Puneeth Rajkumar: ಜೇಮ್ಸ್' ಸೆಲೆಬ್ರೆಷನ್‌ಗಾಗಿ ಶಾಲಾ-ಕಾಲೇಜಿಗೆ ರಜೆ ಕೊಟ್ಟಿದ್ದಾರಾ?

Mar 18, 2022, 12:58 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ (Puneeth Rajkumar) ಹುಟ್ಟುಹಬ್ಬ (Birthday) ಹಾಗೂ ಅವರ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' (James) ಸೆಲೆಬ್ರೆಷನ್‌ಗಾಗಿ ಶಾಲಾ-ಕಾಲೇಜಿಗೆ ರಜೆ ಕೊಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ (Viral) ಆಗುತ್ತಿದೆ. ವಿಶೇಷವಾಗಿ ಫ್ರಧಾನ ಮಂತ್ರಿ ನರೇಂದ್ರ ಮೋದಿಯವರೇ (PM Narendra Modi) ಈ ಸುದ್ದಿಯನ್ನು ಕೊಟ್ಟಿದ್ದಾರೆ ಎಂದು ಹರಿದಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪತ್ರವೊಂದು (Letter) ಹರಿದಾಡುತ್ತಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಪತ್ರವನ್ನು ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. 

ಜೇಮ್ಸ್‌ ಚಿತ್ರ ಅನ್ನೊದಕ್ಕಿಂತ ಅಪ್ಪು ಮಾಮನ ನೋಡಿದ ತೃಪ್ತಿಯಿದೆ: ಶ್ರೀಮುರಳಿ

ಅನಂತರ ಗೊತ್ತಾಗಿದ್ದೆನೆಂದರೆ ಈ ಪತ್ರವನ್ನು ಯಾರೋ ಅಭಿಮಾನಿಯೊಬ್ಬರು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಒಟ್ಟಿನಲ್ಲಿ 'ಜೇಮ್ಸ್' ಚಿತ್ರವನ್ನು ವೀಕ್ಷಿಸಲು ಯಾವುದೇ ರಜೆಯನ್ನು ನೀಡಲಾಗಿಲ್ಲ. ಇನ್ನು ಪುನೀತ್ ಅವರನ್ನು ಕಳೆದುಕೊಂಡು ಐದು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲದೆ ಬರ್ತ್​ಡೇ ಆಚರಿಸಲಾಗಿದ್ದು, ಅಭಿಮಾನಿಗಳು ಆ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್​ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಹಾಗೂಪುನೀತ್​ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies