
ಮೈಸೂರು (ಅ.10): ರೈಲು ಬರುತ್ತಿದ್ದರೂ ಗೇಟ್ ಹಾಕದೆ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಾ ಕುಳಿತ ಸಿಬ್ಬಂದಿ ಎಡವಟ್ಟಿನಿಂದ ದಸರಾ ಸ್ಪೆಷಲ್ ರೈಲಿಗೆ ಆಟೋ ಡಿಕ್ಕಿಯಾಗಿ ಚಾಲಕ, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ಇಲವಾಲ ಹೋಬಳಿ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್ ಬಳಿ ದುರಂತ ನಡೆದಿದೆ.
ಆಟೋ ಚಾಲಕ ಹಾಗೂ 9 ವರ್ಷದ ಒಂದು ಮಗು ಐದು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ರೈಲು ಬರುವ ವೇಳೆ ಗೇಟ್ ಹಾಕಬೇಕಿದ್ದ ಸ್ಟೇಷನ್ ಸಿಬ್ಬಂದಿ. ಆದರೆ ರೈಲು ಬರುತ್ತಿದ್ದರೂ ಗಮನಿಸದೆ ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಾ ಕುಳಿತ ಗೇಟ್ ಕೀಪರ್. ಈ ವೇಳೆ ಗೇಟ್ ತೆಗೆದಿರುವುದು ನೋಡಿ ನೇರ ಹಳಿ ದಾಟಲು ಮುಂದಾಗಿರುವ ಆಟೋ ಚಾಲಕ. ಆಟೋದಲ್ಲಿ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಚಾಲಕ. ರೈಲು ಬರುವುದು ತಿಳಿಯದೆ ಹಳಿ ದಾಟುವಾಗ ದಸರಾ - ಅರಸೀಕೆರೆ ನಡುವೆ ಸಂಚರಿಸುವ ದಸರಾ ವಿಶೇಷ ರೈಲಿಗೆ ಡಿಕ್ಕಿ ಹೊಡೆದ ಆಟೋ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಟೋ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ಗಾಯಗೊಂಡಿರುವ ಮಕ್ಕಳ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: ಸ್ಕೂಟರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ, ಕೆಳಗೆ ಬಿದ್ದ ಮಹಿಳೆ ಕಾರಿಗೆ ಸಿಲುಕಿ ಸಾವು
ರೈಲು ತಡೆದು ಪ್ರತಿಭಟನೆ:
ಸ್ಟೇಷನ್ ಮಾಸ್ಟರ್ ನಿರ್ಲಕ್ಷದಿಂದ ದುರಂತ ಸಂಭವಿಸಿದೆ. ಇದು ಗಂಭೀರ ಲೋಪ. ರೈಲು ಬರುವಾಗ ಗೇಟ್ ಹಾಕಬೇಕು. ವಾಹನ ಸವಾರರನ್ನು ಎಚ್ಚರಿಸಬೇಕು ಆದರೆ ರೈಲು ಬರುವ ವೇಳೆಯೂ ಮೊಬೈಲ್‌ನಲ್ಲಿ ಮಗ್ನನಾಗಿದ್ದ ಗೇಟ್ ಕೀಪರ್. ಗೇಟ್ ತೆಗೆದಿರೋ ಕಾರಣಕ್ಕೆ ರೈಲು ಹೋಗಿರಬಹುದು ಎಂದು ಭಾವಿಸಿ ಹಳಿ ದಾಟಲು ಯತ್ನಿಸಿದ ದುರಂತ ನಡೆದಿದೆ. ಗೇಟ್ ಮಾಸ್ಟರ್ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ ಗ್ರಾಮಸ್ಥರು, ರೈಲನ್ನು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ