ಈ ಬಾರಿ ಲೋಕಸಭೆಯಲ್ಲಿ ಅದೃಷ್ಟ ಪರೀಕ್ಷೆ ಮಾಡ್ತಾರಾ ಸಿ.ಟಿ.ರವಿ? ಯಾವ ಕ್ಷೇತ್ರದಿಂದ ಕಣಕ್ಕೆ?

Dec 20, 2023, 10:05 AM IST

ಬೆಂಗಳೂರು (ಡಿ.20): ಮುಂಬರುವ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಮೇಲೆ ಸಿ.ಟಿ.ರವಿ ಕಣ್ಣಿಟ್ಟಿದ್ದಾರೆ. ಹಾಲಿ ಸಂಸದ ಸದಾನಂದಗೌಡ ಚುನಾವಣಾ ರಾಜಕೀಯಕ್ಕೆ ಗುಡ್ಬೈ ಹೇಳಿದ್ದರಿಂದ ಅವರ ಜಾಗದಲ್ಲಿ ಟಿಕೆಟ್ ಪಡೆಯುವ ಲೆಕ್ಕಾಚಾರ ಸಿ.ಟಿ.ರವಿಯದ್ದು. ಒಕ್ಕಲಿಗರ ಭದ್ರಕೋಟೆಯಾಗಿರುವ ಬೆಂ. ಉತ್ತರ ಲೋಕಸಭಾ ಕ್ಷೇತ್ರವು 2004ರಿಂದ ಬಿಜೆಪಿ ಹಿಡಿತದಲ್ಲಿದೆ. 2014, 2019ರಲ್ಲಿ ಬೆಂಗಳೂರು ಉತ್ತರದಿಂದ ಡಿವಿಎಸ್ ಸ್ಪರ್ಧಿಸಿದ್ದರು. ಚಿಕ್ಕಮಗಳೂರು-ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಹಾಲಿ ಸಂಸದೆಯಾಗಿದ್ದು, ಮೂಲತಃ ಕರಾವಳಿ ಭಾಗದವರು. ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆ ಮಾಡುವುದು ಅನುಮಾನವಾಗಿದೆ. ಸದ್ಯ ಬೆಂಗಳೂರು ಉತ್ತರದ ಕಡೆ ಕಣ್ಣಿಟ್ಟಿರುವ ಮಾಜಿ ಸಚಿವ ಸಿ.ಟಿ ರವಿ ವಿಧಾನಸಭೆ ಸೋಲಿನ ಬಳಿಕ ಬೆಂಗಳೂರಿನಲ್ಲಿ ಆ್ಯಕ್ಟೀವ್ ಆಗಿದ್ದು, ಬೆಂಗಳೂರಿನ ಬಿಜೆಪಿಯ ಎಲ್ಲಾ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. 

ಬೆಂಗಳೂರು ಉತ್ತರ ಬಿಜೆಪಿ ಭದ್ರಕೋಟೆ
2004-ಎಸ್.ಟಿ ಸಾಂಗ್ಲಿಯಾನ
2009-ಡಿ.ಬಿ ಚಂದ್ರೇಗೌಡ
2014-ಡಿ.ವಿ ಸದಾನಂದಗೌಡ
2019-ಡಿ.ವಿ ಸದಾನಂದಗೌಡ

ಬೆಂಗಳೂರು ಉತ್ತರ ಲೋಕಸಭಾ-2019
ಡಿ.ವಿ ಸದಾನಂದಗೌಡ- ಬಿಜೆಪಿ-8,24,500
ಕೃಷ್ಣ ಭೈರೇಗೌಡ-ಕಾಂಗ್ರೆಸ್-6,76,982
ಗೆಲುವಿನ ಅಂತರ-1,47,518

ಚಿಕ್ಕಮಗಳೂರು ವಿಧಾನಸಭೆ - 2023
ಹೆಚ್.ಡಿ ತಮ್ಮಯ್ಯ-ಕಾಂಗ್ರೆಸ್-85,054
ಸಿ.ಟಿ ರವಿ-ಬಿಜೆಪಿ-79,128
ಗೆಲುವಿನ ಅಂತರ-5,926