ಗೋಡೆ ಮೇಲೆ ಟೇಪ್ ಹಚ್ಚಿದ ಬಾಳೆಹಣ್ಣು 12 ಕೋಟಿಗೆ ಹರಾಜು! ನಂಬಲಾಸಾಧ್ಯವಾದ್ರೂ ಸತ್ಯ ಇದು. ಏನಿದು ಸ್ಟೋರಿ ನೋಡಿ...
ತುಂಬಾ ಹಿಂದಿನಿಂದಲೂ ಒಂದು ಜೋಕ್ ಇದೆ, ಅದೇನೆಂದರೆ, ಪೇಂಟಿಂಗ್ ಕಾಂಪಿಟೇಷನ್ ಸಂದರ್ಭದಲ್ಲಿ ಕಸಗುಡಿಸುವವಳು ಟೇಬಲ್ ಅಲ್ಲಾಡಿಸಿದ್ದರಿಂದ ಬಣ್ಣವೆಲ್ಲಾ ಚೆಲ್ಲಿ ಹೋಯ್ತು. ಕೊನೆಗೆ ಮಾಡರ್ನ್ ಆರ್ಟ್ ಎಂದು ಅದಕ್ಕೇ ಮೊದಲ ಬಹುಮಾನ ಬಂತು ಎಂದು! ಮಾಡರ್ನ್ ಆರ್ಟ್ ಬಗ್ಗೆ ಅರ್ಥ ಆಗದವರು ಮಾಡಿರುವ ಜೋಕ್ ಇದು ಎನ್ನಿ. ಅದರೆ ಕೆಲವು ಕಲಾಕೃತಿಗಳೇ ಹಾಗೆ. ಕೆಲವೊಮ್ಮೆ ವಿಚಿತ್ರ ಎನಿಸುವ ಕಲಾಕೃತಿಗಳು ಭಾರಿ ಮೊತ್ತದಲ್ಲಿ ಮಾರಾಟವಾದರೆ, ಮತ್ತೆ ಕೆಲವೊಮ್ಮೆ ಕಲಾವಿದರ ಹೆಸರು ಕೇಳಿದಾಕ್ಷಣ ಅವರ ಕಲಾಕೃತಿಗಳು ಕಂಡಿಯರದ ರೀತಿಯಲ್ಲಿ ಹಜಾರು, ಮಾರಾಟ ಆಗುವುದು ಉಂಟು. ಇದೀಗ ಅಂಥದ್ದೇ ಒಂದು ಕುತೂಹಲದ ಘಟನೆ ನಡೆದಿದೆ. ಗೋಡೆಯ ಮೇಲೆ ಟೇಪ್ನಿಂದ ಅಂಟಿಸಿರುವ ಬಾಳೆಹಣ್ಣು ಒಂದೂವರೆ ಮಿಲಿಯನ್ ಡಾಲರ್ ಅಂದರೆ ಸುಮಾರು 12 ಕೋಟಿ ರೂ! 12 ಕೋಟಿ ರೂಪಾಯಿಗೆ ಹರಾಜು ಆಗಿದೆ!
ಹಾಗೆಂದು ಇದೇನು ಚಿನ್ನದ್ದೋ, ವಜ್ರದ್ದೋ, ಬೆಳ್ಳಿಯದ್ದೋ ಅಥವಾ ಕೃತಕದ್ದೋ ಅಲ್ಲವೇ ಅಲ್ಲ. ಗಿಡದಲ್ಲಿ ಬಿಟ್ಟಿರುವ ನಿಜವಾದ ಬಾಳೆಹಣ್ಣೇ. ಹೌದು. ಆದ್ರೂ 12 ಕೋಟಿ ರೂಪಾಯಿಗೆ ಇದು ಹರಾಜು ಆಗಿದೆ ಅಂದ ಮೇಲೆ ಏನೋ ವಿಶೇಷ ಇರಲೇಬೇಕಲ್ವಾ? ಅಂದಹಾಗೆ ಇದು ನಡೆದಿರುವುದು ಇಟಲಿಯಲ್ಲಿ. ಇಟಲಿಯ ಕಲಾವಿದ ಮೌರಿಜೀಯೋ ಕ್ಯಾಟೆಲನ್ (Maurizio Cattelan) ಎಂಬಾತನ ಕಲಾಕೃತಿ ಇದು. ಇದು ಕಲಾಕೃತಿ ಎನ್ನುವುದಕ್ಕಿಂತ ಒಂದು ಬಾಳೆಹಣ್ಣನ್ನು ಟೇಪ್ ಹಚ್ಚಿ ಗೋಡೆ ಮೇಲೆ ಇಡಲಾಗಿದೆ ಎಂದರೆ ತಪ್ಪಲ್ಲ. ಇದಕ್ಕೆ ಅವರು ಇಟ್ಟಿರುವ ಹೆಸರು ಕಮೀಡಿಯನ್ (Comedian). 2019ರಲ್ಲಿ ಈ ಕಲಾಕೃತಿ 85 ಲಕ್ಷ ರೂಪಾಯಿಗೆ ಈಗ ಅಂದರೆ 2024ರಲ್ಲಿ ಇದರ ಬೆಲೆ ಸುಮಾರು 12 ಪಟ್ಟು ಹೆಚ್ಚಾಗಿದೆ. ಮತ್ತೊಮ್ಮೆ ಅದೇ ರೀತಿ ಕಲಾಕೃತಿ ಇಟ್ಟಿದ್ದು, ಈ ಬಾರಿ 12 ಕೋಟಿ ರೂಪಾಯಿಗೆ ಹರಾಜಾಗಿದೆ. ಈ ಹರಾಜಿನ ವಿಜೇತರಿಗೆ ಸಿಗುವುದು ಬಾಳೆಹಣ್ಣು, ಅದಕ್ಕೆ ಅಂಟಿಸಿರುವ ಟೇಪ್ ರೋಲ್ ಮತ್ತು ದೃಢೀಕರಣದ ಪ್ರಮಾಣ ಪತ್ರ ಅಷ್ಟೇ.
undefined
ಮದ್ವೆ ಬಗ್ಗೆ ಅವಾರ್ಡ್ ಪಂಕ್ಷನ್ನಲ್ಲಿ ಕೊನೆಗೂ ಗುಟ್ಟು ಬಿಚ್ಚಿಟ್ಟ ಆ್ಯಂಕರ್ ಅನುಶ್ರೀ! ಕುಣಿದು ಕುಪ್ಪಳಿಸಿದ ಅಕುಲ್ ಬಾಲಾಜಿ..
ಹಾಗಿದ್ದರೆ ಏನಿದರ ವಿಶೇಷತೆ ಎಂದು ಕೇಳಬಹುದು. ವಿಶೇಷತೆ ಏನೂ ಇಲ್ಲ. ಬಾಳೆಹಣ್ಣು ಎಂದ ಮೇಲೆ ಅದು ಕೊಳೆಯದೇ ಇರತ್ತಾ? ಇದನ್ನು ಖರೀದಿ ಮಾಡಿದವರು, ಬಾಳೆಹಣ್ಣನ್ನು ಬದಲಿಸಿ ಬೇರೆ ಬಾಳೆಹಣ್ಣನ್ನು ತಮ್ಮ ಗೋಡೆಗೆ ಅದೇ ಟೇಪ್ನಲ್ಲಿ ಅಂಟಿಸಬಹುದು ಅಷ್ಟೇ. ಆದರೆ ಇದು ಖ್ಯಾತ ಕಲಾವಿದ ಮೌರಿಜೀಯೋ ಕ್ಯಾಟೆಲನ್ ಅವರ ಕಲಾಕೃತಿಯಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಇಷ್ಟು ಡಿಮಾಂಡ್ ಅಷ್ಟೇ. ಇವರು ಇದಾಗಲೇ ಸಾಕಷ್ಟು ಕುತೂಹಲ ಹಾಗೂ ಭಾರಿ ಬೇಡಿಕೆಯಿರುವ ಬೆಲೆ ಬಾಳುವ ಕಲಾಕೃತಿಗಳನ್ನೂ ರಚಿಸಿದವರು. ಅದರಲ್ಲಿ ಒಂದು ಚಿನ್ನದ ಟಾಯ್ಲೆಟ್ ಸೀಟ್. ಇದನ್ನು ಅವರು ಅಮೆರಿಕದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆ ನೀಡುವ ಮೂಲಕ ಸದ್ದು ಮಾಡಿದ್ದರು. ಇಟಲಿಯಲ್ಲಿ 1960ರಲ್ಲಿ ಜನಿಸಿರುವ ಇವರು ಇದಾಗಲೇ ಸಾಕಷ್ಟು ಈ ರೀತಿಯ ಕಲಾಕೃತಿಗಳನ್ನು ರಚಿಸಿರುವ ಹಿನ್ನೆಲೆಯಲ್ಲಿ ಅವರು ಏನೇ ಮಾಡಿದರೂ ಅದಕ್ಕೆ ಅಷ್ಟು ಡಿಮಾಂಡ್!
ಅವರು ಇಲ್ಲಿ ನಿಜವಾದ ಬಾಳೆಹಣ್ಣು ಇಡುವ ಮೊದಲು ಕಂಚಿನ ಬಾಳೆಹಣ್ಣನ್ನು ತಯಾರಿಸಿದ್ದರಂತೆ. ಆದರೆ ಅದು ಸರಿ ಕಾಣಲಿಲ್ಲವೆಂದು ಕೊನೆಗೆ ನಿಜವಾದ ಬಾಳೆಹಣ್ಣನ್ನು ಖರೀದಿಸಿ ಅದನ್ನು ಡಕ್ಟ್ ಟೇಪ್ನಿಂದ ಅಂಟಿಸಿದ್ದಾರೆ. ಅದು ಇಷ್ಟು ಬೆಲೆಗೆ ಹರಾಜು ಆಗಿದೆ. ಇನ್ನು ಕಲಾವಿದ ಮೌರಿಜೀಯೋ ಕ್ಯಾಟೆಲನ್ ಕುರಿತು ಹೇಳುವುದಾದರೆ, ಅವರ ತಾಯಿ ಸ್ವಚ್ಛತಾ ಸಿಬ್ಬಂದಿ ಮತ್ತು ತಂದೆ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 1980ರ ದಶಕದ ಆರಂಭದಲ್ಲಿ ಮರದ ಪೀಠೋಪಕರಣಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಯಾವುದೇ ಔಪಚಾರಿಕ ತರಬೇತಿ ಪಡೆದೆಯೂ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡರು.
ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್- ತರುಣ್ ಹೇಳಿದ್ದೇನು ಕೇಳಿ...