ಚಳಿ, ಗಾಳಿ-ಮಳೆ ಎನ್ನದೇ ಹಗಲು ರಾತ್ರಿ ಕೆಲಸ ಮಾಡುವ ಸರ್ಕಾರಿ ಇಲಾಖೆ ಯಾವುದಾದ್ರು ಇದ್ರೆ ಅದು ಬೆಸ್ಕಾಂ ಇಲಾಖೆ. ಮನೆ ಮನೆಗೆ ವಿದ್ಯುತ್ ಕಲ್ಪಿಸೋ ಇಲಾಖೆಗೆ ಇಂದು ಕಂರೆಟ್ ಶಾಕ್ ಕೊಟ್ಟಿರುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.18): ಚಳಿ, ಗಾಳಿ-ಮಳೆ ಎನ್ನದೇ ಹಗಲು ರಾತ್ರಿ ಕೆಲಸ ಮಾಡುವ ಸರ್ಕಾರಿ ಇಲಾಖೆ ಯಾವುದಾದ್ರು ಇದ್ರೆ ಅದು ಬೆಸ್ಕಾಂ ಇಲಾಖೆ. ಮನೆ ಮನೆಗೆ ವಿದ್ಯುತ್ ಕಲ್ಪಿಸೋ ಇಲಾಖೆಗೆ ಇಂದು ಕಂರೆಟ್ ಶಾಕ್ ಕೊಟ್ಟಿರುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ತಮ್ಮ ಕಚೇರಿ ಮುಂದೆಯೇ ತಮಗೆ ನ್ಯಾಯ ಒದಗಿಸಿ, ಸೂಕ್ತ ಸೌಲಭ್ಯ ಕಲ್ಪಿಸಿಕೊಡಿ ಎಂದು ಪ್ರತಿಭಟನೆ ಮಾಡ್ತಿರೋ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಬೆಸ್ಕಾಂ ಕಚೇರಿ ಬಳಿ. ನಿನ್ನೆ ತಡರಾತ್ರಿ ನಗರದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಡಿಸಿ ನಿವಾಸದ ಪಕ್ಕದ ರಸ್ತೆಯಲ್ಲಿಯೇ ಇರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಚಿತ್ರದುರ್ಗ ಗ್ರಾಮಾಂತರ ಉಪವಿಭಾಗದ ಬೆಸ್ಕಾಂ ಕಚೇರಿಗೆ ಕರೆಂಟ್ ಶಾಕ್ ಕೊಟ್ಟಿದೆ.
undefined
ಹಗಲು ಇರುಳೆನ್ನದೇ ಜನರ ಮನಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳಿಗೆ ಪವರ್ ಶಾಕ್ ನೀಡಿದೆ. ಕಳೆದ ಮೂರು ವರ್ಷಗಳಿಂದಲೂ ಈ ಬೆಸ್ಕಾಂ ಕಚೇರಿ ಶಿಥಿಲಾವಸ್ಥೆ ತಲುಪಿದ್ದು, ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ರೆ ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ, ಇಂದು ಕಚೇರಿಗೆ ಕೆಲಸಕ್ಕೆಂದು ತೆರಳಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಕರೆಂಟ್ ಶಾಕ್ ಕೊಟ್ಟಿದೆ. ಮಳೆಯ ನೀರು ಕಚೇರಿಗೆ ಆವರಿಸಿರೋ ಪರಿಣಾಮ, ಕರೆಂಟ್ ಗ್ರೌಂಡ್ ಆಗಿ, ಕಚೇರಿಯಲ್ಲಿ ಇರುವ ಚೇರ್ ಗಳು, ಗೋಡೆ, ಇನ್ನಿತರ ವಸ್ತುಗಳನ್ನು ಮುಟ್ಟಿದ ಎಲ್ಲಾ ಸಿಬ್ಬಂದಿಗೆ ಕರೆಂಟ್ ಶಾಕ್ ಕೊಟ್ಟಿದೆ.
West Nile Fever: ಕೇರಳಕ್ಕೆ ಜ್ವರ ಬಂದ್ರೆ, ಕರ್ನಾಟಕಕ್ಕೆ ಶೀತ ಆಗುತ್ತೆ: ಏನಿದು ವೆಸ್ಟ್ ನೈಲ್ ಆತಂಕ!
ಇದ್ರಿಂದ ಬೇಸರಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ನಮಗೆ ಸೂಕ್ತ ಕೊಠಡಿ ಒದಗಿಸಿ ಕೊಡಿ ಎಂದು ತಮ್ಮ ಕಚೇರಿ ಮುಂದೆ ತಾವೇ ಪ್ರತಿಭಟನೆ ನಡೆಸಿದ ವಿನೂತನ ಘಟನೆ ನಡೆದಿತು. ನಮ್ಮನ್ನೆ ನಂಬಿಕೊಂಡಿರೋ ಕುಟುಂಬಗಳು ಇವೆ, ನಾವು ಸತ್ತ ಮೇಲೆ ಅಧಿಕಾರಿಗಳು ಬಂದು ಸಾಂತ್ವಾನ ಹೇಳೋದ್ರಿಂದ ಹೋದ ಪ್ರಾಣ ಮತ್ತೆ ಬರುತ್ತಾ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಬೆಸ್ಕಾಂ ಇಲಾಖೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಿಂದ ಕಚೇರಿ ಶಿಥಿಲಾವಸ್ಥೆಗೊಂಡಿರೋದು ಮಾತ್ರವಲ್ಲದೇ, ಕಚೇರಿಯಲ್ಲಿ ಯಾವುದೇ ಸಮಸ್ಯೆ ಇದ್ರು ಅಧಿಕಾರಿಗಳು, ಸಿಬ್ಬಂದಿಗಳು ಯಾರೂ ಚಕಾರ ಎತ್ತದೇ ಸುಮ್ಮನೆ ಬಾಯಿ ಮುಚ್ಕೊಂಡ್ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ಬಾರಿ ಕಚೇರಿಯಲ್ಲಿ ಕೊಠಡಿಯ ಮೇಲ್ಚಾವಳಿ ಕುಸಿದು ಬಿದ್ದಿದೆ. ಮೇಲಾಧಿಕಾರಿಗಳ ಗಮನಕ್ಕೆ ಎಷ್ಟೇ ಬಾರಿ ತಂದರೂ, ಹೊಸ ಕಟ್ಟಡ ನಿರ್ಮಾಣವಾಗ್ತಿದೆ ಎಂದು ಸಬೂಬು ಹೇಳುತ್ತಲೇ ಅಧಿಕಾರಿಗಳು ಬರ್ತಿದ್ದಾರೆ. ಇತ್ತ ಹೊಸ ಕಟ್ಟಡ ನಿರ್ಮಾಣವಾಗಿದ್ರು ಉದ್ಘಾಟನೆ ಮಾಡಬೇಕು ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಚೇರಿಯ ಕಟ್ಟಡಗಳು ಯಾವಾಗ ನಮ್ಮ ಮೇಲೆ ಬೀಳುತ್ತವೆಯೋ ಎಂದು ನಿತ್ಯ ಭಯದಲ್ಲಿಯೇ ನಾವು ಕೆಲಸ ಮಾಡ್ತಿದ್ದೀವಿ. ಕಚೇರಿಯಲ್ಲಿ ಸುಮಾರು ೨೫ ಮಂದಿಗೂ ಅಧಿಕ ಜನರು ಕೆಲಸ ಮಾಡ್ತಿದ್ದೀವಿ.
ಧಾರವಾಡ ಅರಣ್ಯ ಇಲಾಖೆಯ 'ರೂಟ್ ಸ್ಟಾಕ್' ಯೋಜನೆಯಲ್ಲಿ ಲಕ್ಷ ಲಕ್ಷ ಲೂಟಿ: ಏನಿದು ಆರೋಪ?
ನೂತನ ಕಚೇರಿ ಉದ್ಘಾಟನೆ ನಿಧಾನವಾಗಿಯೇ ಮಾಡಿಕೊಳ್ಳಲಿ, ಮೊದಲು ನಮಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟರೆ ಅನುಕೂಲ. ನಿತ್ಯ ನಾವು ಪ್ರಾಣ ಭಯದಲ್ಲಿಯೇ ಕೆಲಸ ಮಾಡ್ತೀದ್ದೀವಿ ಎಂದು ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದರು. ಒಟ್ಟಾರೆ ಮನೆಯಲ್ಲಿ ಐದು ನಿಮಿಷ ಕರೆಂಟ್ ಇಲ್ಲ ಅಂದ್ರೆ ಸಾಕು ಬೆಸ್ಕಾಂ ಇಲಾಖೆ ಸಿಬ್ಬಂದಿಗಳ ಮೇಲೆ ಜನರು ರೇಗಾಡ್ತಾರೆ. ಆದ್ರೆ ಇಂದು ಅವರಿಗೇ ಸಮಸ್ಯೆ ಬಂದಿದ್ರೂ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿ ತನದಿಂದ ವರ್ತನೆ ಮಾಡ್ತಿರೋದು ನಿಜಕ್ಕೂ ಶೋಚನೀಯ ಸಂಗತಿ. ಇನ್ನಾದ್ರು ಜಿಲ್ಲಾಧಿಕಾರಿ ಈ ಸಮಸ್ಯೆಗೆ ಕುರಿತು ಶೀಘ್ರ ಪರಿಹಾರ ಒದಗಿಸಬೇಕಿದೆ.