ಚಿರಂಜೀವಿ ಸರ್ಜಾ ತಮ್ಮ ಧೃವ ನೀಡಿದ ಕೈ ತುತ್ತಿನ ವಿಡಿಯೋ ವೈರಲ್

Jun 8, 2020, 5:26 PM IST

ಬೆಂಗಳೂರು(ಜೂ.08): ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೇವಲ 11 ವರ್ಷದಲ್ಲೇ ಚಿರಂಜೀವಿ ಮರೆಯಾಗಿ ಹೋಗಿದ್ದಾರೆ. ಹಸನ್ಮುಖಿ ಚಿರು ನಡೆ-ನುಡಿ, ಗಾಂಧಿನಗರದಲ್ಲಿ ಅವರಿಟ್ಟ ಒಂದೊಂದು ಹೆಜ್ಜೆಯೂ ಚಿರಾಯುವಾಗಿದೆ.

ಮನೆಯವರೊಂದಿಗೆ ಮಾತು ಹರಾಟೆ, ತಮಾಷೆಗಳೆಲ್ಲವೂ ಈಗ ನೆನಪು ಮಾತ್ರ. ಅಕ್ಟೋಬರ್ 17, 1980ರಲ್ಲಿ ಜನಿಸಿದ್ದ ಚಿರು, ಕೇವಲ 39 ವರ್ಷ ವಯಸಿಗೆ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಸರ್ಜಾ ಕುಟುಂಬದ ಕುಡಿ ಇಷ್ಟು ಬೇಗ ಕಮರಿ ಹೋಗಿದ್ದು, ವಿಧಿಯ ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಚಿರು ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಮಾತುಗಳಿವು

ಮಾವ ಅರ್ಜುನ್ ಸರ್ಜಾ ಗರಡಿಯಲ್ಲಿ ಪಳಗಿದ್ದ ಚಿರಂಜೀವಿ ಸರ್ಜಾ ವಾಯುಪುತ್ರನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.ಕೇವಲ 11 ವರ್ಷಗಳಲ್ಲಿ 22ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಮನೆಯವರೊಂದಿಗೆ ಸದಾ ತಮಾಷೆಯಿಂದ ಕಾಲಕಳೆಯುತ್ತಿದ್ದ ಚಿರು, ತಮ್ಮ ಧೃವ ಸರ್ಜಾ ಕೊನೆಯ ಕೈತುತ್ತಿನ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. 

ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja