಆಗಿತ್ತು. ಅದು ಮಿಸ್ ಫೈರ್ ಆಯಿತು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ನಟ ಈಗ ಈ ರೀತಿ ಹೇಳುತ್ತಿರುವ ಕಾರಣ, ಅಂದು ನಿಜಕ್ಕೂ ಏನಾಯಿತು ಎನ್ನುವ ಗೊಂದಲ ಇನ್ನೂ ಅಭಿಮಾನಿಗಳಲ್ಲಿ ಇದೆ.  ಪೊಲೀಸರಿಗೆ ನಟನ ಹೇಳಿಕೆ ಸಂಪೂರ್ಣ ತೃಪ್ತಿ ತಂದಿರಲಿಲ್ಲ. ಆದ್ದರಿಂದ ಮತ್ತೊಮ್ಮೆ ವಿಚಾರಣೆ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ಗೋವಿಂದ ಅವರು ಇನ್ನೊಂದು ರೀತಿ ಹೇಳುತ್ತಿದ್ದಾರೆ.  ಅಂದಹಾಗೆ, ಮೊಣಕಾಲಿನ ಕೆಳಗೆ ಗುಂಡೇಟು ತಗುಲಿತ್ತು.  ಗುಂಡು ಹೊರಗೆ ತೆಗೆಯಲಾಗಿದ್ದು, 8-10 ಹೊಲಿಗೆ ಹಾಕಲಾಗಿದೆ ಎಂದು ನಟನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಅಗರ್ವಾಲ್ ತಿಳಿಸಿದ್ದಾರೆ. ತಮ್ಮ ಬಗ್ಗೆ ಅಭಿಮಾನಿಗಳು ಹೆದರಬಾರದು ಎನ್ನುವ ಕಾರಣಕ್ಕೆ ಗೋವಿಂದ ಅವರು,  ಆಡಿಯೋ ಸಂದೇಶ ಕಳಿಸಿದ್ದರು.  ‘ಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನನಗೆ ತಗುಲಿದ್ದ ಗುಂಡು ತೆಗೆಯಲಾಗಿದೆ’ ಎಂದು ಹೇಳಿದ್ದರು. ಈಗ ಡಿಸ್​ಚಾರ್ಜ್​ ಆಗಿದ್ದಾರೆ.  

Tap to resize

Latest Videos

undefined

ರಣಬೀರ್​ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?
 

 ಗೋವಿಂದ ಅವರ ಮನೆಯಲ್ಲೇ ಈ ಘಟನೆ ನಡೆದಿದೆ. ಆಗ ಮನೆಯಲ್ಲಿ ನೀವೊಬ್ಬರೇ ಇದ್ರಾ ಸರ್​ ಎನ್ನುವ ಪತ್ರಕರ್ತರ ಪ್ರಶ್ನೆಗೆ ನಟ ಏನೂ ಉತ್ತರ ಕೊಡಲಿಲ್ಲ. ಬದಲಿಗೆ ಘಟನೆ ಹೇಗೆ ಆಯಿತು ಎನ್ನುವುದನ್ನು ವಿವರಿಸಿದ್ದಾರೆ. ಆದರೆ  ರಿವೋಲ್ವಾರ್​ನಿಂದ ಗುಂಡು ಸಿಡಿದಾಗ ಆ ಸ್ಥಳದಲ್ಲಿ ಗೋವಿಂದ ಒಬ್ಬರೇ ಇದ್ದರು. ಆದ್ದರಿಂದ ಬೇರೆ ಯಾರಿಂದಲೋ ಹತ್ಯೆ ಪ್ರಯತ್ನ ನಡೆದಿಲ್ಲ ಎಂಬುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಕೂಡ ಹೇಳಿದ್ದಾರೆ.  

ಸದ್ಯ., ಇನ್ಸ್​ಪೆಕ್ಟರ್​ ದಯಾನಾಯಕ್​ ಅವರ ನೇತೃತ್ವದ ತಂಡವು ಈ ಪ್ರಕರಣದ ತನಿಖೆ ಮಾಡುತ್ತಿದೆ. ಇದಾಗಲೇ ಅವರು ಗೋವಿಂದ ಚಿಕಿತ್ಸೆ ಪಡೆಯುತ್ತಿರುವ  ಆಸ್ಪತ್ರೆಗೆ  ಭೇಟಿ ನೀಡಿ, ನಟನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆಗಲೂ ಗೋವಿಂದ ಇದೇ ರೀತಿಯ ಉತ್ತರ ಕೊಟ್ಟಿದ್ದರು ಎನ್ನಲಾಗಿದೆ. ಅಂದಹಾಗೆ,  ತಮ್ಮ ಭದ್ರತೆಗಾಗಿ ಕೆಲವು ನಟರಂತೆ ಗೋವಿಂದ ಅವರು ಕೂಡ  ಲೈಸೆನ್ಸ್​ ಹೊಂದಿರುವ ರಿವಾಲ್ವರ್​ ಹೊಂದಿದ್ದಾರೆ.  ಅವರ ರಿವೋಲ್ವಾರ್​ ತುಂಬ ಹಳೆಯದಾಗಿದ್ದು, ಸರಿಯಾಗಿ ಲಾಕ್​ ಆಗಿರದ ಕಾರಣ ಮಿಸ್​ಫೈರ್​ ಆಗಿರಬಹುದು ಎಂದೂ ಊಹಿಸಲಾಗಿದೆ. ಆದರೂ ಸತ್ಯ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

ನಾನು ಸ್ಮೃತಿ ಇರಾನಿ... ವಯಸ್ಸು 21... ಎತ್ತರ 5.8 ಅಡಿ... ರಾಜಕೀಯ ಅಂದ್ರೆ ಎನ್ನುತ್ತಲೇ ಕ್ಯಾಟ್​ ವಾಕ್​: ವಿಡಿಯೋ ವೈರಲ್​

click me!