Dec 12, 2022, 11:57 AM IST
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್, ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಬೆರಳಿಗೆ ಉಂಗುರ ತೊಡಿಸಿದ್ದಾರೆ. ಇವರಿಬ್ಬರ ಪ್ರೀತಿ ಗುಟ್ಟು ಎಂದೂ ಎಲ್ಲೂ ರಟ್ಟಾಗಿರಲಿಲ್ಲ. ಐದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟುಕೊಂಡಿದ್ರು. ಇಬ್ಬರ ನಡುವೆ ಲಂಡನ್ನಿನಲ್ಲಿ ಓದುತ್ತಿರುವಾಗ್ಲೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೀತಿ ರೆಬೆಲ್ ಸ್ಟಾರ್ ಅಂಬರೀಶ್'ಗೂ ಗೊತ್ತಿತ್ತು. ಈಗ ಈ ಪ್ರೀತಿಗೆ ಎಂಗೇಜ್ಮೆಂಟ್ ಮುದ್ರೆ ಒತ್ತಿದ್ದಾರೆ. ಅಭಿಶೇಕ್ ಅವಿವಾಗೆ ಡೈಮಂಡ್ ರಿಂಗ್ ತೊಡಿಸಿದ್ದಾರೆ.
Big Boss9: ಸಾನ್ಯಾ- ರೂಪೇಶ್ ಮೇಲೆ ಕಿಚ್ಚ ಗರಂ, ಬಿಗ್ಬಾಸ್ ಬಗ್ಗೆ ಮಾತಾಡಿದ್ದಕ್ಕೆ ಖಡಕ್ ಎಚ್ಚರಿಕೆ!