ರತನ್​ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!

By Suchethana DFirst Published Oct 10, 2024, 9:06 PM IST
Highlights

70 ಸಾವಿರ ಕೋಟಿ ಉದ್ಯಮದ ಒಡತಿ, ರತನ್​ ಟಾಟಾ ಅವರ ಮಲತಾಯಿ ಸಿಮೋನ್​ ಟಾಟಾ ಅಂತಿಮ ದರ್ಶನಕ್ಕೆ ಬಂದಿದ್ದು, ಇವರ ಕುರಿತು ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ... 
 

ಇಂದು ಎಲ್ಲರನ್ನೂ ಅಗಲಿ ಹೋದ ಹಿರಿಯ ಚೇತನ ರತನ್​ ಟಾಟಾ ಅವರ ಬಗ್ಗೆ ಬರೆದಷ್ಟೂ, ಅವರ ಬಗ್ಗೆ ಹೇಳಿದ್ದಷ್ಟೂ ಕಡಿಮೆಯೇ.  ವ್ಯಾಪಾರ ಜಗತ್ತಿನ ಮಹಾ ಚೇತನವಾಗಿದ್ದ ರತನ್​ ಟಾಟಾ ಅವರ ಜೀವನ ಕೂಡ ಅಷ್ಟೇ ದುಃಖದಿಂದ ತುಂಬಿದ್ದರೂ, ಬಾಲ್ಯದಿಂದಲೂ ನೋವೇ ಅನುಭವಿಸಿದರೂ ಎಲ್ಲರಿಗೂ ರೋಲ್​ ಮಾಡೆಲ್​ ಆಗಿ ಜಗತ್ತನ್ನು ಬಿಟ್ಟು ಹೋಗಿದ್ದಾರೆ. ಇವರ ಅಂತಿಮ ದರ್ಶನಕ್ಕೆ ವಿವಿಧದ ಕ್ಷೇತ್ರಗಳ ದಿಗ್ಗಜರು ಬಂದಿದ್ದಾರೆ. ಇವರಲ್ಲಿ ಗಮನ ಸೆಳೆದವರು ಸಿಮೋನ್ ಟಾಟಾ. ಲ್ಯಾಕ್ಮೆ ಉದ್ಯಮದ 70 ಸಾವಿರ ಕೋಟಿ ರೂಪಾಯಿಗಳ ಒಡತಿಯಾಗಿರುವ ಇವರು ರತನ್​ ಟಾಟಾ ಅವರ ಮಲತಾಯಿ. 94 ವರ್ಷದ ಇವರು ಇಂದಿಗೂ ಗಟ್ಟಿಮುಟ್ಟಾಗಿದ್ದು, ಮಗನ ಅಂತಿಮ ದರ್ಶನ ಪಡೆದುಕೊಂಡರು. 
 
ರತನ್ ಟಾಟಾ ಅವರ ಮಲತಾಯಿ ಸಿಮೋನ್ ಟಾಟಾ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಅವರು ಈ ಹಿಂದೆ ಪ್ರಸಿದ್ಧ ಸೌಂದರ್ಯವರ್ಧಕ ಕಂಪನಿ ಲ್ಯಾಕ್ಮೆಯ ಅಧ್ಯಕ್ಷರಾಗಿದ್ದರು ಇವರು. ರತನ್​ ಟಾಟಾ ಅವರ ತಂದೆ ತಮ್ಮ ಮೊದಲ ಪತ್ನಿ ಅಂದರೆ ರತನ್​ ಅವರ ತಾಯಿಗೆ ಡಿವೋರ್ಸ್​ ನೀಡಿ ಸಿಮೋನ್​ ಅವರನ್ನು ಮರು ಮದುವೆಯಾಗಿದ್ದು.  ರತನ್​ ಟಾಟಾ ಅವರು ನಾವಲ್ ಟಾಟಾ ಹಾಗೂ ಸೂನಿ ಟಾಟಾ ಅವರ ಪುತ್ರನಾಗಿ ಹುಟ್ಟಿದ್ದರು. ಆದರೆ ರತನ್​ ಅವರು ಕೇವಲ ಹತ್ತು ವರ್ಷದವರಿರುವಾಗಿ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡರು. ಮಗನನ್ನು ಯಾರು ನೋಡಿಕೊಳ್ಳುವುದು ಎಂಬ ಬಗ್ಗೆ ಪತಿ-ಪತ್ನಿಯರಲ್ಲಿ ಗಲಾಟೆಯಾಗಿ  ರತನ್​ ಅವರನ್ನು ತಮ್ಮದೇ ಕುಟುಂಬದ  ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟುಬಿಟ್ಟರು. ಇದನ್ನು ನೋಡಲಾಗದ ಅವರ ಅಜ್ಜಿ  ನವಾಜ್​ ಬಾಯಿ ಟಾಟಾ ಅವರು ರತನ್​ ಟಾಟಾ ಅವರುನ್ನು ಔಪಚಾರಿಕವಾಗಿ ದತ್ತು ಪಡೆದರು. ಬಳಿಕ ತಂದೆ ಸಿಮೋನ್​ ಅವರನ್ನು ಮದುವೆಯಾದರು. 

ಅಪ್ಪ-ಅಮ್ಮ ಡಿವೋರ್ಸ್​ ಬಳಿಕ ಅನಾಥಾಶ್ರಮ ಸೇರಿದ್ದ ರತನ್​ ಟಾಟಾ ದತ್ತು ಪುತ್ರನಾಗಿ ಬೆಳೆದದ್ದೇ ಕುತೂಹಲ!

Latest Videos

ಇನ್ನು ಸಿಮೋನ್​ ಕುರಿತು ಹೇಳುವುದಾದರೆ ಇವರು, ಸ್ವಿಜರ್ಲೆಂಡ್​ ನಿವಾಸಿ.  23ನೇ ವಯಸ್ಸಿಗೆ ಭಾರತಕ್ಕೆ ಬಂದು  ರತನ್‌ಜಿ ಅವರ ಕಣ್ಣಿಗೆ ಬಿದ್ದರು.  ಕೆಲವು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದ ಅವರು,  1955 ರಲ್ಲಿ ವಿವಾಹವಾದರು.  ಬಳಿಕ ಇವರು, ಟಾಟಾ ಆಯಿಲ್ ಮಿಲ್ಸ್, ಲ್ಯಾಕ್ಮೆಗೆ ಸೇರಿಕೊಂಡರು. 20 ವರ್ಷಗಳ ಬಳಿಕ  ಅಧ್ಯಕ್ಷ ಸ್ಥಾನಕ್ಕೇರಿದರು.  1989ರಲ್ಲಿ, ಲ್ಯಾಕ್ಮೆಯ ಬೆಳವಣಿಗೆಯ ಪರಿಣಾಮವಾಗಿ ಸಿಮೋನ್ ಅವರನ್ನು ಟಾಟಾ ಇಂಡಸ್ಟ್ರೀಸ್ ಮಂಡಳಿಗೆ ನೇಮಿಸಲಾಯಿತು. 1996ರಲ್ಲಿ, ಟಾಟಾ ಹಿಂದೂಸ್ತಾನ್ ಲಿವರ್ ಲಿಮಿಟೆಡ್ (HLL) ಗೆ Lakmeಯನ್ನು ಮಾರಾಟ ಮಾಡಿತು. 700.23 ಶತಕೋಟಿ INR ಮಾರುಕಟ್ಟೆ ಬಂಡವಾಳ ಹೊಂದಿರುವ ಟ್ರೆಂಟ್ ಲಿಮಿಟೆಡ್, ಪುಸ್ತಕದ ಅಂಗಡಿ ಲ್ಯಾಂಡ್‌ಮಾರ್ಕ್ ಮತ್ತು ಚಿಲ್ಲರೆ ಬಟ್ಟೆ ಅಂಗಡಿಗಳ ವೆಸ್ಟ್‌ಸೈಡ್ ಸರಣಿಯನ್ನು ಹೊಂದಿದೆ. ಅಕ್ಟೋಬರ್ 30, 2006 ರ ಮೊದಲು, ಸಿಮೋನ್ ಟಾಟಾ ಅವರು ಟ್ರೆಂಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರು.
 
ರತನ್ ಟಾಟಾ ಅವರಿಗೆ ಇಬ್ಬರು ಸಹೋದರರಿದ್ದಾರೆ. ಒಬ್ಬ ತಂಗಿ ಇದ್ದಾಳೆ. ಸೋದರಳಿಯರು ಮತ್ತು ಸೋದರ ಸೊಸೆಯಂದಿರು ಇದ್ದಾರೆ. ಆದರೆ ರತನ್ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರ ಕುಟುಂಬದಲ್ಲಿ ಸಂಪೂರ್ಣವಾಗಿ ಭಿನ್ನವಾಗಿರುವ ವ್ಯಕ್ತಿ. ಶ್ರೀಮಂತಿಕೆ, ಖ್ಯಾತಿಯಿಂದ ದೂರವಾಗಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಆಗರ್ಭ ಶ್ರೀಮಂತ ಕುಟುಂಬದವರಾದರೂ ಕೇವಲ ಎರಡು ಬೆಡ್ ರೂಮ್ ಫ್ಲಾಟ್ ನಲ್ಲಿ ವಾಸಿಸುವ ಜಿಮ್ಮಿ, ಮೊಬೈಲ್ ಸಹ ಬಳಸುವುದಿಲ್ಲ ಅಂತ ಕೇಳಿದ್ರೆ ಎಂತವರಿಗೂ ಅಚ್ಚರಿ ಆಗುತ್ತೆ. 

'ನೀವು ಹೋದ್ರಿ ಅಂತ ಎಲ್ಲರೂ ಹೇಳ್ತಿದ್ದಾರೆ' ರತನ್ ಟಾಟಾ ನಿಧನಕ್ಕೆ ಕಣ್ಣೀರಿಟ್ಟ ಮಾಜಿ ಗೆಳತಿ

click me!