
ತಿರುಪತಿ: ವಿಮಾನ ಸ್ಫೋಟದ ಸರಣಿ ಬೆದರಿಕೆ ನಡುವೆಯೇ ಇದೀಗ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಸಮೀಪದ 3 ಹೋಟೆಲ್‌ಗಳಿಗೆ ಇ-ಮೇಲ್ ಮೂಲಕ ಗುರುವಾರ ಬಾಂಬ್ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿದ್ದು ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದೆ.
ಲೀಲಾ ಮಹಲ್, ಕಪಿಲಾ ತೀರ್ಥಂ ಹಾಗೂ ಅಲೀಪೀರಿ ಪ್ರದೇಶದ 3 ಖಾಸಗಿ ಹೋಟೆಲ್‌ಗಳಿಗೆ, ‘ಈ ಹೋಟೆಲ್‌ಗಳಲ್ಲಿ ಸುಧಾರಿತ ಇಡಿ ಸ್ಫೋಟಕಗಳನ್ನು ಪಾಕ್‌ನ ಐಎಸ್‌ಐ ಸಕ್ರಿಯಗೊಳಿಸಲಿದ್ದು, ರಾತ್ರಿ 11ರೊಳಗೆ ಜಾಗ ಖಾಲಿ ಮಾಡಿ. ತಮಿಳುನಾಡು ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ’ ಎಂಬ ಸಂದೇಶವನ್ನು ಅ.24ರ ಸಂಜೆ ರವಾನಿಸಲಾಗಿತ್ತು.
ಮತ್ತೆ 79 ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ: ಕಿಡಿಗೇಡಿಗಳ ಕೃತ್ಯಕ್ಕೆ 600 ಕೋಟಿ ನಷ್ಟ!
ಜೊತೆಗೆ, ‘ಡಿಎಂಕೆಯ ಜಾಫರ್ ಸಾದಿಕ್ ಬಂಧನದಿಂದ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚಿದ್ದು, ಈ ಪ್ರಕರಣದಲ್ಲಿ ಸಿಎಂ ಸ್ಟಾಲಿನ್ ಪರಿವಾರದ ಪಾತ್ರದ ಕಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಸ್ಫೋಟಗಳು ಅಗತ್ಯ’ ಎಂದೂ ಬರೆಯಲಾಗಿತ್ತು. ಡಿಎಂಕೆ ನಾಯಕ ಸಾದಿಕ್‌ನನ್ನು ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ : ಕಠಿಣ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ