ಪೆಟ್ರೋಮ್ಯಾಕ್ಸ್‌ನ 'ಪೋಲಿ' ವಿಷಯಗಳನ್ನು ಬಿಚ್ಚಿ ನಟಿ ಕಾರುಣ್ಯರಾಮ್

Jul 16, 2022, 5:38 PM IST

ಗಂಭೀರ ಮತ್ತು ವಿಷಾದದ ಸಂಗತಿಗಳನ್ನೂ ತಮಾಷೆಯಾಗಿ ಹೇಳಬಹುದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ ವಿಜಯಪ್ರಸಾದ್‌. ಮೂವರು ಬ್ರಹ್ಮಚಾರಿಗಳೂ ಒಬ್ಬಳು ಕನ್ಯೆಯೂ ಜತೆಗಿರಲು ಬಾಡಿಗೆ ಮನೆ ಹುಡುಕುವುದು ಕತೆ. ಬ್ರೋಕರ್‌ ಮೀನಾಕ್ಷಿ ಅವರಿಗೆ ಮನೆ ಕೊಡಿಸುವ ಸಾಹಸದಲ್ಲೇ ಬದುಕು ಬೆಳಕೂ ಎರಡೂ ಕಾಣಿಸುತ್ತಾಳೆ. ಇಲ್ಲಿ ಮನೆ-ರಂಜನೆಗೆ ಮೋಸವಿಲ್ಲ.

'ಪೆಟ್ರೋಮ್ಯಾಕ್ಸ್' ಹುಟ್ಟಿಕೊಂಡ ಕಥೆ ಹೇಳಿದ ನಿರ್ಮಾಪಕ ಸುಧೀರ್

ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್‌, ನಾಗಭೂಷಣ್‌, ಅರುಣ್‌, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಕಾರುಣ್ಯ ರಾಮ್‌ ಅವರ ಪಾತ್ರದಿಂದ ಹೊರಡುವ ಪಂಚ್‌ ಮಾತುಗಳು ತುರಿಕೆಯಷ್ಟೇ ಹಿತವಾದ ಮಜಕೊಡುತ್ತವೆ. ಪೆಟ್ರೋಮ್ಯಾಕ್ಸ್ 'ಪೋಲಿ' ವಿಚಾರಗಳ ಬಗ್ಗೆ ನಟಿ ಕಾರುಣ್ಯ ರಾಮ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.