ಲಕ್ಷ್ಮೀ ನಿವಾಸದ ವೆಂಕಿಯ ಮುದ್ದಿನ ಹೆಂಡ್ತಿ ಚೆಲ್ವಿ ನಿಜಕ್ಕೂ ಚೆಲುವೆ... ಏನಂತೀರಾ?

Published : Nov 27, 2024, 05:45 PM ISTUpdated : Nov 27, 2024, 08:07 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚೆಲುವಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಅಶ್ವಿನಿ ಮೂರ್ತಿ, ರಿಯಲ್ ಆಗಿ ತುಂಬಾನೆ ಸ್ಟೈಲಿಶ್,ಹಾಗೂ ಮುದ್ದಾಗಿದ್ದಾರೆ. ಇವರೆ ಹೊಸ ಫೊಟೊ ಶೂಟ್ ಹೇಗಿದೆ ನೋಡಿ.   

PREV
17
ಲಕ್ಷ್ಮೀ ನಿವಾಸದ ವೆಂಕಿಯ ಮುದ್ದಿನ ಹೆಂಡ್ತಿ ಚೆಲ್ವಿ ನಿಜಕ್ಕೂ ಚೆಲುವೆ... ಏನಂತೀರಾ?

ಲಕ್ಷ್ಮೀ ನಿವಾಸ  (Lakshmi Nivasa)ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದು ವೆಂಕಿ ಮತ್ತು ಚೆಲುವಿಯ ಪಾತ್ರ. ಮಾತು ಬಾರದ ವೆಂಕಿಯನ್ನು ತುಂಬಾನೆ ಪ್ರೀತಿ ಮಾಡುವ ಚೆಲುವಿಯ ಮುಗ್ಧ ಪಾತ್ರ ವೀಕ್ಷಕರಿಗೆ ತುಂಬಾನೆ ಇಷ್ಟ. ಸದ್ಯಕ್ಕಂತೂ ಧಾರಾವಾಹಿಯಲ್ಲಿ ಇಮೋಶನಲ್ ಎಪಿಸೋಡ್ ನಡೆಯುತ್ತಿದ್ದು, ಜನ ಇವರ ನಟನೆಯನ್ನ ಮೆಚ್ಚಿಕೊಂಡಿದ್ದಾರೆ. 
 

27

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚೆಲ್ವಿ ಪಾತ್ರ ಮಾಡುವ ಅಶ್ವಿನಿ ಮೂರ್ತಿ (Ashwini Murthy), ಸೀರಿಯಲ್ ನಲ್ಲಿ ಎಷ್ಟು ಮುಗ್ಧ ಸಿಂಪಲ್ ಅನ್ನೋದು ಗೊತ್ತೇ ಇದೆ. ಆದರೆ ರಿಯಲ್ ಲೈಫಲ್ಲಿ ಇವರು ಸಿಂಪಲ್ ಅಲ್ವೇ ಅಲ್ಲ. ಯಾಕಂದ್ರೆ ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು, ತುಂಬಾನೆ ಸ್ಟೈಲಿಶ್ ಆಗಿದ್ದಾರೆ. 
 

37

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಅಶ್ವಿನಿ, ಹೆಚ್ಚಾಗಿ ತಮ್ಮ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಿಗ ಹೊಸದಾಗಿ ಗೋಲ್ಡನ್ ಬಣ್ಣದ ಗೌನ್ ನಲ್ಲಿ ನಟಿ ಕಾಣಿಸಿಕೊಂಡಿದ್ದು, ಅಪ್ಸರೆಯಂತೆ ಕಾಣಿಸ್ತಿದ್ದಾರೆ. ಲೋಕದ ಚೆಲುವೆಲ್ಲಾ ಇವರ ಮುಖದಲ್ಲೇ ಬಂದು ಕೂತಂತೆ ಕಾಣಿಸ್ತಿದೆ. 
 

47

ಸೋಶಿಯಲ್ ಮೀಡೀಯಾದಲ್ಲಿ ಬರೋಬ್ಬರಿ 91.2 ಸಾವಿರ ಫಾಲೋವರ್ಸ್ ಗಳನ್ನು ಹೊಂದಿರುವ ಅಶ್ವಿನಿಯವರ ಫೋಟೊಗಳನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು , ಬ್ಯೂಟಿಫುಲ್ ಮುದ್ದು ಮುಖದ ದೇವತೆ, ಚಿನ್ನದ ಗೊಂಬೆ ನೋಡತಾ ಇದಿನಲ್ಲ, ಆ ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನೂರು ಕಣ್ಣು ಸಾಲದೇ, ಸೊ ಬ್ಯೂಟಿಫುಲ್ ಸುಂದರಿ ಎಂದೆಲ್ಲಾ ಯುವಕರು ಕಾಮೆಂಟ್ ಮಾಡಿದ್ದಾರೆ.

57

ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ  ಇವರು ಲಕ್ಷ್ಮಿ ನಿವಾಸಕ್ಕೂ ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ಅಶ್ವಿನಿ ನಟಿಸಿದ್ದರು. ಸದ್ಯ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಚೆಲ್ವಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. 

67

ಇನ್ನು ನಟಿಯಾಗೋಕೂ ಮುನ್ನವೇ ಅಶ್ವಿನಿಯವರು  ಬ್ಯುಸಿನೆಸ್ ವುಮೆನ್. ಇವರೊಬ್ಬ ಕಾಸ್ಮಟಾಲಜಿಸ್ಟ್ (Cosmetologist). ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊಡ್ತಾರೆ. 
 

77

ಇನ್ನು ಇವರ ಬ್ಯೂಟಿ ಸಲೂನ್ (beauty salon) ಭಾರಿ ಜನಪ್ರಿಯತೆ ಗಳಿಸಿದ್ದು, ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿ, ಸೇವೆ ಪಡೆದು  ಕೊಂಡಿದ್ದಾರೆ. 
 

Read more Photos on
click me!

Recommended Stories