ಪುಷ್ಪ-3 ಚಿತ್ರ ಶೀಘ್ರದಲ್ಲಿಯೇ ಬರುವ ಹಿಂಟ್ ಕೊಡುತ್ತಲೇ ಭಾವುಕರಾಗಿ ಪತ್ರ ಬರೆದಿದ್ದಾರೆ ನಟಿ ರಶ್ಮಿಕಾ ಮಂದಣ್ಣ: ಏನಿದೆ ಇದರಲ್ಲಿ?
ಪುಷ್ಪ-2 ಚಿತ್ರದ ಪ್ರಚಾರದಲ್ಲಿರುವ ನಟಿ ರಶ್ಮಿಕಾ ಮಂದಣ್ಣ, ಈಚೆಗೆ ಸುದ್ದಿಯಲ್ಲಿರುವುದು ಮದುವೆಯ ಬಗ್ಗೆ. ಚೆನ್ನೈನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿಜಯ ದೇವರಕೊಂಡ ಜೊತೆ ಮದುವೆಯಾಗುವ ಹಿಂಟ್ ಕೊಟ್ಟಿದ್ದರು ನಟಿ, ‘ಕಿಸ್ಸಿಕ್’ ಐಟಂ ಸಾಂಗ್‌ನ ಲಿರಿಕಲ್ ಬಿಡುಗಡೆ ಸಮಾರಂಭದಲ್ಲಿ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾಗ, ಈ ಉತ್ತರವನ್ನು ಅವರು ನೀಡಿದದರು. 'ಅವರು ನಿಮಗೆಲ್ಲ ಗೊತ್ತು' ಎಂದು ಸುಳಿವು ನೀಡಿದ್ದರು. ಇದಾಗಲೇ ವಿಜಯ್ ಅವರೂ ತಾವು ರಿಲೇಷನ್‌ನಲ್ಲಿ ಇರುವುದನ್ನು ಖಚಿತಪಡಿಸಿದ್ದರಿಂದ ಇವರಿಬ್ಬರೂ ಮದುವೆಯಾಗುವ ವಿಷಯ ಗುಟ್ಟಾಗೇನೂ ಉಳಿದಿಲ್ಲ. ಆದರೆ ಇದೀಗ ನಟಿ ಮತ್ತೊಂದು ವಿಷಯದಲ್ಲಿ ಸದ್ದು ಮಾಡುತ್ತಿದ್ದಾರೆ.
ಅದು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಾಕುವ ಮೂಲಕ. ‘ಪುಷ್ಪ-2’ ಸಿನಿಮಾದ ಜರ್ನಿ ನೆನೆದು ಭಾವುಕರಾಗಿರುವ ನಟಿ, ಇದೇ ವೇಳೆ ಪಾರ್ಟ್ 3 ಬಗ್ಗೆಯೂ ಹಿಂಟ್ ಕೊಟ್ಟಿದ್ದಾರೆ. ಇತ್ತೀಚೆಗೆ ‘ಪುಷ್ಪ 3’ ಬರೋದಾಗಿ ಚಿತ್ರದ ನಿರ್ಮಾಪಕ ಸುಳಿವು ನೀಡಿದ್ದರು. ರಶ್ಮಿಕಾ ಪೋಸ್ಟ್‌ನಿಂದ ಮತ್ತೊಮ್ಮೆ ಅಧಿಕೃತ ಮಾಹಿತಿ ಸಿಕ್ಕಿದೆ. 5 ವರ್ಷಗಳ ಪುಷ್ಪ ಚಿತ್ರದ ಜರ್ನಿ ಕೊನೆ ಆಗಿದೆ. ಎಂಥ ಅದ್ಭುತ ಜರ್ನಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರ. ನ.25ರಂದು ಪುಷ್ಪ 2 ಚಿತ್ರ ಸಂಪೂರ್ಣ ಆಗಿದೆ ಎನ್ನುವ ಮಾತಿನಿಂದ ಅವರು ತಮ್ಮ ಪತ್ರವನ್ನುಶುರು ಮಾಡಿದ್ದಾರೆ. ನನ್ನ ಸಿನಿ ಜೀವನದ ಏಳೆಂಟು ವರ್ಷಗಳಲ್ಲಿ ಕಳೆದ 5 ವರ್ಷ ‘ಪುಷ್ಪ 2’ ಸೆಟ್ಟೇ ನನ್ನ ಮನೆಯಾಗಿತ್ತು. ಅಂತೂ ಇದು ನನ್ನ ಕೊನೆಯ ದಿನ. ಪಾರ್ಟ್ 3 ಸಂಬಂಧಿಸಿ ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ಅದು ಕೂಡ ವಿಶೇಷವಾಗಿದೆ ಎನ್ನುವ ಮೂಲಕ ಅದು ಕೂಡ ಬರುವ ಬಗ್ಗೆ ತಿಳಿಸಿದ್ದಾರೆ.
ಪತಿ ಮರ್ಯಾದೆಯನ್ನು ಎಲ್ಲರ ಎದುರು ಹೀಗೆ ತೆಗೆಯೋದಾ ನಟಿ ಶ್ವೇತಾ? ನಾಚಿ ನೀರಾದ ಪ್ರದೀಪ್!
ಇದೇ ವೇಳೆ ಚಿತ್ರೀಕರಣ ಮುಗಿರುವುದಕ್ಕೆ, ಭಾವುಕರಾಗಿರುವ ನಟಿ, ಎನು ಎಂದು ಅರ್ಥವಾಗದ ನೋವು ನನ್ನನ್ನು ಕಾಡುತ್ತಿದೆ. ಎಲ್ಲಾ ಭಾವನೆಗಳು ಈಗ ಒಟ್ಟಾಗಿವೆ. ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ದಿನಗಳು ನೆನಪಾಗುತ್ತಿವೆ. ಆ ದಿನಗಳಲ್ಲಿ ನಾನು ತುಂಬಾ ದಣಿದಿದ್ದೆ. ಈಗ ಎಲ್ಲಾ ನೆನಪಿಸಿಕೊಂಡರೆ ಎಲ್ಲಾ ಅದ್ಭುತ ಎನಿಸುತ್ತಿದೆ ಎಂದು ಹೇಳಿರುವ ನಟಿ, ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಮತ್ತು ಇಡೀ ತಂಡಕ್ಕೆ ಕೃತಜ್ಞರಾಗಿರುವುದಾಗಿ ತಿಳಿಸಿದ್ದಾರೆ.
ಇನ್ನು ರಶ್ಮಿಕಾ ಮತ್ತು ವಿಜಯ ದೇವರಕೊಂಡ ರಿಲೇಷನ್ ಕುರಿತು ಮಾತನಾಡುವುದಾದರೆ, ಹಲವು ವರ್ಷಗಳಿಂದ ಇವರು ರಿಲೇಷನ್ನಲ್ಲಿ ಇರುವುದು ಜಗಜ್ಜಾಹೀರವಾಗಿತ್ತು. ಆದರೆ ಇವರಿಬ್ಬರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಒಟ್ಟಿಗೇ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಆದರೆ, ಈಗ ಇವರು ಮದುವೆಯಾಗುವ ನಿರ್ಧಾರ ಮಾಡಿದಂತಿದ್ದು, ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ ನೀವು ಸಿಂಗಲ್ಲಾ ಎಂದು ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ ಅಲ್ಲಪ್ಪ, ನನಗೆ 30 ವರ್ಷ ದಾಟಿದೆ, ಇನ್ನೂ ನಾನು ಸಿಂಗಲ್ ಆಗಿರಲು ಹೇಗೆ ಸಾಧ್ಯ ಎಂದು ನಗುತ್ತಲೇ ರಿಲೇಷನ್‌ಶಿಪ್‌ನಲ್ಲಿರುವ ವಿಷಯ ಸೂಚ್ಯವಾಗಿ ತಿಳಿಸಿದ್ದರು. ಅದರ ಬೆನ್ನಲ್ಲೆ, ಇಬ್ಬರೂ ಹೋಟೆಲ್ ಒಂದರಲ್ಲಿ ಊಟ ಮಾಡುವ, ಡೇಟಿಂಗ್ ಫೊಟೋ ವೈರಲ್ ಆಗಿತ್ತು, ಕೊನೆಗೆ ಈಗ ನಟಿಯೂ ಪರೋಕ್ಷವಾಗಿ ಈ ಹಿಂಟ್ ಕೊಟ್ಟಿದ್ದಾರೆ. ಇವರ ಮದುವೆ ಯಾವಾಗ ಎನ್ನುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಾಯ್‌ಫ್ರೆಂಡ್, ಗಂಡನಿಗೆ ದುಬಾರಿ ಗಿಫ್ಟ್ ಕೊಡೋ ಮೊದ್ಲು... ಯುವತಿಯರಿಗೆ ಸಮಂತಾ ನೀಡಿದ ಎಚ್ಚರಿಕೆ ಏನು?