71 ಔಷಧ ಗುಣಮಟ್ಟ ಕಳಪೆ, ಪಟ್ಟಿಯಲ್ಲಿ ಕೆಮ್ಮಿನ ಔಷಧ, ಕಣ್ಣಿನ ಡ್ರಾಪ್: ಸರ್ಕಾರ ವರದಿ 

By Kannadaprabha News  |  First Published Oct 26, 2024, 7:53 AM IST

ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ನಡೆಸಿದ ಪರೀಕ್ಷೆಯಲ್ಲಿ 71 ಔಷಧಗಳು ಕಳಪೆ ಗುಣಮಟ್ಟದವು ಎಂದು ಕಂಡುಬಂದಿದೆ. ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್, ಕ್ಯಾಲ್ಸಿಯಂ ಮಾತ್ರೆಗಳು ಸೇರಿವೆ.


ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ದೇಶವ್ಯಾಪಿ ನಡೆಸಲಾದ ವಿವಿಧ ಕಂಪನಿಗಳ ವಿವಿಧ ಔಷಧಿಗಳ ಮಾದರಿ ಪರೀಕ್ಷೆ ವೇಳೆ 71 ಔಷಧಗಳು ಕಳಪೆ ಗುಣಮಟ್ಟ ಹೊಂದಿರುವುದು ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ. ಹೀಗೆ ಕಳಪೆ ಗುಣಮಟ್ಟ ಹೊಂದಿದ್ದ ಔಷಧಿಗಳ ಪಟ್ಟಿಯಲ್ಲಿ ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆ, ಸೋಡಿಯಂ ಮಾತ್ರೆ ಗಳು, ಇಂಜೆಕ್ಷನ್ ಸೇರಿವೆ ಎಂದು ಸಂಸ್ಥೆ ಹೇಳಿದೆ. 

ಯಾವ ಕಂಪನಿ ಔಷಧ?:
ಫರೀದಾಬಾದ್‌ನ ಹಿಂದೂಸ್ತಾನ್ ಆ್ಯಂಟಿ ಬಯೋಟಿಕ್ಸ್‌ ಉತ್ಪಾದಿಸಿದ ಮೆಟ್ರೋನಿಡಾಜೋಲ್‌ ಐಪಿ400 ಎಂಜಿ ಮಾತ್ರೆ; ರೈನ್‌ಬೋ ಲೈಫ್ ಸೈನ್ಸ್‌ನ ಡೊಮ್‌ಪೆರಿಡಾನ್ ಸಸ್ಪೆಷನ್ಸ್: ಪುಷ್ಕರ್ ಫಾರ್ಮಾದ ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ. 5 ಐಯು/1ಎಂಎಲ್ ; ಮಾರ್ಟಿನ್ ಆ್ಯಂಡ್ ಬ್ರೌನ್ ಕಂಪನಿಯ ಕ್ಯಾಲ್ಸಿಯಂ ಗ್ಲುಕೋನೇಟ್ ಇಂಜೆಕ್ಷನ್; ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್‌ನ ಕ್ಯಾಲ್ಸಿಯಂ 500 ಎಂಜಿ ಮತ್ತು ವಿಟಮಿನ್ ಡಿ3 250 ಐಯು ಮಾತೆ ಸೇರಿವೆ. 

Tap to resize

Latest Videos

ಕರ್ನಾಟಕದ ಪ್ಯಾರಾಸಿಟಮಾಲ್‌ ಸೇರಿ 53 ಔಷಧಗಳ ಗುಣಮಟ್ಟ ಕಳಪೆ: ಆಘಾತಕಾರಿ ವರದಿ ಬಹಿರಂಗ

click me!