ಮುದ್ದಾಗಿ ಇದ್ದಾಳೆ ನಮ್ ಹುಡುಗಿ; ಆಶಿಕಾ ರಂಗನಾಥ್ ಹೊಗಳಿದ ಶಿವರಾಜ್ ಕುಮಾರ್

Nov 7, 2022, 5:47 PM IST

ನಟ ಇಶಾನ್ ಮತ್ತು ಆಶಿಕಾ ರಂಗನಾಥ್ ನಟನೆಯ ರೇಮೋ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದ ರೇಮೋ ಸಿನಿಮಾದ ಟ್ರೈಲರ್ ಈಗ ಅಭಿಮಾನಿಗಳ ಮುಂದೆ ಬಂದಿದೆ. ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ರೈಲರ್ ರಿಲೀಸ್ ಮಾಡಿ ಶುಭಕೋರಿದರು. ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ನಟಿ ಆಶಿಕಾ ರಂಗನಾಥ್ ಅವರನ್ನು ಹಾಡಿಹೊಗಳಿದರು. ನಮ್ ಹುಡುಗಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ, ಆಲ್ರೆಡಿ ಮುದ್ದಾಗಿ ಇದ್ದಾರೆ ಎಂದು ಹಾಡಿಹೊಗಳಿದರು. ಇನ್ನು ಸಿನಿಮಾದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದರು.