ಎನ್‌ಫೀಲ್ಡ್ ಗತ್ತು, ಬುಲೆಟ್ ವಿನ್ಯಾಸ; ಅತೀ ಕಡಿಮೆ ದರದ ಟಿವಿಎಸ್ ರೊನಿನ್‌ಗೆ ಭಾರಿ ಬೇಡಿಕೆ!

First Published Oct 28, 2024, 3:31 PM IST

ರಾಯಲ್ ಎನ್‌ಫೀಲ್ಡ್, ಜಾವ ಸೇರಿದಂತೆ ಯಾವುದೇ ಬುಲೆಟ್ ವಿನ್ಯಾಸದ ಬೈಕ್ ಆರಂಭಿಕ ಬೆಲೆ 2 ಲಕ್ಷ ರೂಪಾಯಿಗಿಂತ ಅಧಿಕ. ಆದರೆ ಹಬ್ಬದ ಸಂಭ್ರಮಕ್ಕೆ ಟಿವಿಎಸ್ ತನ್ನ ಅತ್ಯಾಕರ್ಷಕ ಹಾಗೂ ಉತ್ತಮ ಪರ್ಫಾಮೆನ್ಸ್ ರೊನಿನ್ ಬೈಕ್ ಬೆಲೆ ಕಡಿತಗೊಳಿಸಿದೆ. ಪರಿಣಾಮ ಇದರ ಬೆಲೆ ಕೇವಲ 1.35 ಲಕ್ಷ ರೂ ಮಾತ್ರ.

ಬುಲೆಟ್ ಶೈಲಿಯ ಬೈಕ್ ಮೇಲೆ ಎಲ್ಲರಿಗೂ ಆಸಕ್ತಿ. ರಾಯಲ್ ಎನ್‌ಫೀಲ್ಡ್, ಜಾವಾ, ಯೆಜೆಡಿ, ಹೋಂಡಾ ಸೇರಿದಂತೆ ಕೆಲ ವಿಶೇಷ ಬೈಕ್‌ಗಳು ಲಭ್ಯವಿದೆ. ಆದರೆ ಇವುಗಳ ಬೆಲೆ ದುಬಾರಿ. ಆದರೆ ಕಡಿಮೆ ಬಜೆಟ್‌ನಲ್ಲಿ ಬುಲೆಟ್ ರೀತಿಯ ವಿನ್ಯಾಸ, ಉತ್ತಮ ಪರ್ಫಾಮೆನ್ಸ್, 225 ಸಿಸಿ ಎಂಜಿನ್ ಸೇರಿದಂತೆ ಹಲವು ವಿಶೇತೆಗಳ ಬೈಕ್ ಲಭ್ಯವಿದೆ. ಇದು ಟಿವಿಎಸ್ ರೊನಿನ್.

ಹಬ್ಬದ ಸಂಭ್ರಮದಲ್ಲಿ ಟಿವಿಎಸ್ ತನ್ನ ರೊನಿನ್ ಬೈಕ್ ಬೆಲೆ ಕಡಿತಗೊಳಿಸಿದೆ. ಕಳೆದ ತಿಂಗಳು 15,000 ರೂಪಾಯಿ ಕಡಿತಗೊಳಿಸಲಾಗಿತ್ತು. ಹೀಗಾಗಿ ಟಿವಿಎಸ್ ರೊನಿನ್ ಬೈಕ್ ಆರಂಭಿಕ ಬೆಲೆ 1.35 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೀಗಾಗಿ ಕೈಗೆಟುಕುವ ದರದಲ್ಲಿ 200ಸಿಸಿಗಿಂತ ಹೆಚ್ಚಿನ ಎಂಜಿನ್ ಪರ್ಫಾಮೆನ್ಸ್ ಹೊಂದಿರು ಬೈಕ್ ರೊನಿನ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. 

Latest Videos


ರೊನಿನ್ ಬೈಕ್ ಖರೀದಿಸಲು ಇದೀಗ ಜನ ಮುಗಿ ಬೀಳುತ್ತಿದ್ದಾರೆ. ಇದು ನೇರವಾಗಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಹಬ್ಬದ ಸಂಭ್ರಮದಲ್ಲಿ ರೊನಿನ್ ಕೈಗೆಟುಕವ ದರದಲ್ಲಿ ಬೈಕ್ ಮಾರಾಟ ಮಾಡುತ್ತಿದೆ. ವಿವಿಧ ಬಣ್ಮಗಳಲ್ಲಿ ಲಭ್ಯವಿರುವ ರೊನಿನ್ ಹಲವು ವಿಶೇಷತೆ ಹೊಂದಿದೆ. DRL, LED ಟೈಲ್ ಲೈಟ್, ಸಿಂಗಲ್ ಪಾಡ್ LCD ಹಾಗೂ ಬ್ಲೂಟೂತ್ ಸಂಪರ್ಕ ಫೀಚರ್ ಕೂಡ ಈ ಬೈಕ್‌ನಲ್ಲಿದೆ.

ಟಿವಿಎಸ್ ರೊನಿನ್ ಬೈಕ್ 225.9ಸಿಸಿ ಎಂಜಿನ್ ಹೊಂದಿದೆ. ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್, 20.1 ಬಿಹೆಚ್‌ಪಿ ಹಾಗೂ 19.93 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರವ ರೊನಿನ್ ಯುವ ಸಮೂಹದ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. 

ಟಿವಿಎಸ್ ರೊನಿನ್ ಬೈಕ್ ಮುಂಭಾಗದಲ್ಲಿ 300mm ಪೆಟಲ್ ಡಿಸ್ಕ್, ರೇರ್‌ನಲ್ಲಿ 240mm ಪೆಟಲ್ ಡಿಸ್ಕ್ ಬ್ರೇಕ್ ಹೊಂದಿದೆ. ಡ್ಯುಯೆಲ್ ಚಾನೆಲ್ ಎಬಿಸ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಹೆಚ್ಚಿನ ಸುರಕ್ಷತಾ ಫೀಚರ್ ಹೊಂದಿರುವ ರೊನಿನ್ ಮಾರಾಟದಲ್ಲೂ ದಾಖಲೆ ಬರೆಯುತ್ತಿದೆ. ಹಬ್ಬದ ಸಂಭ್ರಮದಲ್ಲಿ ಬೆಲೆ ಕಡಿತ ಬಳಿಕ ರೊನಿನ್ ಬುಕಿಂಗ್ ಹೆಚ್ಚಾಗಿದೆ.

click me!