ಕೆಪಿಟಿಸಿಎಲ್ ಸಂಸ್ಥೆಯು 66/11 ಕೆ.ವಿ 'ಸಿ' ಸ್ಟೇಷನ್ ಹಾಗೂ ವಿಕ್ಟೋರಿಯಾ ಸ್ಟೇಷನ್‌ಗಳಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವಸಂತನಗರ ಸುತ್ತಮುತ್ತ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದ ಬೆಸ್ಕಾಂ
ಬೆಂಗಳೂರು(ಅ.26): ಕೆಪಿಟಿಸಿಎಲ್ ಸಂಸ್ಥೆಯು 66/11 ಕೆ.ವಿ 'ಸಿ' ಸ್ಟೇಷನ್ ಹಾಗೂ ವಿಕ್ಟೋರಿಯಾ ಸ್ಟೇಷನ್‌ಗಳಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವಸಂತನಗರ ಸುತ್ತಮುತ್ತ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿಕ್ಟೋರಿಯಾ ಆಸ್ಪತ್ರೆ ವ್ಯಾಪ್ತಿಯ ನೆಪ್ರೋ ಇನ್ ಸ್ಟಿಟ್ಯೂಟ್, ಮಿಂಟೋ ಕಣ್ಣಿನ ಆಸ್ಪತ್ರೆ, ಗ್ಯಾಸ್ಕೋ ಎಂಟರಾಲಜಿ ಆಸ್ಪತ್ರೆ, ಅಲೈಡ್ ಆಸ್ಪತ್ರೆ, ಕೆ.ಆರ್.ರಸ್ತೆ, ಎಸ್.ಪಿ. ರಸ್ತೆ, ಎಸ್‌ಜೆಪಿ ರಸ್ತೆ, ಚಿಕ್ಕಪೇಟೆ, ಚಿಕ್ಕಪೇಟೆ ಮುಖ್ಯ ರಸ್ತೆ, ಒಟಿಸಿ ರಸ್ತೆ, ಗೋಡೌನ್ ರಸ್ತೆ, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್‌ರಸ್ತೆ, ನಗರ್ತಪೇಟೆ, ತಿಗಳರಪೇಟೆ,ಎನ್.ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಎಂಟಿಬಿ ರಸ್ತೆ, ಕುಂಬಾರ ಕಾಂಪ್ಲೆಕ್ಸ್. ಕೋಟೆ ಬೀದಿ, ಹಳೆ ಕಸಾಯಿಖಾನೆ, ಮಾಮೂಲ್‌ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ನಾಳೆ ಬೆಂಗ್ಳೂರಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೂ ಕರೆಂಟ್ ಇರಲ್ಲ!
ಬೆವಿಕಂ ವಸಂತನಗರ ಸುತ್ತಮುತ್ತ ವ್ಯತ್ಯಯ:
ಇನ್ನು ಸಿ ಸ್ಟೇಷನ್ ನಿರ್ವಹಣೆ ಕಾಮಗಾರಿ ಯಿಂದಾಗಿ ಶಾಸಕರ ಭವನ, ಕೆಪಿಸಿಸಿ ಕಚೇರಿ, ಕೆಪಿಎಸ್‌ಸಿ, ಇಂಡಿಯನ್ ಎಕ್ ಪ್ರೆಸ್, ಕನ್ನಿಂಗ್‌ಹ್ಯಾಂ ರಸ್ತೆ, ಆಲಿ ಆಸ್ಕರ್ ರಸ್ತೆ, ಕ್ರೀನ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ, ಇನ್‌ಫ್ಯಾಂಟ್ರಿ ರಸ್ತೆ, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಆಯುಕ್ತರ ಕಚೇರಿ, ಪಾಯಪ್ಪ ಗಾರ್ಡನ್, ಚಾಂದಿನಿ ಚೌಕ್, ಜಸ್ಮಾಭವನ ರಸ್ತೆ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಬ್ರಾಡ್ ವೇ ರಸ್ತೆ, ಸ್ಟೇಷನ್ ರಸ್ತೆ, ಕ್ಲೀನ್ಸ್ ರಸ್ತೆ, ಮಿಲ್ಲರ್ಸ್ ರಸ್ತೆ, ಸ್ಟಾಟರ್‌ಹೌಸ್, ಜಂಬೂ ಬಜಾರ್ ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್ ರಸ್ತೆ, ನಳರಸ್ತೆ ಸುತ್ತ ಮುತ್ತ ವಿದ್ಯುತ್ ಪೂರೈಕೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.