ಬಿಗ್‌ಬಾಸ್ ಕನ್ನಡ 11ರಲ್ಲಿ ಗಾಯಕ ಹನುಮಂತ ಅವರ ಆಟದ ಶೈಲಿ ಬದಲಾಗಿದೆ. ಕ್ಯಾಪ್ಟನ್ ಆಗಿ ತಂಡಗಳನ್ನು ನಿರ್ವಹಿಸುವ ಹನುಮಂತ, ಟಾಸ್ಕ್‌ಗಳಲ್ಲಿ ತಂತ್ರಗಾರಿಕೆ ಬಳಸಿ ಆಟವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಕನ್ನಡ 11ರಲ್ಲಿ ಗಾಯಕ ಹನುಮಂತ ಅವರ ಆಟವೇ ಎಲ್ಲರಿಗೂ ಇಷ್ಟವಾಗುತ್ತಿದೆ. ಬಂದ ಮೊದಲ ವಾರ ಸೈಲೆಂಟ್ ಇದ್ದ ಹನುಮಂತ ಈಗ ತನ್ನ ಆಟದ ಪಥ ಬದಲಿಸಿದ್ದಾರೆ. ಬಿಗ್‌ಬಾಸ್ ಆಟವನ್ನು ಅರಿತುಕೊಂಡು ಆಡುತ್ತಿದ್ದಾರೆ.
6ನೇ ವಾರದ ಮೂರನೇ ದಿನ ಹನುಮಂತ ತೆಗೆದುಕೊಂಡ ನಿರ್ಧಾರದಲ್ಲಿ ಹನುಮ ಬಿಗ್‌ಬಾಸ್ ಅನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತ ನಾಯಕತ್ವವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. 6ನೇ ವಾರಕ್ಕೆ ಮನೆಯಲ್ಲಿ ಕೆಂಪು, ಹಳದಿ, ಹಸಿರು,ನೀಲಿ ತಂಡವನ್ನು ಮಾಡಲಾಗಿದ್ದು ಒಂದೊಂದು ತಂಡದಲ್ಲಿ ತಲಾ ಮೂರು ಜನ ಇದ್ದಾರೆ.
undefined
3 ಷೇರುಗಳಿಂದ 101 ಕೋಟಿ ಒಡೆಯನಾದ ಉತ್ತರ ಕನ್ನಡದ ಹಿರಿಯ ವ್ಯಕ್ತಿ!
ಕೆಂಪು:ಗೌತಮಿ,ತ್ರಿವಿಕ್ರಮ್,ಅನುಷಾ
ಹಳದಿ:ಶಿಶಿರ್, ಐಶ್ವರ್ಯಾ , ಧನ್‌ರಾಜ್
ಹಸಿರು:ಮಂಜು, ಭವ್ಯ, ಸುರೇಶ್
ನೀಲಿ: ಚೈತ್ರಾ, ಮೋಕ್ಷಿತಾ, ಧರ್ಮ
ಬಿಗ್‌ಬಾಸ್ ತಂಡಗಳಿಗೆ ಟಾಸ್ಕ್ ನೀಡಿ ಗೆದ್ದ ತಂಡಕ್ಕೆ ಸಿಕ್ಕಾಪಟ್ಟೆ ಸೌಕರ್ಯ ನೀಡಿದೆ. ಗೆದ್ದ ತಂಡ ಇಮ್ಯೂನಿಟಿ ಕಾರ್ಡ್, ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್, ಲಕ್ಷುರಿ ಕಾರ್ಡ್, ಗುಡ್‌ನೈಟ್ ಕಾರ್ಡ್, ಕಿಕ್‌ಔಟ್ ಕಾರ್ಡ್, ಪನಿಷ್‌ಮೆಂಟ್ ಕಾರ್ಡ್ (ಗೆದ್ದವರಿಗೆ ಸೋತವರು ಸೇವೆ) ಇವುಗಳನ್ನು ಆಯ್ಕೆ ಮಾಡಲಿದೆ. ಆದರೆ ಇದರಲ್ಲಿ ಅಂತಿಮವಾಗಿ ಕ್ಯಾಪ್ಟನ್ ಹನುಮಂತ ಅವರ ನಿರ್ಧಾರವೇ ಅಂತಿಮ ಎಂದು ಬಿಗ್‌ಬಾಸ್ ಹೇಳಿದೆ.
"ಈ ಸಲ ಚೆಂಡು ನಮ್ಮದೇ" ಎಂಬ ಟಾಸ್ಕ್ ನಲ್ಲಿ ಚೆಂಡನ್ನು ಗೋಲ್ ಗೆ ತಲುಪಿಸುವ ಆಟವಿತ್ತು. ಗೌತಮಿ,ಚೈತ್ರಾ, ಐಶ್ವರ್ಯಾ, ಭವ್ಯ ಸುಮಾರು ಒಂದು ಗಂಟೆಗಳ ಕಾಲ ಆಟ ಆಡಿದರು. ಆದರೆ ಯಾರೂ ಗೋಲ್ ರೀಚ್ ಆಗಲಿಲ್ಲ. ಈ ವೇಳೆ ಮಂಜು ಮತ್ತು ಶಿಶಿರ್ ಅವರ ಟೀಂ ಒಂದಾಗಿ ಹಳದಿ ಟೀಂ ನಿಂದ ಐಶ್ವರ್ಯಾ ಗೆದ್ರು. ಗೆದ್ದ ಟೀಂ ಸ್ಟ್ರಾಂಗೆಸ್ಟ್ ಟೀಂ ಅಂತ ಗೌತಮಿ, ತ್ರಿವಿಕ್ರಮ್ , ಅನುಷಾ ಅವರನ್ನು ಮುಂದಿನ ಆಟದಿಂದ ಹೊರಗಿಟ್ಟರು. ಹೀಗಾಗಿ ಹಳದಿ, ಹಸಿರು ಮತ್ತು ನೀಲಿ ಟೀಂ ಆಟವಾಡಿತ್ತು. ನೀಲಿ ಟೀಂ ನಿಂದ ಧರ್ಮ ಏಕಾಂಗಿಯಾಗಿ ಆಡಿ ಸೋತರು. ಹಸಿರು ಬಣ್ಣದ ಮಂಜು ಗೆದ್ದರು. ಗೆದ್ದ ಮಂಜು ಟೀಂ ಚೈತ್ರಾ ಅವರ ನೀಲಿ ತಂಡವನ್ನು ಮುಂದಿನ ಆಟದಲ್ಲಿ ಹೊರಗಿಟ್ಟಿತು. ಫೈನಲ್ ಚೆಂಡಿನಾಟದಲ್ಲಿ ಭವ್ಯಾ ಮತ್ತು ಐಶ್ವರ್ಯಾ ಆಡಿ ಹಸಿರು ತಂಡ ಗೆದ್ದಿತು. ಈಗ ಪವರ್ ಕಾರ್ಡ್ ಆಯ್ಕೆ ಮಾಡುವ ಅಧಿಕಾರ ಮಂಜು ಅವರ ಹಸಿರು ತಂಡಕ್ಕೆ ಸಿಕ್ಕಿತು.
ಡಿ ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆ ತಂತ್ರ ಮತ್ತು ಆದಾಯ
ಟಾಸ್ಕ್ ನಲ್ಲಿ ಹಳದಿ ಮತ್ತು ಹಸಿರು ಬಣ್ಣದ ಟೀಂ ಒಂದಾಗಿದ್ದಕ್ಕೆ ಕೆಂಪು ಮತ್ತು ನೀಲಿ ಟೀಂ ಇದು ನಿಯತ್ತಿನ ಆಟವಲ್ಲ ಎಂದು ಗಲಾಟೆ ನಡೆಸಿದರು. ನಿಮ್ಮ ಕ್ಯಾಪ್ಟನ್ಸಿಗೆ ಇದು ಸರಿಯಲ್ಲ ಎಂದು ಹನುಮಂತ ಮೇಲೆ ರೇಗಾಡಿದರು. ಹನುಮಂತ ಮಾತ್ರ ಯಾವುದೇ ಜಗಳಕ್ಕೆ ನಿಲ್ಲದೆ ಬಿಗ್‌ಬಾಸ್ ಬಳಿ ಕೇಳಿ ಎಂದು ನಕ್ಕು ಸರಿ ಮಾಡಿದರು. ಮಂಜು ಮೇಲೆ ಆತ್ಮೀಯರು ಎನಿಸಿಕೊಂಡ ಗೌತಮಿ ಮತ್ತು ಮೋಕ್ಷಿತಾ ಅಸಮಾಧಾನ ಹೊರಹಾಕಿದರು.
ಇನ್ನು ಗೆದ್ದ ಮಂಜು ಅವರ ಹಸಿರು ಟೀಂ ಕಿಕ್ ಔಟ್ ತಂಡವನ್ನು ಆಯ್ಕೆ ಮಾಡಿ ಸೋತ ತಂಡದಿಂದ ಗೌತಮಿ ತಂಡವನ್ನು ಹೊರಗಿಡಲು ಅನ್ನು ಬಳಸಿತು. ಬಿಗ್‌ಬಾಸ್ ಯೋಚಿಸಿ ಕಾರ್ಡ್ ಆಯ್ಕೆ ಮಾಡಿಕೊಳ್ಳಿ ಎಂದು ಮೊದಲೇ ಹೇಳಿತ್ತು. ಆದರೆ ಮಂಜು ಆಯ್ಕೆಯನ್ನು ಹನುಮಂತು ಒಪ್ಪದೆ ಹೊರಗಿಟ್ಟ ಗೌತಮಿ ಟೀಂ ಅವರನ್ನು ಸ್ಟ್ರಾಂಗ್ ಆಟಗಾರರು ಇರಬೇಕೆಂದು ಆಟಕ್ಕೆ ಸೇರಿಸಿಕೊಂಡು, ಚೈತ್ರಾ ಅವರ ಟೀಂ ಅನ್ನು ಹೊರಗಿಟ್ಟರು.
ನಂತರ ನಡೆದ ಎರಡನೇ ಟಾಸ್ಕ್ "ತವರಿನ ಸಿರಿ" ಇದರಲ್ಲಿ ಮರದ ತುಂಡುಗಳನ್ನು ಜೋಡಿಸುವುದು ಮತ್ತು ಹಗ್ಗದಿಂದ ಬ್ಯಾಲೆನ್ಸ್ ಮಾಡುವುದಾಗಿತ್ತು. ಆಡಿದ ಆಟದಲ್ಲಿ ಗೌತಮಿ ಅವರ ಟೀಂ ಗೆದ್ದಿತು. ಅವರು ಇಮ್ಯೂನಿಟಿ ಕಾರ್ಡ್ ಬಳಸಿ ಅನುಷಾ ಅವರನ್ನು ಸೇವ್ ಮಾಡಿದರು. ಕ್ಯಾಪ್ಟನ್ ಹನುಮಂತುಗೆ ಸೋತ ತಂಡದಿಂದ ಮೂವರನ್ನು ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್‌ಬಾಸ್ ಕೊಟ್ಟರು. ಗೌತಮಿ ಅವರ ತಂಡವನ್ನು ಬಿಟ್ಟು ಮಿಕ್ಕ ಮೂರು ಟೀಂ ನಿಂದ ಒಬ್ಬೊಂಬ್ಬರಂತೆ ಮೋಕ್ಷಿತಾ, ಗೋಲ್ಡ್ ಸುರೇಶ್ ಮತ್ತು ಧನ್‌ರಾಜ್ ಅವರನ್ನು ನಾಮಿನೇಟ್ ಮಾಡಿದರು. ಇದರಲ್ಲಿ ಆತ್ಮೀಯ ಧನ್‌ರಾಜ್ ಅವರನ್ನು ನಾಮಿನೇಟ್ ಮಾಡಿದ್ದು, ಆಶ್ಚರ್ಯ ಎನಿಸಿತು.
ಹನುಮಂತು ಆಟದ ವೈಖರಿ ಇತ್ತೀಚೆಗೆ ಎಲ್ಲರಿಗೂ ಇಷ್ಟವಾಗುತ್ತಿದೆ. ಹಾಡು, ತಮಾಷೆಯಿಂದ ಮನೋರಂಜನೆ ಕೂಡ ಸಿಗುತ್ತಿದೆ. ಕಳೆದ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಆಟವನ್ನು ಅರ್ಥಮಾಡಿಕೊಂಡಿರುವುದು ಹನುಮಂತ ಮಾತ್ರ ನನ್ನ ಪ್ರಕಾರ ಎಂದಿದ್ದರು. ಇದು ನಿಜ ಎಂದು ಅನ್ನಿಸುತ್ತಿದೆ. ಇದರ ಜೊತೆಗೆ ಮೊದಲ ಬಾರಿಗೆ ಈ ಸೀಸನ್ ಕಿಚ್ಚನ ಚಪ್ಪಾಳೆ ಕೂಡ ಹನುಮಂತಗೆ ಸಿಕ್ಕಿತ್ತು. ಇದೆಲ್ಲವನ್ನು ಗಮನಿಸಿದರೆ ಹನುಮಂತನಷ್ಟು ಉತ್ತಮ ರೀತಿ ಆಟವನ್ನು ಅರ್ಥ ಮಾಡಿಕೊಂಡವರು ಯಾರು ಇಲ್ಲ ಎಂಬುದು ಗಮನಕ್ಕೆ ಬರುತ್ತಿದೆ.