ಮೋದಿ VS ರಾಹುಲ್..ಯಾರು ಪಾಪ್ಯುಲರ್..? ಇನ್ಸ್ಟಾಗ್ರಾಮ್‌ನಲ್ಲಿ ಕೋಟಿ ವೀಕ್ಷಣೆ ಯಾರ ವಿಡಿಯೋಗೆ..?

Aug 14, 2023, 12:41 PM IST

ಸೋಶಿಯಲ್ ಮೀಡಿಯಾ ನಮ್ಮೆಲ್ಲರ ಬದುಕಿನ  ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಒಂದಿಲ್ಲೊಂದು ವೇದಿಕೆಯಲ್ಲಿ ಒಬ್ಬರಲ್ಲಾ ಒಬ್ಬರು ತುಂಬಾನೇ ಬ್ಯುಸಿ ಆಗಿರ್ತಾರೆ. ಕೆಲವರಿಗೆ ಫೇಸ್‌ಬುಕ್(Facebook), ಟ್ವಿಟರ್ ಇಷ್ಟವಾದ್ರೆ, ಇನ್ನಷ್ಟು ಜನರಿಗೆ ಇನ್‌ಸ್ಟಾಗ್ರಾಮ್‌, ಯುಟ್ಯೂಬ್ ನೆಚ್ಚಿನ ಆನ್ ಲೈನ್ ಪ್ಲಾಟ್ ಫಾರ್ಮ್ ಆಗಿರುತ್ತೆ. ಎಲ್ಲಾ ಕಡೆಗಳಲ್ಲಿ ಜಗಳವಂತೂ ಕಾಮನ್. ಆದರೆ ಈಗ ರಾಷ್ಟ್ಟೀಯ ಪಕ್ಷಗಳಾದ ಬಿಜೆಪಿ(BJp) ಹಾಗೂ ಕಾಂಗ್ರೆಸ್(Congress) ಇದೇ ಸೋಶಿಯಲ್ ಮೀಡಿಯಾ ವಿಚಾರಕ್ಕೆ ಕಿತ್ತಾಡುತ್ತಿವೆ. ಸೋಶಿಯಲ್ ಮೀಡಿಯಾ ಅನ್ನೋದು ನಮ್ಮ ಬದುಕಿನ ಭಾಗವೇ ಆಗಿದೆ. ನಮ್ಮ ವಿಚಾರಗಳನ್ನ ಹಂಚಿಕೊಳ್ಳೋಕೆ , ಹೊಸ ಜನರನ್ನ ಸಂಪರ್ಕಿಸೋಕೆ, ವಿಷಯಗಳನ್ನ ತಿಳಿದುಕೊಳ್ಳೋಕೆ ಉತ್ತಮ ವೇದಿಕೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಹಾಗೇ ಸೋಶಿಯಲ್ ಮೀಡಿಯಾ ಅನ್ನೋದು ಒಂದಲ್ಲ ಒಂದು ಅರ್ಥದಲ್ಲಿ ಯುದ್ಧ ಭೂಮಿಯೂ ಹೌದು. ರಾಜಕೀಯ, ಸಿನಿಮಾ, ಕ್ರಿಕೆಟ್ ಹೀಗೆ ಎಲ್ಲಾ ವಿಚಾರಗಳಿಗೂ ಜಗಳ ಆಗ್ತಾ ಇರೋದು ಕಾಮನ್ ಆಗಿ ಬಿಟ್ಟಿದೆ. ಸೋಶೀಯಲ್ ಮೀಡಿಯಾದಲ್ಲಿ(Social media) ಜಗಳ ಕಾಮನ್ ಆದ್ರೆ ಇಲ್ಲಿ ಸೋಶಿಯಲ್ ಮೀಡಿಯಾ ವಿಚಾರಕ್ಕೆ ಜಗಳ ಆಗ್ತಿದೆ ಅನ್ನೋದು ವಿಶೇಷ. ಅಂದ ಹಾಗೇ ಜಗಳ ಮಾಡಿಕೊಳ್ತಾ ಇರೋ ಜಟ್ಟಿಗಳು ಬೇರೆ ಯಾರೂ ಅಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿ.

ಇದನ್ನೂ ವೀಕ್ಷಿಸಿ:  ಗೋ ಮೂತ್ರದಿಂದ ತಯಾರಾಗುತ್ತೆ ಪೆನಾಯಿಲ್, ಸೆಗಣಿಯಿಂದ ಟೂಥ್ ಪೌಡರ್ !