ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು 2021ರಲ್ಲಿಯೇ 'ಆದಷ್ಟು ಬೇಗ ಅನುಷ್ಕಾ ಅವರು ಮದುವೆಯಾಗಲಿದ್ದಾರೆ' ಅಂತ ಭವಿಷ್ಯ ನುಡಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುಷ್ಕಾ ಶೆಟ್ಟಿ ಅವರು 'ನನಗೆ ಇನ್ನೂ ಕೆಲ ವರ್ಷ ಮದುವೆಯಾಗುವ ಯೋಚನೆ ಇಲ್ಲ, ನಾನು ಕೆಲಸಗಳಲ್ಲಿ ಬ್ಯುಸಿ ಆಗಿದ್ದೇನೆ. ಚಿತ್ರರಂಗಕ್ಕೆ ಸಂಬಂಧಪಡದ ವ್ಯಕ್ತಿಯನ್ನೇ ನಾನು ಮದುವೆ ಆಗ್ತೀನಿ' ಅಂತ ಸ್ಪಷ್ಟನೆ ನೀಡಿದ್ದರು.