ಅತಿಲೋಕ ಸುಂದರಿ ಎಂಬಂತಿದ್ದ ದಂತದ ಬೊಂಬೆ ಶ್ರೀದೇವಿ ಬಳಿಕ ಬಾಲಿವುಡ್‌ಗೆ ಹೋಗಿ ಅಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರು. ಅಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದರು. ಬಾಲಿವುಡ್‌ಗೆ ಹೋದ ಪ್ರಾರಂಭದಲ್ಲಿ ತಮ್ಮ ಗೆಳತಿ ಬೋನಿ ಕಪೂರ್ ಪತ್ನಿ ಮೋನಾ ಕಪೂರ್..
ಬಾಲಿವುಡ್‌ನಲ್ಲಿ ಅಲ್ಲಿಯವರೆಗೂ ನಟ-ನಿರ್ದೇಶಕರ ಹವಾ ಮಾತ್ರ ನಡೆಯುತ್ತಿತ್ತು. ಆದರೆ ದಕ್ಷಿಣ ಭಾರತದಿಂದ ಚೆಲುವೆಯೊಬ್ಬಳು ಬಾಲಿವುಡ್ ಚಿತ್ರರಂಗಕ್ಕೆ ಹೋದರು. ಸೌಂದರ್ಯ ಹಾಗೂ ಬುದ್ದಿವಂತಿಕೆ ಮೇಳೈಸಿದ್ದ ಆ ನಟಿ, ಅಲ್ಲಿಯವರೆಗೂ ಇದ್ದ ನಟಿಯರನ್ನೆಲ್ಲ ನಿವಾಳಿಸಿ ಎಸೆದು ಬಾಲಿವುಡ್‌ನ ಮೊದಲ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೆ ಲಗ್ಗೆ ಇಟ್ಟರು. ಆ ನಟಿ ಬೇರಾರೂ ಅಲ್ಲ ಬಾಲಿವುಡ್‌ನ ದಂತಕಥೆ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ!
ಹೌದು, ತಮಿಳು ನಾಡಿನ ಹುಡುಗಿ ಶ್ರೀದೇವಿ (Sridevi) ತಮ್ಮ ವಯಸ್ಸಿನ ಬೇರೆಲ್ಲ ಹುಡುಗಿಯರು ಶಾಲೆಗೆ ಹೋಗುತ್ತಿದ್ದಾಗಲೇ ಮುಖಕ್ಕೆ ಬಣ್ಣ ಹಚ್ಚಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 3ನೇ ವಯಸ್ಸಿಗೇ ನಟನೆಗೆ ಕಾಲಿಟ್ಟ ಬಾಲಕಲಾವಿದೆ ಶ್ರೀದೇವಿ, ಬಳಿಕ ನಾಯಕಿ ನಟಿಯಾಗಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ನಟಿಸಿದರು. ಅತಿಲೋಕ ಸುಂದರಿ ಎಂಬಂತಿದ್ದ ದಂತದ ಬೊಂಬೆ ಶ್ರೀದೇವಿ ಬಳಿಕ ಬಾಲಿವುಡ್‌ಗೆ ಹೋಗಿ ಅಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರು. ಅಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದರು.
ಕಿಚ್ಚ ಸುದೀಪ್ ಹೇಳಿದ ಈ ಸ್ಟೋರಿಯಲ್ಲಿನ ಆ ಸ್ನೇಹಿತ ಯಾರು? ಗೊತ್ತಾದ್ರೂ ಹೇಳ್ಬೇಡಿ!
ಅಂದು ಬಾಲಿವುಡ್ ಚಿತ್ರರಂಗವನ್ನು ಆಳುತ್ತಿದ್ದ ನಟ ಅಮಿತಾಬ್ ಬಚ್ಚನ್ ಅವರಿಗೆ ಸರಿಸಮನಾದ ಖ್ಯಾತಿಯನ್ನು ನಟಿ ಶ್ರೀದೇವಿ ಕೂಡ ಸಂಪಾದಿಸಿದ್ದರು. ಆ ಕಾರಣದಿಂದಲೇ ಅವರಿಗೆ ಬಾಲಿವುಡ್ ಲೇಡಿ ಅಮಿತಾಭ್ ಬಚ್ಚನ್ ಎಂದು ಕರೆಯುತ್ತಿದ್ದರು. ಅಮಿತಾಭ್ ಬಚ್ಚನ್ ಹಾಗೂ ಶ್ರೀದೇವಿ ಜೋಡಿ 'ಖುದಾಗವಾ' ಎಂಬ ಹಿಂದಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆದರೆ ಆ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ. ಆದರೆ, ಅವರಿಬ್ಬರೂ ಬಳಿಕ ಕೂಡ ಸೂಪರ್ ಸ್ಟಾರ್ ಆಗಿದ್ದರು.
ಆದರೆ, ನಟಿ ಶ್ರೀದೇವಿ ಅವರು ಬಾಲಿವುಡ್‌ಗೆ ಹೋದ ಪ್ರಾರಂಭದಲ್ಲಿ ತಮ್ಮ ಗೆಳತಿ ಬೋನಿ ಕಪೂರ್ ಪತ್ನಿ ಮೋನಾ ಕಪೂರ್ ಮನೆಯಲ್ಲಿ ಸ್ವಲ್ಪ ದಿನ ವಾಸವಿದ್ದರು. ಆಗ ನಿರ್ಮಾಪಕ ಬೋನಿ ಕಪೂರ್ ಅವರನ್ನು ಸಹೋದರ ಎಂದೇ ಕರೆಯುತ್ತಿದ್ದ ಶ್ರೀದೇವಿ ಅವರಿಗೆ ಹಲವು ವರ್ಷಗಳ ಕಾಲ 'ರಾಕಿ' ಕೂಡ ಕಟ್ಟುತ್ತಿದ್ದರು. ಆದರೆ, ಅದೊಂದು ದಿನ ಏಳು ತಿಂಗಳ ಗರ್ಭಿಣಿಯಾಗಿದ್ದ ನಟಿ ಶ್ರೀದೇವಿ ಅವರನ್ನು ಬೋನಿ ಕಪೂರ್ ಮದುವೆಯಾಗಿ ಮನೆಗೇ ಕರೆದುಕೊಂಡು ಬಂದುಬಿಟ್ಟರು.
ಬಿಗ್ ಬಾಸ್‌ನಿಂದ ಹೊರಬಿದ್ದ ಧರ್ಮ ಮಹಿಳೆಯರ ಜೊತೆ 'ದಾಸರಹಳ್ಳಿ'ಯಲ್ಲಿ!
ತಮ್ಮ ಪತಿ ಬೋನಿ ಕಪೂರ್ ಅವರು ನಟಿ ಶ್ರೀದೇವಿ ಅವರನ್ನು ಮದುವೆಯಾಗಿದ್ದರಿಂದ ಮೋನಾ ಶೌರಿ ಕಪೂರ್ ತೀವ್ರ ಆಘಾತಕ್ಕೆ ಒಳಗಾದರು. ಪತಿಯಿಂದ ವಿಚ್ಛೇದನ ಪಡೆದು ಅವರು ಮನೆಯಿಂದ ಆಚೆ ಹೋಗಿಬಿಟ್ಟರು. ಬಳಿಕ ಅವರು ಸ್ವಲ್ಪ ಕಾಲದಲ್ಲೇ ನಿಧನರಾದರು. ನಟಿ ಶ್ರೀದೇವಿ ಅವರು ಬೋನಿ ಕಪೂರ್ ಜೊತೆ ನಡೆದ ವಿವಾಹದ ಬಳಿಕ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಅವರಿಗೆ ತಾಯಿಯಾಗಿ ಸಂಸಾರ ಜೀವನದಲ್ಲಿ ಮುಳುಗಿಬಿಟ್ಟರು.
ಅದರೆ, ಹಲವು ವರ್ಷಗಳ ಗ್ಯಾಪ್ ಬಳಿಕ ತಮ್ಮೊಳಗಿದ್ದ ಕಲಾವಿದೆ ಮಾತು ಕೇಳಿ ಮತ್ತೆ ಬಣ್ಣ ಹಚ್ಚಿದ ನಟಿ ಶ್ರೀದೇವಿ ಅವರು 'ಇಂಗ್ಲಿಷ್ ವಿಂಗ್ಲಿಷ್' ಹಾಗೂ ತಮಿಳಿನ ವಿಜಯ್ ನಟನೆಯ 'ಪುಲಿ' ಚಿತ್ರದಲ್ಲಿ ನಟಿಸಿದ್ದರು. ಆದರೆ, 2018ರಲ್ಲಿ ಆಪ್ತರ ಮದುವೆಗೆ ದುಬೈಗೆ ಹೋಗಿದ್ದ ನಟಿ ಶ್ರೀದೇವಿ ಅವರು ಅಲ್ಲಿ ಬಾತ್‌ಟಬ್‌ನಲ್ಲಿ ಮುಳುಗಿ ನಿಧನರಾದರು. ನಟಿ ಶ್ರೀದೇವಿ ಅಸು ನೀಗಿದರೂ ಕೂಡ ಅವರನ್ನು ಎಂದಿಗೂ ಭಾರತೀಯ ಚಿತ್ರರಂಗ ಮರೆಯಲಾಗದು. ಅವರ ಅಪ್ರತಿಮ ಸೌಂದರ್ಯ ಹಾಗೂ ನಟನಾ ಪ್ರತಿಭೆಗೆ ಸರಿಸಾಟಿ ಯಾರಿಲ್ಲ ಎನ್ನಬಹುದು!
ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್; ಡೌಟ್ ಇದ್ರೆ ಇಲ್ನೋಡಿ!