Rider Movie: ಬನ್ನೂರಿನ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ನಿಖಿಲ್ ಕುಮಾರ್‌

Dec 30, 2021, 2:39 PM IST

ಸ್ಯಾಂಡಲ್‌ವುಡ್‌ನ (Sandalwood) ಯುವರಾಜ, ರಾಜಕಾರಣಿ ನಿಖಿಲ್ ಕುಮಾರ್ (Nikhil Kumar) ಅವರ 'ರೈಡರ್' (Rider) ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ವೀಕ್ಷಿಸಿದ ಅಭಿಮಾನಿಗಳಿಂದ ಅತ್ತ್ಯುತ್ತಮ ಪ್ರಶಂಸೆ ಹಾಗೂ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ನಿಖಿಲ್‌ ಎಲ್ಲೆಡೆ ಚಿತ್ರಮಂದಿರಗಳಿಗೆ ವಿಸಿಟ್ ನೀಡುತ್ತಿದ್ದು, ಬನ್ನೂರಿನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದು ನಿಖಿಲ್ ಅಭಿಮಾನಿಗಳಿಗೆ ಸಂತಸ ನೀಡಿದ್ದು, ಜೈಕಾರ ಕೂಗಿದ್ದಾರೆ. ಜೊತೆಗೆ ನಿಖಿಲ್‌ಗೆ ಭರ್ಜರಿ ಸ್ವಾಗತ ನೀಡಿ, ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.

Rider Response: ನಿಖಿಲ್ ಕುಮಾರಸ್ವಾಮಿ 'ರೈಡರ್' ಸಿನಿಮಾ ಹೇಗಿದೆಯಂತೆ ಗೊತ್ತಾ?

'ರೈಡರ್' ಚಿತ್ರಕ್ಕೆ ವಿಜಯ್​ ಕುಮಾರ್​ ಕೊಂಡ (Vijay Kumar Konda) ಅವರು ಆ್ಯಕ್ಷನ್​ ಕಟ್​ ಹೇಳಿದ್ದು, ಕಾಶ್ಮೀರಿ ಪರ್ದೇಸಿ (Kashmira Pardeshi) ನಿಖಿಲ್‌ಗೆ ಜೋಡಿಯಾಗಿದ್ದಾರೆ. ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ರಾಜೇಶ್ ನಟರಂಗ, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ಸಂಪದ ಹುಲಿವಾನ, ನಿಹಾರಿಕ ಸೇರಿದಂತೆ ದೊಡ್ಡ ತಾರಬಳಗ ಚಿತ್ರದಲ್ಲಿದೆ. ಇನ್ನು ಈ ಸಿನಿಮಾವನ್ನು ಪೈರಸಿ (Piracy) ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ಮಾಪಕ ಲಹರಿ ವೇಲು ಇತ್ತೀಚೆಗೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment