ಮೊದ್ಲು ಬರೋದು ಮೂನಾ? ಸನ್ನಾ? ಸೀತಾರಾಮ ಪ್ರಿಯಾಳ ಉತ್ರ ಕೇಳಿ ನಾಚಿಕೊಂಡ ಶಿವಣ್ಣ, ಅನುಶ್ರೀ!

Published : Oct 04, 2024, 10:30 PM IST
ಮೊದ್ಲು ಬರೋದು ಮೂನಾ? ಸನ್ನಾ? ಸೀತಾರಾಮ ಪ್ರಿಯಾಳ ಉತ್ರ ಕೇಳಿ ನಾಚಿಕೊಂಡ ಶಿವಣ್ಣ, ಅನುಶ್ರೀ!

ಸಾರಾಂಶ

ಸೀತಾರಾಮ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಸನ್ನು, ಮೂನು ಪ್ರಶ್ನೆ ಕೇಳಿ ಎಲ್ಲರೂ ಬಿದ್ದೂ ಬಿದ್ದೂ ನಗುವಂತೆ  ಮಾಡಿದ್ದಾರೆ. ಏನದು ಪ್ರಶ್ನೆ? ಏನದು ಉತ್ತರ?  

ಮೊದ್ಲು ಬರೋದು ಮೂನಾ? ಸನ್ನಾ? ಹೀಗೆ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಸೀತಾರಾಮ ಸೀರಿಯಲ್​ ಪ್ರಿಯಾ ಅಂದ್ರೆ ರಿಯಲ್ಲಾಗಿ ಮೇಘನಾ ಶಂಕರಪ್ಪ ಅವರು ತೀರ್ಪುಗಾರರಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಆರ್ಯವರ್ಧನ್​ ಗುರೂಜಿ, ಆ್ಯಂಕರ್​ ಅನುಶ್ರೀ, ರಕ್ಷಿತಾ ಎಲ್ಲರೂ ತಮ್ಮದೇ ಆದ ಉತ್ತರ ನೀಡಿದ್ದಾರೆ. ಬೆಳಿಗ್ಗೆ ಆದ ಕೂಡ್ಲೇ ಮೊದ್ಲು ನೋಡೋದೇ ಸೂರ್ಯ, ಅದಕ್ಕಾಗಿ ಸೂರ್ಯನೇ ಅಂದ್ರೆ ಸನ್ನೇ ಮೊದ್ಲು ಬರ್ತಾನೆ ಎಂದು ಒಬ್ಬರು ಹೇಳಿದ್ರೆ, ಇಲ್ಲಲ್ಲ... ಮೊದ್ಲು ಬರೋದು ಚಂದ್ರ ಅಂದ್ರೆ ಮೂನು ಎಂದು ಮತ್ತೊಬ್ಬರು ಹೇಳಿದ್ದಾರೆ. ಆದ್ರೆ ಇದ್ಯಾವುದಕ್ಕೂ ನಟಿ ಮೇಘನಾ ಅಲ್ಲ, ಎಲ್ಲರ ಉತ್ತರ ತಪ್ಪು ಎಂದಿದ್ದಾರೆ. ಕೊನೆಗೆ ಎಲ್ಲರೂ ಉತ್ತರ ಏನು ಎಂದು ತಲೆ ಕೆಡಿಸಿಕೊಂಡರೂ ಅವರ ಯಾವ ಉತ್ತರವೂ ಸರಿಯಲ್ಲ ಎನ್ನುವುದು ಮೇಘನಾ ಮಾತು.

ಕೊನೆಗೆ ನಟಿ ಉತ್ತರ ಹೇಳಿದ್ದಾರೆ. ಈ ಉತ್ತರಕ್ಕೆ ರಕ್ಷಿತಾ, ಶಿವರಾಜ್  ಕುಮಾರ್​, ಆ್ಯಂಕರ್​ ಅನುಶ್ರೀ ಎಲ್ಲರೂ ನಾಚಿಕೊಂಡಿದ್ದಾರೆ, ಅಯ್ಯಯ್ಯೋ ಎಂದಿದ್ದಾರೆ! ಹೌದು ಅಷ್ಟಕ್ಕೂ ಮೇಘನಾ ನಾಚಿಕೊಳ್ಳುವಂಥ ಉತ್ತರ ಕೊಟ್ಟಿದ್ದೇನು ಗೊತ್ತಾ? ಮೂನು ಎನ್ನುವುದು. ನೀವು ಚಂದ್ರ ಎಂದರೂ ಓಕೆ. ಅದ್ಯಾಕೆ? ಅದರಲ್ಲಿ ನಗುವಂಥದ್ದು ಏನಿದೆ ಅಂತಂದ್ರೆ ಮೇಘನಾ ಕೊಟ್ಟ ಸ್ಪಷ್ಟನೆ ಏನೆಂದ್ರೆ ಮೊದಲು ಬರುವುದು ಹನಿಮೂನು ಅಂದ್ರೆ ಮಧುಚಂದ್ರ. ಹನಿಮೂನು ಆದ್ಮೇಲೆ ಸನ್ನು ಅಂದ್ರೆ  ಮಗ ಬರೋದು ಎಂದು! ಈ ಉತ್ತರ ಕೇಳಿ ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಒಟ್ಟಿನಲ್ಲಿ ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯ ಮೇಲೆ ಮೇಘನಾ ಅವರು ಟಫ್​ ಕಾಂಪಿಟೀಟರ್​ ಆಗುವ ಜೊತೆ ಜೊತೆಗೆ ಹೀಗೆ ಜೋಕ್​ ಮಾಡುತ್ತಾ, ಪ್ರಶ್ನೆ ಕೇಳುತ್ತಾ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಲೇ ಇರುತ್ತಾರೆ. 

ನಾನು ಸ್ಮೃತಿ ಇರಾನಿ... ವಯಸ್ಸು 21... ಎತ್ತರ 5.8 ಅಡಿ... ರಾಜಕೀಯ ಅಂದ್ರೆ ಎನ್ನುತ್ತಲೇ ಕ್ಯಾಟ್​ ವಾಕ್​: ವಿಡಿಯೋ ವೈರಲ್​

ಇನ್ನು ಸೀತಾರಾಮ ಸೀರಿಯಲ್​ನಲ್ಲಿ ಪ್ರಿಯಾ ಆಸ್ಪತ್ರೆ ಸೇರಿದ್ದಾಳೆ. ಬ್ರೆಸ್ಟ್​ ಕ್ಯಾನ್ಸರ್​ಗೆ ಆಪರೇಷನ್​ ಇದೆ. ಯಾವಾಗಲೂ ನಗುನಗುತ್ತಲೇ ಇರೋ ಪ್ರಿಯಾಳ ಈ ಕಷ್ಟವನ್ನು ಗಂಡ ಅಶೋಕ್​ಗಾಗೀ ಸ್ನೇಹಿತರಾದ ಸೀತಾ  ಮತ್ತು ರಾಮ್​ಗಾಗಲೀ ನೋಡಲು ಆಗ್ತಿಲ್ಲ. ಆದರೆ ಪ್ರಿಯಾ ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದು ಬರುವೆ ಎನ್ನುತ್ತಿದ್ದಾಳೆ. ಇದು ಸೀತಾರಾಮ ಪ್ರಿಯಾಳ ಸುದ್ದಿಯಾದ್ರೆ, ಇನ್ನು ಅಸಲಿ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ಅವರ  ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಖಡಕ್‌ ಬಂಗಾರಮ್ಮ, ಸಾಫ್ಟ್‌ ಅಶೋಕ ಇಬ್ರೂ ಹುಟ್ಟಿದ್ದು ಇವತ್ತೇ! ಇಬ್ಬರೂ ತಾರೆಯರ ಇಂಟರೆಸ್ಟಿಂಗ್‌ ವಿಷ್ಯ ಇಲ್ಲಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ: ಕೂದಲಿಲ್ಲದ ಭೂಮಿ ನೋಡೋಕಾಗಲ್ಲ ಎಂದ ವೀಕ್ಷಕರು
Bigg Boss 13ಕ್ಕೆ ಬಂತು ಆಫರ್​: ಷೋಗೆ ಹೋಗಲ್ಲ ಎಂದ ಮುಸ್ಲಿಂ ಮುಖಂಡ ಏನ್​ ಹೇಳಿದ್ರು ಕೇಳಿ