ಕನ್ನಡ ಸಿನಿ ಶೂಟಿಂಗ್‌ ಹೈದ್ರಾಬಾದ್‌ಗೆ ಶಿಫ್ಟ್; ಸುದೀಪ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್..!

Jun 13, 2020, 12:19 PM IST

ಬೆಂಗಳೂರು (ಜೂ. 13): ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆ ಅನುಮತಿ ಇಲ್ಲದಿರುವುದರಿಂದ ಪಕ್ಕದ ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಕನ್ನಡ ಚಿತ್ರರಂಗವೀಗ ನೆರೆ ರಾಜ್ಯಗಳಲ್ಲಿ ಶೂಟಿಂಗ್‌ ನಡೆಸಲು ಸಜ್ಜಾಗಿದೆ.

ಕನ್ನಡದ ಫ್ಯಾಂಟಮ್‌ಗೆ ಕಿಚ್ಚನ ಸಿಕ್ಸ್ ಪ್ಯಾಕ್ ಖದರ್

ಈಗಾಗಲೇ ನಟ ಸುದೀಪ್‌ ಅಭಿನಯದ ‘ಫ್ಯಾಂಟಮ್‌’ ಚಿತ್ರಕ್ಕೆ ಜುಲೈ 1ರಿಂದ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಲು ಚಿತ್ರದ ನಿರ್ಮಾಪಕ ಜಾಕ್‌ ಮಂಜು ನಿರ್ಧರಿಸಿದ್ದು, ಇಡೀ ಸಿನಿಮಾ ತಂಡ ಹೈದರಾಬಾದ್‌ಗೆ ತೆರಳಲಿದೆ. ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾ ಟಾಲಿವುಡ್‌ ಅಂಗಳದತ್ತ ಮುಖ ಮಾಡುತ್ತಿರುವಂತೆ ಬೇರೆ ಬೇರೆ ಚಿತ್ರಗಳೂ ತಮ್ಮ ಚಿತ್ರೀಕರಣ ಕೆಲಸಗಳಿಗೆ ಹೈದರಾಬಾದ್‌ನಲ್ಲಿ ಚಾಲನೆ ನೀಡಲು ಮುಂದಾಗಿವೆ.