ಭಾರತದ ಮೊದಲ ಬುಲೆಟ್ ರೈಲು ಕಾಮಗಾರಿ ಸ್ಥಳದಲ್ಲಿದ್ದ ತಾತ್ಕಾಲಿಕ ಗೋಡೆ ಕುಸಿದು ದುರಂತ ಸಂಭವಿಸಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮತಪಟ್ಟಿದ್ದರೆ, ಮತ್ತೊರ್ವ ಗಾಯಗೊಂಡಿದ್ದಾನೆ.
ಅಹಮ್ಮದಾಬಾದ್(ನ.05) ಭಾರತದ ಮೊದಲ ಬುಲೆಟ್ ರೈಲು ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ದೇಶದ ಬುಲೆಟ್ ರೈಲಿನಲ್ಲಿ ಪ್ರಯಾಣಿಸಲು ಬಹುತೇಕರು ಉತ್ಸುಕರಾಗಿದ್ದಾರೆ. ಇತ್ತ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲಿ ಬುಲೆಟ್ ರೈಲು ಉದ್ಘಾಟಿಸಲು ಶ್ರಮಿಸುತ್ತಿದೆ. ಇದರ ನಡುವೆ ದೊಡ್ಡ ಅವಘಡ ಸಂಭವಿಸಿದೆ. ಮುಂಬೈ-ಅಹಮ್ಮದಾಬಾದ್ ಬುಲೆಟ್ ರೈಲಿನ ಹಳಿ ಕಾಮಗಾರಿಯಲ್ಲಿ ವೇಳೆ ತಾತ್ಕಾಲಿಕ ಗೋಡೆ ಕುಸಿತಗೊಂಡಿದೆ. ಇದರ ಪರಿಣಾಮ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಕಾರ್ಮಿಕನಿಗೆ ಚಿಕಿತ್ಸೆ ಮುಂದುವರಿದಿದೆ.
ವಸಾದ್ ಗ್ರಾಮದ ಬಳಿ ದೇಶದ ಮೊದಲ ಬುಲೆಟ್ ರೈಲು ಹಳಿ ಕಾಮಗಾರಿ ಬಿರುಸಿನಿಂದ ಸಾಗುತ್ತಿತ್ತು. ಅಡಿಪಾಯಕ್ಕಾಗಿ ದೊಡ್ಡ ದೊಡ್ಡ ಕಾಂಕ್ರೀಟ್ ಬ್ಲಾಕ್ ಹಾಗೂ ಕಬ್ಬಿಣದ ಸರಕುಗಳನ್ನು ಇಡಲಾಗಿತ್ತು. ಕಾಮಾಗಾರಿ ಪಕ್ಕದಲ್ಲೇ ಈ ಕಾಂಕ್ರೀಟ್ ಬ್ಲಾಕ್ ಸೇರಿದಂತೆ ಇತರ ಕಾಮಗಾರಿ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ವೇಳೆ ಈ ತಾತ್ಕಾಲಿಕವಾಗಿ ಇಟ್ಟಿದ್ದ ಕಾಂಕ್ರೀಟ್ ಬ್ಲಾಕ್ ಹಾಗೂ ಕಬ್ಬಿಣದ ರಾಡ್‌ಗಳು ದಿಢೀರ್ ಕುಸಿತಗೊಂಡಿದೆ.
ಬೆಂಗಳೂರು ಕಟ್ಟಡ ದುರಂತ: ಮಾಲೀಕನ ದುರಾಸೆಗೆ ಅಮಾಯಕರು ಬಲಿ
ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಕಾಂಕ್ರೀಟ್ ಬ್ಲಾಕ್, ಕಬ್ಬಿಣದ ಸರಕುಗಳು ಕುಸಿದಿದೆ. ಹೀಗಾಗಿ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ತಕ್ಷಣವೇ ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರೆ, ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದು. ಆದರೆ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ಇನ್ನೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಾಚರಣೆ ಗುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ, ಧರ್ಮೇಶ್ ಗೋರ್, ಸದ್ಯ ಕಾರ್ಯಾಚರಣೆ ಮುಕ್ತಾಯೊಂಡಿದೆ ಎಂದಿದ್ದಾರೆ. ತಾತ್ಕಾಲಿಕ ಬ್ಲಾಕ್ಸ್ ಕುಸಿದಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತ್ತು. ಕಾರ್ಯಾಚರಣೆ ಆರಂಭಿಸಲಾಗಿತ್ತು. ನಾಲ್ವರು ಕಾರ್ಮಿಕರು ಈ ಬ್ಲಾಕ್ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಬ್ಲಾಕ್ಸ್ ತೆರವು ಮಾಡಿ ಕಾರ್ಮಿಕರ ರಕ್ಷಣೆ ಮಾಡುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು. ಮತ್ತೊರ್ವ ಹೊರಚತೆಗೆದರೂ ಬದುಕಿ ಉಳಿಯಲಿಲ್ಲ ಎಂದು ಧರ್ಮೇಶ್ ಗೋರ್ ಹೇಳಿದ್ದಾರೆ.
508 ಕಿಲೋಮೀಟರ್ ಉದ್ದ ಮುಂಬೈ-ಅಹಮ್ಮದಬಾದ್ ಬುಲೆಟ್ ರೈಲಿಗಾಗಿ ಈ ಕಾಮಗಾರಿ ನಡೆಯುತ್ತಿತ್ತು. ಗುಜರಾತ್‌ನಲ್ಲಿ 352 ಕಿ.ಮಿ ಹಾಗೂ ಮಹಾರಾಷ್ಟ್ರದಲ್ಲಿ 156 ಕಿಲೋಮೀಟರ್ ಹಳಿ ಕಾಮಗಾರಿ ನಡೆಯುತ್ತಿದೆ. 508 ಕಿ.ಮಿ ಪ್ರಯಾಣದಲ್ಲಿ ಒಟ್ಟು 12 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಮುಂಬೈನಿಂದ ಅಹಮ್ಮದಾಬಾದ್ ಪ್ರಯಾಣಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಸಮಯ ಅಗತ್ಯವಿದೆ. ಆದರೆ ಬುಲೆಟ್ ರೈಲು ಕೇವಲ 3 ಗಂಟೆಯಲ್ಲಿ 508 ಕಿ.ಮೀ ಪ್ರಯಾಣಿಸಲಿದೆ.
ಬುಲೆಟ್ ರೈಲಿನ ಸೇತುವೆ ನಿರ್ಮಾಣಕ್ಕಾಗಿ ಈ ಕಾಮಗಾರಿ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಸೇತುವೆಯ ಅಡಿಪಾಯಕ್ಕಾಗಿ ಭಾರಿ ಘಾತ್ರದ ಕಬ್ಬಿಣದ ರಾಡ್‌ಗಳನ್ನು ತರಿಸಲಾಗಿತ್ತು. ಕಾಂಕ್ರೀಟ್ ಬ್ಲಾಕ್ ಹಾಗೂ ರಾಡ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಅಡಿಪಾಯಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಘನ ವಾಹನಗಳ ಕಾಮಗಾರಿ ಪ್ರತಿ ದಿನ ಸಾಗಿತ್ತು. ಇದರ ನಡುವೆ ಸಂಗ್ರಹಿಸಿಟ್ಟ ಕಾಮಗಾರಿ ವಸ್ತುಗಳು ಸಡಿಲಗೊಂಡು ಕುಸಿದು ಬಿದ್ದಿದೆ. ಪಕ್ಕದಲ್ಲೇ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಹೀಗಾಗಿ ದುರಂತ ಸಂಭವಿಸಿದೆ. ಮಾಹಿ ನದಿ ಪಕ್ಕದಲ್ಲೇ ಈ ಕಾಮಾಗಾರಿ ನಡೆಯುತ್ತಿತ್ತು. ಮಾಹಿ ನದಿಗೆ ಅಡ್ಡಲಾಗಿ ಕಟ್ಟಬೇಕಿದ್ದ ಸೇತುವೆ ಆರಂಭದಲ್ಲೇ ಅವಘಡ ಸಂಭವಿಸಿ ಮೂವರು ಕಾರ್ಮಿಕರ ಜೀವ ಬಲಿಪಡೆದಿದೆ. ಮತ್ತೊರ್ವ ಕಾರ್ಮಿಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಚಿತ್ರದುರ್ಗದಲ್ಲಿ ಭಾರೀ ಮಳೆ: ಜಿಲ್ಲಾಸ್ಪತ್ರೆಯ ಛಾವಣಿಯ ಸಿಮೆಂಟ್ ಕುಸಿತ, ರೋಗಿಯ ತಲೆಗೆ ಪೆಟ್ಟು!