ಯೋ ಬರ್ಕೋ..ಇವತ್ತು ಗೆಲ್ಲೋದು ನಮ್ RCB ಹುಡುಗರೇ, ಭವಿಷ್ಯ ನುಡಿದ ಶಿವ ರಾಜ್‌ಕುಮಾರ್!

First Published | May 18, 2024, 7:58 PM IST

ಯೋ ಬರ್ಕಯ್ಯ, ಪೇಪರ್ ಮುಂದಾಗಡೆ ಬರ್ಕೊ, ಶಿವ ರಾಜ್‌ಕುಮಾರ್ ತಮ್ಮ ಸ್ಟೈಲ್‌ನಲ್ಲೇ ಇಂದಿನ ಪಂದ್ಯದ ಭವಿಷ್ಯ ನುಡಿದಿದ್ದಾರೆ.
 

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಲೀಗ್ ಪಂದ್ಯ ಫೈನಲ್‌ಗಿಂತ ಕುತೂಹಲ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ

ಈ ಪಂದ್ಯಕ್ಕೆ ಶಿವರಾಜ್ ಕುಮಾರ್ ಆರ್‌ಸಿಬಿ ಜರ್ಸಿ ತೊಟ್ಟ ಹಾಜರಾಗಿದ್ದಾರೆ. ಇಷ್ಟೇ ಅಲ್ಲ ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದೇ ಗೆಲ್ಲಲಿದೆ ಎಂದು ಶಿವರಾಜ್ ಕುಮಾರ್ ತಮ್ಮದೇ ಸ್ಟೈಲ್‌ನಲ್ಲಿ ಭವಿಷ್ಯ ನುಡಿದಿದ್ದಾರೆ.

Tap to resize

ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ ಆರ್‌ಸಿಬಿ ಹುಡಗರೇ ಎಂದು ಶಿವರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಲವು ಸೆಲೆಬ್ರೆಟಿಗಳು ಆಗಮಿಸಿದ್ದರೆ. ಇಂದಿನ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇತ್ತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಾಗಿದ್ದಾರೆ.

ಈಗಾಗಲೇ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿಕೊಟ್ಟ ಚಾಂಪಿಯನ್  ಮಹಿಳಾ ತಂಡ ಇಂದಿನ ಪಂದ್ಯಕ್ಕೆ ಹಾಜರಾಗಿದೆ. 

ಸಿಎಸ್‌ಕೆ ತಂಡ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ ಆರ್‌ಸಿಬಿ ಗೆಲುವಿನ ಜೊತೆಗೆ ರನ್‌ರೇಟ್ ಅವಶ್ಯಕತೆ ಇದೆ. ಸದ್ಯ ಆರ್‌ಸಿಬಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಸದ್ಯ ಪಂದ್ಯಕ್ಕೆ ಮಳೆ ವಕ್ಕರಿಸಿದೆ. ಆರ್‌ಸಿಬಿ 3 ಓವರ್‌ನಲ್ಲಿ 31 ರನ್ ಸಿಡಿಸುತ್ತಿದ್ದಂತೆ ಮಳೆ ಆಗಮಿಸಿದೆ. ಹೀಗಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕೆಲ ಹೊತ್ತು ಮಳೆ ಬ್ರೇಕ್ ಪಡೆದುಕೊಳ್ಳಲು ಪ್ರಾರ್ಥಿಸುತ್ತಿದ್ದರೆ. ರೋಚಕ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

Latest Videos

click me!