ಪ್ರತ್ಯೇಕ ಮುಸ್ಲಿಮ್ ಕಾಲೇಜು, ರೌಡಿ ಶೀಟರ್ ರಾಜಕೀಯ, ಬಿಜೆಪಿಗೆ ಹೊಸ ಸಂಕಷ್ಟ!

Dec 1, 2022, 10:45 PM IST

ವಕ್ಫ್ ಬೋರ್ಡ್ ಮುಸ್ಲಿಮ್ ಮಹಿಳಾ ಕಾಲೇಜು ಆರಂಭಿಸಿರುವ ವಕ್ಫ್ ಬೋರ್ಡ್ ನಿರ್ಧರಿಸಿದೆ. ಆರಂಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿದೆ ಅನ್ನೋ ಮಾಹಿತಿಗಳು ಹರಿದಾಡಿದೆ. ಇದರ ಬೆನ್ನಲ್ಲೇ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಮುಸ್ಲಿಮ್ ಪ್ರತ್ಯೇಕ ಕಾಲೇಜಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.ಇದರ ಪರಿಣಾಮ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ್ದಾರೆ. ಇತ್ತ ವಕ್ಫ್ ಬೋರ್ಡ್ ಯೂ ಟರ್ನ್ ಹೊಡೆದಿದೆ. ಇತ್ತ ರಾಜ್ಯ ರಾಜಕೀಯದಲ್ಲಿ ಇದೀಗ ರೌಡಿ ಶೀಟರ್ ವಿವಾದ ಹುಟ್ಟಿಕೊಂಡಿದೆ. ಇತ್ತೀಚೆಗೆ ಚಾಮರಾಜನಗರದಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡ ಬೆನ್ನಲ್ಲೇ ವಿಲ್ಸನ್ ಗಾರ್ಡ್ ನಾಗ ಸಚಿವ ವಿ ಸೋಮಣ್ಣ ಭೇಟಿಯಾದ ವಿಡಿಯೋ ಹೊರಬಿದ್ದಿದೆ. ಇದರ ಬೆನ್ನಲ್ಲೇ ವಿವಾದ ಜೋರಾಗಿದೆ.