Dasarahalli Sambhrama: ಬಾಗ್ಲು ತೆಗಿ ಮೇರಿ ಜಾನ್ ಎಂದು ಮಕ್ಕಳ ಜೊತೆ ಕುಣಿದ ಅದಿತಿ ಪ್ರಭುದೇವ

Oct 2, 2022, 11:49 AM IST

ಸ್ಯಾಂಡಲ್​​ವುಡ್​​ನ ಬ್ಯೂಟಿಫುಲ್​​ ಹೀರೋಯಿನ್ ಅಪ್ಪಟ ಕನ್ನಡತಿ ಅದಿತಿ. ಸದಾ ನಗುಮುಖದ ಈ ಸುಂದರಿ ಇದ್ದಲ್ಲಿ ಜೋಶ್​ಗೇನು ಕಮ್ಮಿ ಇಲ್ಲ. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗು ಕನ್ನಡ ಪ್ರಭ ಸಹಯೋಗದಲ್ಲಿ ನಡೆದ ಫುಡ್​ ಫೆಸ್ಟಿವೆಲ್​​ನಲ್ಲೂ ಅದಿತಿಯ ಸಿಕ್ಕಾಪಟ್ಟೆ ಜೋಶ್​ ಇತ್ತು. ಬೆಂಗಳೂರಿನ ದಾಸರಹಳ್ಳಿಯಲ್ಲಿ ಫುಡ್​​​ಪ್ರೀಯರ ಮೇಳ ನಡೆದಿತ್ತು. ಈ ಕಾರ್ಯಕ್ರಮಕ್ಕೆ ತೋತಾಪುರಿ ಸಿನಿಮಾ ತಂಡ ಆಗಮಿಸಿತ್ತು. ತೋತಾಪುರಿ ಹೀರೋಯಿನ್ ಅದಿತಿ ಪ್ರಭುದೇವ ತಮ್ಮ ಸಿನಿಮಾದ ಬಾಗ್ಲು ತೆಗಿ ಮೇರಿ ಜಾನ್​ ಹಾಡಿಗೆ ಮಕ್ಕಳ ಜೊತೆ ಸೇರಿ ಮಸ್ತ್​ ಡಾನ್ಸ್ ಮಾಡಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಜಗ್ಗೇಶ್​ ಅದಿತಿ ನಟನೆಯ ತೋತಾಪುರಿ ಸಿನಿಮಾ ಬೆಳ್ಳಿತೆರೆ ಮೇಲೆ ಬಂದು ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment