ಉತ್ತರಕನ್ನಡ: ಶಿರೂರು ಭೂಕುಸಿತ ಪ್ರಕರಣ, ಮೃತ ಅರ್ಜುನ್ ಲಾರಿ ಮಾಲೀಕ ಮುನಾಫ್ ವಿರುದ್ಧ ದೂರು

By Girish GoudarFirst Published Oct 4, 2024, 9:54 PM IST
Highlights

ಕೇರಳದ ಮೃತ ಅರ್ಜುನ್ ಸಹೋದರಿ ಅಂಜು ಅವರಿಂದ ಲಾರಿ ಮಾಲೀಕ ಮುನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಗುಡ್ಡ ಕುಸಿತವಾಗಿತ್ತು. ಈ ವೇಳೆ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೇರಳದ ಚಾಲಕ ಅರ್ಜುನ್ ಮುಳುಗಿ ಸಾವಿಗೀಡಾಗಿದ್ದ.  ಮೃತನ ಕುಟುಂಬದ ಪರಿಸ್ಥಿತಿಯನ್ನು ಮುನಾಫ್ ಬಂಡವಾಳವನ್ನಾಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. 

ಉತ್ತರಕನ್ನಡ(ಅ.04):  ಜಿಲ್ಲೆಯ ಅಂಕೋಲಾ ಶಿರೂರು ಭೂ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮೃತ ಅರ್ಜುನ್ ಲಾರಿ ಮಾಲೀಕ ಮುನಾಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಅರ್ಜುನ್ ಹೆಸರು ಬಳಸಿ ಮುನಾಫ್ ಹಣ ಮಾಡುತ್ತಿದ್ದ ಎಂದು ಆರೋಪಿ ಮೃತ ಅರ್ಜುನ್ ಸಹೋದರಿ ದೂರು ನೀಡಿದ್ದಾರೆ. 

ಕೇರಳದ ಮೃತ ಅರ್ಜುನ್ ಸಹೋದರಿ ಅಂಜು ಅವರಿಂದ ಲಾರಿ ಮಾಲೀಕ ಮುನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಗುಡ್ಡ ಕುಸಿತವಾಗಿತ್ತು. ಈ ವೇಳೆ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೇರಳದ ಚಾಲಕ ಅರ್ಜುನ್ ಮುಳುಗಿ ಸಾವಿಗೀಡಾಗಿದ್ದ.  ಮೃತನ ಕುಟುಂಬದ ಪರಿಸ್ಥಿತಿಯನ್ನು ಮುನಾಫ್ ಬಂಡವಾಳವನ್ನಾಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. 

Latest Videos

ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 5 ಮಕ್ಕಳನ್ನು ಕಾಪಾಡಿದ ರಿಯಲ್ ಹೀರೋ ಹೂವಾಗೌಡ

ಅರ್ಜುನ್ ಫೋಟೊ ಬಳಸಿ ಪ್ರಚಾರ ಪಡೆದ ಮುನಾಫ್ ಹಣ ಸಂಗ್ರಹ ಮಾಡುತ್ತಿದ್ದದ್ದಾಗಿ ಅಂಜು ಆರೋಪಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದ ಮುನಾಫ್ ತಮ್ಮ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅರ್ಜುನ್ ಸಹೋದರಿ ಅಂಜು ಅವರು ದೂರು ನೀಡಿದ್ದಾರೆ. 

ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಬಗ್ಗೆ ಅಪಪ್ರಚಾರ ಮಡುತ್ತಿರುವವರ ವಿರುದ್ಧವೂ ದೂರು ನೀಡಿದ್ದಾರೆ. ಅರ್ಜುನ್ ಸಹೋದರಿ ದೂರಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚೆವಾಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಸೈಬರ್ ದಾಳಿ ನಡೆಸಲು, ಸಮುದಾಯ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಮನಾಫ್ ಪರಿಸ್ಥಿತಿ ಸೃಷ್ಠಿಸಿದ್ದಾರೆ. ಅವರು ನಮ್ಮನ್ನು ನಿರ್ಗತಿಕರು ಎಂದು ನಿರೂಪಿಸಿದ್ದು, ಇದು ಕುಟುಂಬಸ್ಥರಿಗೆ ನೋವುಂಟು ಮಾಡಿದೆ ಎಂದು ಮೃತ ಅರ್ಜುನ್ ಸಹೋದರಿ ಅಂಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಮನಾಫ್ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ 192 (ಗಲಭೆಗೆ ಕುಮ್ಮಕ್ಕು) ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) (ಸಾರ್ವಜನಿಕ ಶಾಂತಿ ಭಂಗ ಮತ್ತು ಅಶಾಂತಿ ನಿರ್ಮಾಣ) ಅಡಿ ಪ್ರಕರಣ ದಾಖಲಾಗಿದೆ.  ಶಿರೂರು ಶೋಧ ಕಾರ್ಯ ಹಳ್ಳ ಹಿಡಿಸಿ ಮಾಧ್ಯಮಗಳಿಗೆ ಆರೋಪಿ ಮುನಾಫ್ ಸುಳ್ಳು ಮಾಹಿತಿ ನೀಡಿದ್ದನಂತೆ. ಆರೋಪಿ ಮುನಾಫ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿವಾಸಿಯಾಗಿದ್ದಾನೆ. ಟಿಂಬರ್ ಉದ್ಯಮ ಮಾಡಿಕೊಂಡು ಕೇರಳದಲ್ಲಿ ಸಹ ತಮ್ಮ ಉದ್ಯಮ ವಿಸ್ತರಿಸಿದ್ದಾನೆ ಆರೋಪಿ ಮುನಾಫ್. 

ಶಿರೂರು ಗುಡ್ಡ ಕುಸಿತದ ಬೆನ್ನಲ್ಲಿಯೇ ಮತ್ತೊಂದು ಅವಘಡ; ನದಿ ನೀರಿಗೆ ಬಿದ್ದು ಯುವಕ ಸಾವು

ಸಾಗರ್ ಟ್ರಾನ್ಸ್‌ ಪೋರ್ಟ್ ಎಂಬ ಹೆಸರಿನ ಉದ್ಯಮ ನಡೆಸುತ್ತಿದ್ದು, ಈತನ ಲಾರಿಗೆ ಅರ್ಜುನ್ ಚಾಲಕನಾಗಿದ್ದ.  ಜುಲೈ 16 ರಂದು ಭೂ ಕುಸಿತವಾದ ನಂತರ ಕೇರಳದಿಂದ ಅರ್ಜುನ್ ಭಾವನೊಂದಿಗೆ ಅಂಕೋಲಾಕ್ಕೆ ಬಂದಿದ್ದ, ಅಂಕೋಲಾ ಠಾಣೆಯಲ್ಲಿ ಲಾರಿ ಕಾಣೆಯಾಗಿರುವ ಬಗ್ಗೆ ಆರೋಪಿ ಮುನಾಫ್ ದೂರು ನೀಡಿದ್ದ. ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ತನ್ನನ್ನು ಅಲೆದಾಡಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದನು. 

ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಆರೋಪಿ ಮುನಾಫ್‌ ರಾಜಕೀಯ ಪ್ರಭಾವ ಬಳಸಿ ಶೋಧ ಕಾರ್ಯಕ್ಕೆ ಅಡ್ಡಿಯುಂಟು ಮಾಡಿದ್ದ. ಕೇರಳ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಕರ್ನಾಟಕದ ವಿರುದ್ಧ ಕೇರಳ ಜನರಲ್ಲಿ ಕೆಟ್ಟ ಭಾವನೆ ಬರುವಂತೆ ಮುನಾಫ್ ಬಿಂಬಿಸಿದ್ದ. ಈತನ ಈ ಪ್ರವೃತ್ತಿಯಿಂದಲೇ ಶೀಘ್ರ ನಡೆಯಬೇಕಿದ್ದ ಶಿರೂರು ಕಾರ್ಯಾಚರಣೆ ತಡವಾಗಿತ್ತು. ಈ ಬಗ್ಗೆ ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ.ನಾರಾಯಣ್ ಕೂಡಾ ಅಸಮಾಧಾನ ತೋಡಿಕೊಂಡಿದ್ದರು. 

click me!