ವ್ಯಾನಿಟಿ ವ್ಯಾನ್‌ನಲ್ಲಿ ಅದನ್ನು ಮಾಡಿದ್ವಿ ಅಂತಾನೆ ರಣವೀರ್‌, ಏನೂ ನಡೀಲೇ ಇಲ್ಲ ಅಂತಾಳೆ ಆಲಿಯಾ ಭಟ್!‌

By Bhavani Bhat  |  First Published Oct 10, 2024, 9:42 PM IST

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರ ಸುಹಾಗ್ ರಾತ್ರಿಯ ಬಗ್ಗೆ ನೀಡಿದ ಹೇಳಿಕೆಗಳು ನೆಟಿಜೆನ್‌ಗಳ ನಡುವೆ ವಿನೋದಕ್ಕೆ ಕಾರಣವಾಗಿದೆ.  ರಣವೀರ್ ಸಿಂಗ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ನಡೆದ ಘಟನೆ ಮತ್ತು ಆಲಿಯಾ ಭಟ್‌ ಜೊತೆಗಿನ ಅವರ ಹಿಂದಿನ ಸಂಬಂಧದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ಹಿಂದಿನ ಸಂಬಂಧದ ಬಗ್ಗೆಯೂ ಮಾತು ಬಂದಿದೆ.


ಇದೊಂದು ಫನ್ನಿ, ವಿಚಿತ್ರ ಸಂಗತಿ, ಬಾಲಿವುಡ್‌ನಲ್ಲಿ ಮಾತ್ರ ಇಂಥದ್ದೆಲ್ಲ ನಡೆಯುತ್ತೆ ಅಂತ ಹೇಳಬೇಕೋ, ಬಾಲಿವುಡ್‌ನವರು ಇಂತದ್ದನ್ನೇ ಮಾಡಿ ಸುದ್ದಿಯಲ್ಲಿರೋಕೆ ನೋಡ್ತಾರೆ ಅಂತ ಹೇಳಬೇಕೋ ತಿಳೀತಿಲ್ಲ. ಈ ಸಂಗತಿ ವಿಚಿತ್ರ ಅನಿಸೋಕೆ ಕಾರಣ ಎರಡು ಎಡವಟ್ಟು ಗಿರಾಕಿಗಳು ನೀಡಿದ ಹೇಳಿಕೆಗಳು. 

ಇವರಲ್ಲಿ ಒಬ್ಬಳು ಆಲಿಯಾ ಭಟ್.‌ ಆಕೆ ಒಮ್ಮೆ ಕರಣ್ ಜೋಹರ್ ಶೋನಲ್ಲಿ ಹೀಗೆ ಹೇಳಿದ್ದಳು- “ಸುಹಾಗ್ ರಾತ್ (ಮೊದಲ ರಾತ್ರಿ) ಅಂತ ಏನೂ ಇರಲ್ಲ. ನೀವು ತುಂಬಾ ದಣಿದಿರುತ್ತೀರಿ. ನಾನು ಸುಸ್ತಾಗಿದ್ದೆ. ರಣಬೀರ್‌ ಕೂಡ ಸುಸ್ತಾಗಿದ್ದ” ಅಂತ. ಈ ಮಾತು ಕರಣ್ ಶೋದಲ್ಲಿ ಎಲ್ಲರನ್ನೂ ನಗುವಂತೆ ಮಾಡಿತ್ತು. ʼನಿಜಕ್ಕೂ ನೀವು ಏನೂ ಮಾಡಿಲ್ವಾ?ʼ ಎಂಬ ಪ್ರಶ್ನೆ ಅಲ್ಲಿದ್ದವರ ಮುಖಗಳ ಮೇಲಿತ್ತು. ಆದರೆ ಯಾರೂ ಕೇಳಿಲ್ಲ. 

Tap to resize

Latest Videos

ಆದ್ರೆ ರಣಬೀರ್‌ ಕಪೂರ್‌ ಸ್ವಲ್ಪ ಈ ವಿಷಯದಲ್ಲಿ ಓಪನ್.‌ ಅವನು ತನ್ನ ವಿಚಾರವನ್ನೆಲ್ಲ ಮುಕ್ತವಾಗಿ ಹೇಳಿಬಿಡುತ್ತಾನೆ. ಹಿಂದೊಮ್ಮೆ ಅವನು "ನಾನು ನನ್ನ 15ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡೆ" ಎಂದಿದ್ದ. ಇಂಥವನು ಫಸ್ಟ್‌ ನೈಟ್‌ನಲ್ಲಿ ಆಲಿಯಾಳನ್ನು ಸುಮ್ಮನೇ ಬಿಡುತ್ತಾನಾ? ಎಂಬ ಅನುಮಾನ ಮೂಡಿದರೆ ಸಹಜ. ಆದ್ರೆ ಈ ಅನುಮಾನ ಪರಿಹರಿಸಿಕೊಳ್ಳಲು ಯಾವುದೇ ದಾರಿ ಇಲ್ಲ. 

ಇತ್ತ ಮತ್ತೊಬ್ಬ ಭೂಪ, ರಣವೀರ್‌ ಸಿಂಗ್.‌ ಇವನೀಗ ದೀಪಿಕಾ ಜೊತೆಗಿನ ದಾಂಪತ್ಯದಲ್ಲಿ ಒಂದು ಮಗುವಿನ ತಂದೆ. ಇವನೂ ಕೂಡ ಸೆಕ್ಸ್‌ ವಿಚಾರದಲ್ಲಿ ಬಹಳ ಮಾತಾಳಿ, ಎಗ್ಗಿಲ್ಲದೆ ಮಾತಾಡಿಬಿಡುತ್ತಾನೆ. ಕರಣ್‌ ಜೋಹರ್‌ ಶೋದಲ್ಲಿ ಇವನು ಒಮ್ಮೆ ಹೇಳಿದ್ದು ಹೀಗೆ- "ನಾವು ಸುಹಾಗ್‌ ರಾತ್‌ನಲ್ಲಿ ಸೆಕ್ಸ್‌ ಮಾಡಿದ್ವಿ. ನನ್ನ ವ್ಯಾನಿಟಿ ವ್ಯಾನ್‌ (ಕ್ಯಾರವಾನ್)ನಲ್ಲಿ ಕ್ವಿಕೀ ಸೆಕ್ಸ್‌ ಕೂಡ ಮಾಡಿದ್ದೆವು. ಬೇರೆ ಬೇರೆ ಥರದ ಸೆಕ್ಸ್‌ಗೆ ಬೇರೆ ಬೇರೆ ಥರದ ಪ್ಲೇಲಿಸ್ಟ್‌ ಕೂಡ ನನ್ನ ಬಳಿ ಇದೆ" ಅಂತ. ಸುಹಾಗ್‌ ರಾತ್‌ ಅಂದ ಮೇಲೆ ದೀಪಿಕಾ ಪಡುಕೋಣೆ ಜೊತೇನೇ ಇರಬೇಕು. 

ಆದ್ರೆ ಅವನು ವ್ಯಾನಿಟಿ ವ್ಯಾನ್‌ನಲ್ಲಿ ಯಾರ ಜೊತೆಗೆ ಏನು ಮಾಡಿದ್ದ ಎಂಬುದನ್ನು ಹೇಳಿಲ್ಲ! ರಣವೀರ್‌ ಸಿಂಗ್‌ ಹಾಗೂ ಆಲಿಯಾ ಭಟ್‌  ಹಲವು ಸಮಯ ಕಾಲ ಡೇಟಿಂಗ್‌ ಮಾಡಿದ್ದುದನ್ನು ಯಾರೂ ಮರೆತಿಲ್ಲ. ಹಾಗಿದ್ರೆ ರಣವೀರ್‌ ಹೇಳಿದ್ದು ಆಲಿಯಾ ಬಗೆಗಾ? ಎಂಬ ಒಂದು ಕುತೂಹಲ ಈಗ ನೆಟಿಜನ್‌ಗಳಿಗೆ ಮೂಡಿದೆಯಂತೆ. ಹಲವರು ಈ ಬಗ್ಗೆ ಕರಣ್‌ ಜೋಹರ್‌ ಶೋದ ಇನ್‌ಸ್ಟಗ್ರಾಂ ಮತ್ತಿತರ ಪ್ರೋಮೋ ಸೆಕ್ಷನ್‌ಗಳಲ್ಲಿ ಈ ಕಮೆಂಟ್‌ ಹಾಕಿದ್ದಾರೆ. 

ಹಾಗೇ ರಣಬೀರ್‌ ಕೂಡ ದೀಪಿಕಾ ಪಡುಕೋಣೆ ಹಿಂದೆ ಹೋಗಿದ್ದ. ಇವರಿಬ್ಬರ ಸಂಬಂಧ ಅಂತೂ ಬಿ-ಟೌನ್​ನಲ್ಲಿ ಸಕತ್​ ಸದ್ದು ಮಾಡಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೂ ಹೇಳಲಾಗಿತ್ತು.ಇವರ ಸಂಬಂಧ ಒಂದು ಹಂತ ಮೀರಿತ್ತು ಎನ್ನಲಾಗಿದೆ. ಆದರೆ ಎರಡೇ ವರ್ಷಗಳಲ್ಲಿ ಅಂದರೆ,  2007ರಿಂದ 2009ರಲ್ಲಿ ಸಂಬಂಧ ಕೊನೆಯಾಯಿತು. ಇದು ದೀಪಿಕಾ ಅವರನ್ನು ಖಿನ್ನತೆಗೆ ಕೂಡ ತಳ್ಳಿತ್ತು ಎಂದೇ ಹೇಳಲಾಗುತ್ತದೆ. ಆದರೆ ಬ್ರೇಕಪ್​ ಬಳಿಕವೂ ಜೊತೆಯಲ್ಲಿ ಸಿನಿಮಾ ಮಾಡಿದ್ದರು.

ರತನ್‌ ಟಾಟಾ ಮಾಜಿ ಪ್ರೇಯಸಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಸೈಫ್‌ ಅಲಿ ಖಾನ್‌ ಅಪ್ಪ!
 

ರಣಬೀರ್‌ ಸಾಕಷ್ಟು ಹೀರೋಯಿನ್‌ಗಳ ಜೊತೆ ತಿರುಗಾಡಿ ಬಂದಿದ್ದಾನೆ. ಪ್ರಿಯಾಂಕ ಚೋಪ್ರಾ, ಕತ್ರಿನಾ ಕೈಫ್...ಹೀಗೆ ಪಟ್ಟಿ ಸಾಗುತ್ತದೆ. ಇವೆಲ್ಲವುಗಳ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ನಟಿಸಿ ಲವ್​ ಮಾಡಿ, ಆಕೆ ಗರ್ಭಿಣಿಯಾದ ಬಳಿಕ ಮದುವೆಯೂ ಆಗಿ, ಈಗ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. 

ನಮ್ಮ ಮಕ್ಕಳು ಗಾಯತ್ರಿ ಮಂತ್ರ ಹೇಳ್ತಾರೆ, ನಾನು ಬಿಸ್ಮಿಲ್ಲಾ ಎನ್ನುತ್ತೇನೆ... ಶಾರುಖ್​ ಖಾನ್ ಮಾತು ವೈರಲ್​

ರಣವೀರ್‌, ರಣಬೀರ್‌, ಆಲಿಯಾ ಮುಂತಾದ ಬಾಲಿವುಡ್‌ ಸ್ಟಾರ್‌ಗಳಿಗೆ ಇಂಥದರ ಬಗ್ಗೆಯೆಲ್ಲಾ ಪಬ್ಲಿಕ್ಕಾಗಿ ಮಾತಾಡೋಕೆ ಯಾವ ಲಜ್ಜೆಯೂ ಇಲ್ಲ. ಈಗ ರಣವೀರ್‌ ಸಿಂಗ್-‌ ದೀಪಿಕಾ ಪಡುಕೋಣೆ, ಆಲಿಯಾ ಭಟ್-‌ ರಣಬೀರ್‌ ಕಪೂರ್‌ ದಂಪತಿಗಳು. ಎರಡೂ ದಂಪತಿಗಳಿಗೆ ಮಕ್ಕಳಾಗಿವೆ. ಅವರವರು ಅವರವರ ಸಂಸಾರ ಚೆನ್ನಾಗಿ ನಡೆಸಿಕೊಂಡು ಹೋಗಲಿ ಬಿಡ್ರಪ್ಪ. ಇಂಥ ಅನುಮಾನ ಎಲ್ಲ ಎತ್ತಿಹಾಕಿ ಹುಳಿ ಹಿಂಡೋ ಕೆಲಸ ಮಾಡೋದೇಕೆ ಅಂತ ಹೇಳುವವರೂ ಇದ್ದಾರೆ!

 

click me!